– ಕ್ರೈಂ ಥ್ರಿಲರ್ ಟಿವಿ ಶೋ ನಿಂದ ಪ್ರೇರಣೆ
– ತನಿಖೆ ವೇಳೆ ರೋಚಕ ರಹಸ್ಯ ಬಯಲು
ನವದೆಹಲಿ: ಪ್ರತಿಷ್ಠಿತ ಟಿ.ವಿ ಕಾರ್ಯಕ್ರಮವೊಂದರಿಂದ (TV Show) ಪ್ರೇರಣೆ ಪಡೆದ ವ್ಯಕ್ತಿಯೊಬ್ಬ ತನ್ನೊಂದಿಗೆ ಕೂಡಿಬಾಳಲು ಒಪ್ಪಿಕೊಳ್ಳದ ಮಾಜಿ ಪತ್ನಿಗೆ ಹೆಚ್‌ಐವಿ ರೋಗಿಯ ರಕ್ತವನ್ನು ಇಂಜೆಕ್ಟ್ ಮಾಡಿರುವ ಘಟನೆ ಗುಜರಾತ್‌ನ (Gujarat) ಸೂರತ್‌ನಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಸೂರತ್ ಪೊಲೀಸರು (Surat Police) ಬಂಧಿಸಿದ್ದಾರೆ. ಬಳಿಕ ತನಿಖೆಯಲ್ಲಿ ಆತ ಕ್ರೈಂ (Crime) ಥ್ರಿಲ್ಲಿಂಗ್ ಟಿವಿ ಶೋ ನಿಂದ ಪ್ರೇರಿತನಾಗಿದ್ದಾನೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಪೆರೋಲ್ ಪಡೆದು ಪರಾರಿಯಾದಾತ ತನ್ನದೇ ಸಾವಿನ ಕತೆ ಕಟ್ಟಿದ – 15 ವರ್ಷಗಳ ಬಳಿಕ ಮತ್ತೆ ಅಂದರ್
ಸಂತ್ರಸ್ತ ಮಹಿಳೆ ಹಾಗೂ ಆರೋಪಿ (Accused) ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಕಳೆದ 2 ತಿಂಗಳಿನಿಂದ ನಿರಂತರ ಜಗಳದಿಂದಾಗಿ ವಿಚ್ಛೇದನ ಪಡೆದು ಇಬ್ಬರೂ ದೂರವಾಗಿದ್ದರು. ಒಂಟಿ ಜೀವನದಿಂದ ಬೇಸತ್ತಿದ್ದ ಆರೋಪಿ ಪತಿ ಮತ್ತೆ ತನ್ನ ಸಂಗಾತಿಯೊಂದಿಗೆ ಕೂಡಿಬಾಳಲು ನಿರ್ಧರಿಸಿದ್ದನು. ಆದ್ರೆ ಇದಕ್ಕೆ ಮಹಿಳೆ ಒಪ್ಪಿಕೊಳ್ಳಲಿಲ್ಲ. ಹಾಗಾಗಿ ಆಕೆ ವಿರುದ್ಧ ಸೇಡು ತೀರಿಸಿಕೊಳ್ಳಲು ಕಳೆದ ಒಂದು ತಿಂಗಳಿನಿಂದ ಸ್ಕೆಚ್ ಹಾಕಿ ಭೇಟಿಯಾಗಲು ಕಾಯುತ್ತಿದ್ದನು. ಇದನ್ನೂ ಓದಿ: ರಚನಾ ದಶರಥ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡ ಲೋಕೇಶ್ ಬಸವಟ್ಟಿ
ಬಹುದಿನಗಳ ನಂತರ ಭಾನುವಾರ (ಡಿ.25) ಇಬ್ಬರೂ ಭೇಟಿಯಾಗಿದ್ದರು. ಇಬ್ಬರೂ ರೆಸ್ಟೋರೆಂಟ್ ಹೋಗಿ ಊಟ ಮಾಡಿ, ಶಾಪಿಂಗ್ ಸಹ ಮುಗಿಸಿದ್ದರು. ಸಂಜೆ ಸ್ವಲ್ಪ ಖಾಸಗಿ ಸಮಯ ಕಳೆಯೋದಕ್ಕಾಗಿ ಮೋರಾ ಭಾಗಲ್ ಪ್ರದೇಶದಲ್ಲಿ ಪ್ರತ್ಯೇಕ ಸ್ಥಳಕ್ಕೆ ತೆರಳಿದ್ದರು. ಈ ಸಮಯದಲ್ಲಿ ಮಾಜಿ ಪತಿ ಆಕೆಯ ಮನವೊಲಿಸಲು ಶತಾಯಗತಾಯ ಪ್ರಯತ್ನಿಸಿದ್ದಾನೆ. ಆದರೂ ಆಕೆ ಒಪ್ಪಿಕೊಳ್ಳದ ಮೇಲೆ, ತಬ್ಬಿಕೊಳ್ಳುವ ನೆಪದಲ್ಲಿ ಪೃಷ್ಠ ಭಾಗಕ್ಕೆ (ಹಿಂಬದಿಯ ಪಕ್ಕೆಯಿಂದ ಕೆಳಭಾಗ) ಹೆಚ್‌ಐವಿ ರೋಗಿಯ ರಕ್ತವನ್ನು ಇಂಜೆಕ್ಟ್ ಮಾಡಿದ್ದಾನೆ. ಸ್ವಲ್ಪ ಸಮಯದಲ್ಲೇ ಮಹಿಳೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ಮರಳಿ ಪ್ರಜ್ಞೆ ಬಂದೊಡನೆ ವೈದ್ಯರಿಂದ ಮಾಹಿತಿ ಪಡೆದು ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಆತನ ಪ್ಯಾಂಟ್ ಜೇಬಿನಲ್ಲಿ ರಕ್ತದ ಕಲೆ ಪತ್ತೆಯಾಗಿದೆ.
ಥ್ರಿಲ್ಲರ್ ಟಿವಿ ಶೋ ಪ್ರೇರಣೆ: ಮಹಿಳೆಗೆ ಇಂಜೆಕ್ಟ್ ಮಾಡಲು ಒಂದು ತಿಂಗಳ ಹಿಂದೆಯೇ ಯೋಜಿಸಿದ್ದನು. ಒಂದು ಟಿವಿ ಶೋನಿಂದ ಪ್ರೇರಣೆ ಪಡೆದಿದ್ದನು. ಆ ಟಿವಿ ಶೋನಲ್ಲಿ `ವ್ಯಕ್ತಿಯೊಬ್ಬ ಹೆಣ್ಣು ನಾಯಿಗೆ ರಕ್ತವನ್ನು ಇಂಜೆಕ್ಟ್ ಮಾಡುತ್ತಾನೆ’ ಅದನ್ನು ನಾನೂ ನೋಡಿದ್ದೆ ಎಂದು ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ರಕ್ತ ಹೇಗೆ ಪಡೆದುಕೊಂಡನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.