ಕಳೆದ ಬಾರಿ 15 ಕೋಟಿ ರೂ. ನೀಡಿ RCB ಖರೀದಿಸಿದ್ದ ಆಟಗಾರ ಈ ಬಾರಿ 1 ಕೋಟಿಗೆ ಚೆನ್ನೈ ಪಾಲು

By
1 Min Read

ಮುಂಬೈ: ಐಪಿಎಲ್ ಮಿನಿ ಹರಾಜು (IPL Auction 2023) ಮುಗಿದಿದೆ. ಫ್ರಾಂಚೈಸ್‍ಗಳು ತಮಗೆ ಬೇಕಾಗಿದ್ದ ಆಟಗಾರರನ್ನು ಖರೀದಿಸಿದ್ದಾರೆ. ಈ ನಡುವೆ 2021ರ ಹರಾಜಿನಲ್ಲಿ ಬರೋಬ್ಬರಿ 15 ಕೋಟಿ ರೂ. ನೀಡಿ ಕೈಲ್ ಜೇಮಿಸನ್‍ರನ್ನು (Kyle Jamieson) ಆರ್​ಸಿಬಿ ಖರೀದಿಸಿತ್ತು. ಆ ಬಳಿಕ ಈ ಬಾರಿ ಮಿನಿ ಹರಾಜಿಗೆ ಬಿಟ್ಟುಕೊಟ್ಟಿತ್ತು. ಇದೀಗ ಚೆನ್ನೈ ಕೇವಲ 1 ಕೋಟಿ ರೂ. ನೀಡಿ ತಂಡಕ್ಕೆ ಬರಮಾಡಿಕೊಂಡಿದೆ.

27 ವರ್ಷದ ಜೇಮಿಸನ್ ನ್ಯೂಜಿಲೆಂಡ್ ಪರ ಆಡುವ ಆಲ್‍ರೌಂಡರ್ ಆಟಗಾರ. 2022ರ ಹರಾಜಿನಲ್ಲಿ ಭಾರೀ ಬೇಡಿಕೆ ಹೊಂದಿದ್ದ ಜೇಮಿಸನ್‍ರನ್ನು 15 ಕೋಟಿ ರೂ. ನೀಡಿ ಆರ್​ಸಿಬಿ ಖರೀದಿತ್ತು. ಆದರೆ ಜೇಮಿಸನ್ ಆರ್​ಸಿಬಿ ಪರ ಪ್ಲಾಫ್ ಆದರು. ಹಾಗಾಗಿ ಈ ಬಾರಿ ಮಿನಿ ಹರಾಜಿಗೆ ಬಿಟ್ಟುಕೊಟ್ಟಿತು. ನಿನ್ನೆ ನಡೆದ ಹರಾಜಿನಲ್ಲಿ ಜೇಮಿಸನ್ 1 ಕೋಟಿ ರೂ. ಮೂಲಬೆಲೆ ಹೊಂದಿದ್ದರು. ಈ ಮೂಲಬೆಲೆಗೆ ಚೆನ್ನೈ ಜೇಮಿಸನ್‍ರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ – 18.50 ಕೋಟಿ ರೂ.ಗೆ ಬಿಕರಿಯಾದ ಸ್ಯಾಮ್ ಕರ್ರನ್

2021ರ ಐಪಿಎಲ್‍ನಲ್ಲಿ ಜೇಮಿಸನ್ ಆರ್​ಸಿಬಿ ಪರ 9 ಪಂದ್ಯವಾಡಿದ್ದು, ಕೇವಲ 9 ವಿಕೆಟ್ ಮತ್ತು 65 ರನ್ ಬಾರಿಸಿ ನಿರಾಸೆ ಮೂಡಿಸಿದ್ದರು. ಇದೀಗ ಚೆನ್ನೈ ಪಡೆ ಸೇರಿಕೊಂಡಿರುವ ಜೇಮಿಸನ್ ಪ್ರದರ್ಶನ ಯಾವ ರೀತಿ ಇರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮಿನಿ ಹರಾಜಿನಲ್ಲಿ ಚೆನ್ನೈ ಫ್ರಾಂಚೈಸಿ ಬೆನ್‍ಸ್ಟೋಕ್ಟ್‌ರನ್ನು 16.25 ಕೋಟಿ ರೂ. ನೀಡಿ ಖರೀದಿಸಿದರೆ, ಆ ಬಳಿಕ ಜೇಮಿಸಿನ್‍ಗೆ 1 ಕೋಟಿ ರೂ. ಮತ್ತು ಅಜಿಂಕ್ಯಾ ರಹಾನೆಗೆ 50 ಲಕ್ಷ ರೂ. ನೀಡಿ ಖರೀದಿಸಿರುವುದು ಹೆಚ್ಚಿನ ಮೊತ್ತವಾಗಿದೆ. ಇದನ್ನೂ ಓದಿ: RCB ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಸಿಂಧನೂರಿನ ಮನೋಜ್ ಭಾಂಡಗೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *