ಜಾಮಿಯಾದಲ್ಲಿನ ಅಕ್ರಮ ಮದರಸಾ ತೆರವಿಗೆ ಹಿಂದೂ ಜಾಗರಣ ವೇದಿಕೆ ಗಡುವು

Public TV
1 Min Read

ಮಂಡ್ಯ: ಸಾಕಷ್ಟು ವಿವಾದ ಸೃಷ್ಟಿಸಿರುವ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದ (Srirangapatna) ಜಾಮಿಯಾ ಮಸೀದಿ (Jamia Masjid) ವಿವಾದ ಇದೀಗ ಮತ್ತೆ ಭುಗಿಲೆದ್ದಿದೆ. ಜಾಮಿಯಾ ಮಸೀದಿಯ ಒಳಭಾಗದಲ್ಲಿ ನಡೆಯುತ್ತಿರುವ ಮದರಸಾ ತೆರವಿಗೆ ಹಿಂದೂ ಜಾಗರಣ ವೇದಿಕೆ (Hindu Jagarana Vedike) ಮಂಡ್ಯ ಜಿಲ್ಲಾಡಳಿತಕ್ಕೆ ಗಡುವು ನೀಡಿದೆ.

ಐತಿಹಾಸಿಕ ಸ್ಥಳವಾಗಿರುವ ಜಾಮಿಯಾ ಮಸೀದಿ ಅಲ್ಲ, ಅದು ಮಂದಿರ ಎಂದು ಅತ್ತ ಬಜರಂಗಸೇನೆ ಹೈಕೋರ್ಟ್ ಮೆಟ್ಟಿಲೇರುವ ಮೂಲಕ ಕಾನೂನು ಹೋರಾಟವನ್ನು ಆರಂಭಿಸಿದೆ. ಇತ್ತ ಹಿಂದೂ ಜಾಗರಣ ವೇದಿಕೆ ಮಸೀದಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದರಸಾ ತೆರವಿಗೆ ಹೋರಾಟವನ್ನು ಆರಂಭಿಸಿದೆ.

1934 ರಲ್ಲಿ ಜಾಮಿಯಾ ಮಸೀದಿ ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆಗೆ ಸೇರಿದ್ದು, ಈ ಕಟ್ಟಡದಲ್ಲಿ ಮದರಸಾದಂತಹ ಚಟುವಟಿಕೆಗಳನ್ನು ನಡೆಸಲು ಅವಕಾಶವಿಲ್ಲ. ಹೀಗಿದ್ದರೂ ಕೂಡಾ ಜಾಮಿಯಾ ಮಸೀದಿಯಲ್ಲಿ ಅಕ್ರಮವಾಗಿ ಮದರಸಾ ನಡೆಸಲಾಗುತ್ತಿದ್ದು, ಕಳೆದ ಹಲವು ವರ್ಷಗಳಿಂದ ಹಿಂದೂಪರ ಸಂಘಟನೆಗಳು ಅಕ್ರಮ ಮದರಸಾ ತೆರವು ಮಾಡಬೇಕೆಂದು ಆಗ್ರಹ ಮಾಡುತ್ತಿವೆ. ಇಷ್ಟಾದರೂ ಕೂಡಾ ಕ್ರಮ ಕೈಗೊಳ್ಳದ ಹಿನ್ನೆಲೆ ಹಿಂದೂ ಜಾಗರಣಾ ವೇದಿಕೆ ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆಗೆ ಗಡುವು ನೀಡಿದೆ. ಇದನ್ನೂ ಓದಿ: ಕೊಟ್ಟ ಮಾತು ಉಳಿಸಿದ ಬಿಜೆಪಿ – ಸಭಾಪತಿ ಸ್ಥಾನಕ್ಕೆ ಹೊರಟ್ಟಿ ನಾಮಪತ್ರ ಸಲ್ಲಿಕೆ

ಜಾಮಿಯಾ ಮಸೀದಿಯಲ್ಲಿ ನಡೆಯುತ್ತಿರುವ ಅಕ್ರಮ ಮದರಸಾವನ್ನು 10 ದಿನಗಳ ಒಳಗೆ ತೆರವು ಮಾಡಬೇಕು. ಇಲ್ಲವಾದಲ್ಲಿ ನಮಗೂ ಪ್ರತಿ ಶನಿವಾರ ಹನುಮಾನ್ ಚಾಲೀಸ ಹಾಗೂ ಭಜನೆಗೆ ಅವಕಾಶ ನೀಡಬೇಕು. ಇವೆರಡೂ ಆಗಲಿಲ್ಲ ಎಂದರೆ ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆ ಎದುರು ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಸುನಿಲ್ ಕುಮಾರ್ ವಿರುದ್ಧ ಸಿಡಿದ ಹಿಂದೂ ಕಾರ್ಯಕರ್ತರು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *