ಅಯೋಧ್ಯೆ ಮಾದರಿಯಲ್ಲಿ ರಾಮದೇವರ ಬೆಟ್ಟ ಅಭಿವೃದ್ಧಿ – ಸಿಎಂಗೆ ಅಶ್ವಥ್ ನಾರಾಯಣ ಪತ್ರ

Public TV
1 Min Read

ರಾಮನಗರ: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ರಾಮನಗರದ ಐತಿಹಾಸಿಕ ರಾಮದೇವರ ಬೆಟ್ಟದಲ್ಲಿರುವ (Ramadevara Betta) 19 ಎಕರೆ ಪ್ರದೇಶದಲ್ಲಿ ಅಯೋಧ್ಯೆ ರಾಮಮಂದಿರ (Ayodhya Ram Mandir) ಮಾದರಿಯಲ್ಲೇ ಒಂದು ದೇವಸ್ಥಾನ ನಿರ್ಮಿಸಲು ತ್ವರಿತವಾಗಿ ಒಂದು ಅಭಿವೃದ್ಧಿ ಸಮಿತಿಯನ್ನು ರಚಿಸಬೇಕು ಎಂದು ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ (CN Ashwath Narayan) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಪತ್ರ ಬರೆದಿದ್ದಾರೆ.

ವಾನರ ಸಂತತಿಯ ಸುಗ್ರೀವನಿಂದ ಪ್ರತಿಷ್ಠಾಪಿತವಾಗಿದ್ದೆಂಬ ಐತಿಹ್ಯ ಹೊಂದಿರುವ ರಾಮದೇವರ ಬೆಟ್ಟವನ್ನು ದಕ್ಷಿಣದ ಅಯೋಧ್ಯೆಯಂತೆ ಬೆಳೆಸಬೇಕೆನ್ನುವುದು ರಾಮನಗರ ಜಿಲ್ಲೆಯ ಸಾರ್ವಜನಿಕರು ಮತ್ತು ಭಕ್ತಾದಿಗಳ ಒತ್ತಾಯವಾಗಿದೆ. ಬೆಂಗಳೂರಿಗೆ ಸನಿಹದಲ್ಲಿರುವ ಈ ಬೆಟ್ಟವನ್ನು ಭಕ್ತರ ಅಪೇಕ್ಷೆಯಂತೆ ಅಭಿವೃದ್ಧಿಪಡಿಸುವುದರಿಂದ ಸಂಸ್ಕೃತಿ ರಕ್ಷಣೆ ಮತ್ತು ಪ್ರವಾಸೋದ್ಯಮ ಬೆಳವಣಿಗೆ ಎರಡನ್ನೂ ಸಾಧಿಸಲು ಅವಕಾಶವಿದೆ ಎಂದು ಅವರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಮಗಳ ಬರ್ತ್‌ಡೇ ಆಚರಿಸಲು ಸುವರ್ಣ ಸೌಧ ಬಾಡಿಗೆಗೆ ಕೊಡಿ – ಸಭಾಪತಿಗೆ ವಕೀಲ ಮನವಿ ಪತ್ರ

ಶ್ರೀರಾಮನು ವನವಾಸದ ದಿನಗಳಲ್ಲಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ರಾಮದೇವರ ಬೆಟ್ಟದಲ್ಲಿ ಒಂದು ವರ್ಷದ ಮಟ್ಟಿಗೆ ಇದ್ದನೆಂಬ ನಂಬಿಕೆ ಇದೆ. ಇಲ್ಲಿರುವ ಪಾತಾಳಗಂಗೆಯ ಉದ್ಭವಕ್ಕೆ ರಾಮನೇ ಕಾರಣ ಎನ್ನುವ ಶ್ರದ್ಧೆ ಇದೆ. ಅಲ್ಲದೆ ಸಪ್ತರ್ಷಿಗಳು ಕೂಡ ಇಲ್ಲಿ ತಪಸ್ಸನ್ನು ಆಚರಿಸಿರುವ ಕುರುಹುಗಳಿವೆ. ಹಾಗೆಯೇ ಈ ಬೆಟ್ಟವು ದೇಶದ ಏಕೈಕ ರಣಹದ್ದುಗಳ ಸಂರಕ್ಷಿತ ಪ್ರದೇಶವಾಗಿದೆ. ಈ ಪಕ್ಷಿಗಳಿಗೂ ರಾಮಾಯಣಕ್ಕೂ ಸಂಬಂಧವಿರುವುದು ಕೂಡ ಗಮನಾರ್ಹವಾಗಿದೆ ಎಂದು ಸಚಿವರು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ವಂದೇ ಭಾರತ್, ಶತಾಬ್ದಿ ಸೂಪರ್‌ಫಾಸ್ಟ್ ರೈಲುಗಳ ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ- ಸೋಮಣ್ಣ

ಐತಿಹಾಸಿಕ ತಾಣವಾಗಿರುವ ರಾಮದೇವರ ಬೆಟ್ಟವು ತ್ರೇತಾಯುಗದಷ್ಟು ಹಿಂದಿನ ಪರಂಪರೆಯನ್ನು ಹೊಂದಿದೆ. ಇದನ್ನು ಆಕರ್ಷಕವಾಗಿ ಅಭಿವೃದ್ಧಿಪಡಿಸಿ, ಮುಂದಿನ ತಲೆಮಾರುಗಳಿಗೂ ದಾಟಿಸಬೇಕು ಎನ್ನುವುದು ಸ್ಥಳೀಯರ ಅಭಿಲಾಷೆಯಾಗಿದೆ ಎಂದು ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೂ ಸಚಿವರು ಈ ಪತ್ರ ಬರೆದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *