ರಷ್ಯಾ, ಶ್ರೀಲಂಕಾ, ಮಾರಿಷಸ್‌ ಜೊತೆ ಕ್ಲಿಕ್‌ – ಮತ್ತಷ್ಟು ದೇಶಗಳೊಂದಿಗೆ ರುಪಿ ವ್ಯವಹಾರಕ್ಕೆ ಮುಂದಾದ ಭಾರತ

Public TV
2 Min Read

ನವದೆಹಲಿ: ರಷ್ಯಾ, ಶ್ರೀಲಂಕಾ, ಮಾರಿಷಸ್‌ ಜೊತೆ ರುಪಿ ವ್ಯವಹಾರ(Trade in Rupee) ಯಶಸ್ವಿಯಾಗುತ್ತಿದ್ದಂತೆ ಕೇಂದ್ರ ಸರ್ಕಾರ(Union Government) ಹೆಚ್ಚಿನ ರಾಷ್ಟ್ರಗಳೊಂದಿಗೆ ಅಂತಹ ಅವಕಾಶಗಳನ್ನು ಅನ್ವೇಷಿಸುವಂತೆ ವ್ಯಾಪಾರ ಸಂಸ್ಥೆಗಳು ಮತ್ತು ಬ್ಯಾಂಕುಗಳನ್ನು ಕೇಳಿದೆ.

ರುಪಿ ವ್ಯವಹಾರ ನಡೆಸಲು ಈಗಾಗಲೇ ಭಾರತ ಈ ಮೂರು ರಾಷ್ಟ್ರಗಳ ಜೊತೆ ಸ್ಪೆಷಲ್‌ ರೂಪಾಯಿ ವೋಸ್ಟ್ರೋ ಅಕೌಂಟ್ಸ್‌(SRVA) ತೆರೆದಿದೆ. ಇತ್ತೀಚೆಗೆ ಪೀಪಲ್ಸ್ ಬ್ಯಾಂಕ್ ಆಫ್ ಶ್ರೀಲಂಕಾ ಮತ್ತು ಮಾರಿಷಸ್ ಲಿಮಿಟೆಡ್ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಖಾತೆ ತೆರೆದಿದೆ.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ರಷ್ಯಾದ(Russia) ರೋಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದರೆ ಚೆನ್ನೈ ಮೂಲದ ಇಂಡಿಯನ್‌ ಬ್ಯಾಂಕ್‌ ಶ್ರೀಲಂಕಾದ ಮೂರು ಬ್ಯಾಂಕ್‌ನಲ್ಲಿ ಖಾತೆ ತೆರೆದಿದೆ.

ಆರ್‌ಬಿಐ(RBI) ಅನುಮತಿಯ ಬಳಿಕ 18 ರುಪಿ ಖಾತೆಗಳು 11 ಬ್ಯಾಂಕ್‌ನಲ್ಲಿ ತೆರೆಯಲ್ಪಟ್ಟಿದೆ. ಇದರಲ್ಲಿ ಎರಡು ರಷ್ಯಾ, ಎರಡು ಶ್ರೀಲಂಕಾ ಬ್ಯಾಂಕ್‌ಗಳು ಸೇರಿವೆ. ಇದನ್ನೂ ಓದಿ: ಕಚ್ಚಾ ತೈಲಕ್ಕೆ ಜಿ7 ದೇಶಗಳಿಂದ ದರ ಮಿತಿ – ಭಾರತದ ನಿರ್ಧಾರವನ್ನು ಸ್ವಾಗತಿಸಿದ ರಷ್ಯಾ

ಉಕ್ರೇನ್‌(Ukraine) ಮೇಲಿನ ಯುದ್ಧದ ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ಹಣಕಾಸು ವ್ಯವಹಾರಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಆರ್‌ಬಿಐ ಜುಲೈನಲ್ಲಿ ಎರಡು ದೇಶಗಳ ಮಧ್ಯೆ ದೇಶಿಯ ಕರೆನ್ಸಿಯಲ್ಲಿ ವ್ಯವಹಾರ ನಡೆಸುವ ಸಂಬಂಧ ವಿವರವಾದ ಮಾರ್ಗಸೂಚಿಯನ್ನು ಪ್ರಕಟಿಸಿತ್ತು.

ಇತ್ತೀಚಿನ ಪರಿಶೀಲನಾ ಸಭೆಯಲ್ಲಿ ಹಣಕಾಸು ಸಚಿವಾಲಯವು ಮತ್ತಷ್ಟು ದೇಶಗಳ ಜೊತೆ SRVA ಮೂಲಕ ದ್ವಿಪಕ್ಷೀಯ ವಹಿವಾಟುಗಳನ್ನು ವಿಸ್ತರಿಸಲು ಬ್ಯಾಂಕ್‌ ಮತ್ತು ವ್ಯಾಪಾರ ಸಂಸ್ಥೆಗಳ ಜೊತೆ ಕೇಳಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Russia-Ukraine Crisis: ರಷ್ಯಾಗೆ ಮತ್ತೊಂದು ಶಾಕ್ – SWIFTನಿಂದ ಔಟ್‌

ಆರ್‌ಬಿಐ ಮಾರ್ಗಸೂಚಿಗಳನ್ನು ಪ್ರಕಟಿಸಿದ ಬಳಿಕ ರಷ್ಯಾದ ಸ್ಬೆರ್ಬ್ಯಾಂಕ್ ಮತ್ತು ವಿಟಿಬಿ ಬ್ಯಾಂಕ್ ಮೊದಲು ಅನುಮೋದನೆಯನ್ನು ಪಡೆದುಕೊಂಡಿತ್ತು. ಇನ್‌ವಾಯ್ಸ್, ಪಾವತಿ ಮತ್ತು ರಫ್ತು/ಆಮದುಗಳ ಇತ್ಯರ್ಥಕ್ಕೆ ರೂಪಾಯಿಯಲ್ಲಿ ಹೆಚ್ಚುವರಿ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ.

ಈ SRVA ಅಡಿಯಲ್ಲಿ ಆಮದು ವಹಿವಾಟು ಕೈಗೊಳ್ಳುವ ದೇಶಿಯ ಆಮದುದಾರರು ಪಾವತಿಗಳನ್ನು ರೂಪಾಯಿಯಲ್ಲಿ ಮಾಡತಕ್ಕದ್ದು. ಹಣವನ್ನು ಅವರು ಪಾಲುದಾರ ದೇಶದ ಬ್ಯಾಂಕ್‌ ಭಾರತದಲ್ಲಿ ತೆರೆದಿರುವ ವಿಶೇಷ ಖಾತೆಯಲ್ಲಿ ಜಮಾ ಮಾಡಬೇಕಾಗುತ್ತದೆ.

ಭಾರತದಲ್ಲಿ ತನ್ನ ಶಾಖೆಯನ್ನು ಹೊಂದಿಲ್ಲದ ರಷ್ಯಾದ ಮತ್ತೊಂದು ಬ್ಯಾಂಕ್ Gazprombank ಸಹ ಕೋಲ್ಕತ್ತಾ ಮೂಲದ UCO ಬ್ಯಾಂಕ್‌ನಲ್ಲಿ SRVA ಖಾತೆಯನ್ನು ತೆರೆದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *