ಬೆಂಗಳೂರು ವಿಶ್ವವಿದ್ಯಾಲಯ ಬಿಕಾಂ ಪಠ್ಯದಲ್ಲಿ ಪುನೀತ್ ರಾಜಕುಮಾರ್

Public TV
2 Min Read

ವಾರದ ಹಿಂದೆಯಷ್ಟೇ ಪುನೀತ್ ರಾಜಕುಮಾರ್ (Puneeth Rajkumar) ಬಯೋಗ್ರಫಿ ‘ನೀನೇ ರಾಜಕುಮಾರ’ ನಾಲ್ಕನೇ ಆವೃತ್ತಿಯನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಅಭಿಮಾನಿಗಳು ಕೂಡ ಸಂಭ್ರಮಿಸಿದ್ದರು. ಈ ಸಂಭ್ರಮದ ಬೆನ್ನಲ್ಲೇ ಪುನೀತ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಬಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯವ (Bangalore University) ಪುನೀತ್ ಅವರ ಬದುಕನ್ನು ಹಿಡಿದಿಟ್ಟ ಕೃತಿ ‘ನೀನೇ ರಾಜಕುಮಾರ’ ಪುಸ್ತಕದ ಒಂದು ಅಧ್ಯಾಯವನ್ನು ಪಠ್ಯವಾಗಿಸಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೀವನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಅಪ್ಪು ಅಭಿಮಾನಿ ಸಂಘಗಳು ಸರಕಾರಕ್ಕೂ ಪತ್ರ ಬರೆದಿದ್ದವು. ಶಿಕ್ಷಣ ಮಂತ್ರಿಗಳನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದ್ದವು. ಅಭಿಮಾನಿಗಳಿಗೆ ಸಿಹಿ ಸುದ್ದಿ ಅಂದರೆ, ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಬಿಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯ ‘ವಾಣಿಜ್ಯ ಕನ್ನಡ 3’ ನಲ್ಲಿ ಪುನೀತ್ ಅವರ ಜೀವನದ ಆಯ್ದ ಭಾಗವನ್ನು ಪಠ್ಯಕ್ಕೆ ಅಳವಡಿಸಿಕೊಂಡಿದೆ. ಇದನ್ನೂ ಓದಿ: `ತೂತು ಮಡಿಕೆ’ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳೋಕೆ ಚಂದ್ರ ಕೀರ್ತಿ ರೆಡಿ

ಪತ್ರಕರ್ತ ಡಾ.ಶರಣು ಹುಲ್ಲೂರು (Sharanu Hullur) ಬರೆದ, ಸಾವಣ್ಣ ಪ್ರಕಾಶನ ಹೊರ ತಂದಿರುವ ‘ನೀನೇ ರಾಜಕುಮಾರ್’ (Neene Rajkumar) ಕೃತಿಯ ಒಂದು ಅಧ್ಯಾಯವಾದ ‘ಲೋಹಿತ್ ಎಂಬ ಮರಿಮುದ್ದ’ ಭಾಗವನ್ನು ಪಠ್ಯದಲ್ಲಿ ಬಳಸಿಕೊಂಡಿದೆ ಬೆಂಗಳೂರು ವಿಶ್ವವಿದ್ಯಾಲಯ. ಡಾ.ಮುನಿಯಪ್ಪ ಈ ಪಠ್ಯಪುಸ್ತಕದ (Textbook) ಪ್ರಧಾನ ಸಂಪಾದಕರಾಗಿದ್ದು, ಡಾ.ಅಮರೇಂದ್ರ ಶೆಟ್ಟಿ ಆರ್, ಡಾ.ಕ.ನಿಂ. ಹೊಯ್ಸಳಾದಿತ್ಯ, ಡಾ.ಶಿವರಾಜ ಬಿ.ಇ ಹಾಗೂ ಡಾ.ರಘುನಂದನ್ ಬಿ.ಆರ್ ಅವರು ಪಠ್ಯದ ಸಂಪಾದಕರಾಗಿದ್ದಾರೆ. ಈ ವರ್ಷದ ಬಿ.ಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯದಲ್ಲಿ ಪುನೀತ್ ಅವರ ಬಾಲ್ಯವನ್ನು ಅಳವಡಿಸಲಾಗಿದೆ.

ಮೊನ್ನೆಯಷ್ಟೇ ‘ನೀನೇ ರಾಜಕುಮಾರ’ ಪುಸ್ತಕದ ನಾಲ್ಕನೇ ಆವೃತ್ತಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಈ ವರ್ಷದಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಮಾರಾಟ ಕಂಡ ಬಯೋಗ್ರಫಿ ಎನ್ನುವ ದಾಖಲೆಗೂ ಈ ಪುಸ್ತಕ ಪಾತ್ರವಾಗಿತ್ತು. ಸತತವಾಗಿ ಹಲವು ಪುಸ್ತಕ ಮಳಿಗೆಗಳಲ್ಲಿ ಮತ್ತು ಆನ್ ಲೈನ್ ನಲ್ಲಿ ಟಾಪ್ ಪಟ್ಟಿಯಲ್ಲಿತ್ತು. ಇದೀಗ ಪಠ್ಯಕ್ಕೂ ಕೃತಿಯ ಭಾಗವನ್ನು ಅಳವಡಿಸಿಕೊಳ್ಳಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *