ಸಿಲಿಕಾನ್ ಸಿಟಿ ಈಗ ಕೂಲ್ ಕೂಲ್ ಆಗಿದೆ. ರಾಜಧಾನಿ ಸೇರಿದಂತೆ ಇಡೀ ರಾಜ್ಯ ಚಳಿಗಾಳಿಗೆ ತತ್ತರಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಂಜೆಯ ಹೊತ್ತಿಗೆ ಚಳಿಯ ಪ್ರಮಾಣ ಹೆಚ್ಚಾಗಲಿದ್ದು, 5 ದಿನ ಚಳಿಯೊಂದಿಗೆ ಮೋಡ ಕವಿದ ವಾತಾವರಣವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನೂ ಮಾಂಡಸ್ ಚಂಡಮಾರುತ ಕರ್ನಾಟಕ ಮೂಲಕ ಅರಬ್ಬಿ ಸಮುದ್ರದ ಕಡೆ ಹೋಗಲಿದೆ. ಈ ಚಂಡಮಾರುತದ ಎಫೆಕ್ಟ್ ದಕ್ಷಿಣ ಜಿಲ್ಲೆಗಳಿಗೆ ಉಂಟಾಗಲಿದೆ. ಇಂದು ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಮಳೆ, ಚಳಿ ಮುಂದುವರಿಯುವ ಬಗ್ಗೆ ಮುನ್ಸೂಚನೆ ನೀಡಿದೆ. ತಮಿಳುನಾಡಿನಲ್ಲಿ ಮಾಂಡಸ್ ಅಬ್ಬರ ಹೆಚ್ಚಾಗಿದ್ದು, ಕರ್ನಾಟಕಕ್ಕೂ ಸೈಕ್ಲೋನ್ ಎಫೆಕ್ಟ್ ತಟ್ಟಲಿದೆ. ಇಂದು ಕರಾವಳಿಯ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ 6 ಎಂಎಂ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು, ಚಾಮರಾಜನಗರ, ಕೋಲಾರ, ಮಂಡ್ಯ, ತುಮಕೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇರಲಿದೆ. ಸದ್ಯ ಬೆಂಗಳೂರಿನ ಉಷ್ಣಾಂಶ 23 ರಿಂದ 22ಕ್ಕೆ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆಯಿಂದ ಮಳೆಯ ಮುನ್ಸೂಚನೆ ನೀಡಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 20-18
ಮಂಗಳೂರು: 29-23
ಶಿವಮೊಗ್ಗ: 23-20
ಬೆಳಗಾವಿ: 26-20
ಮೈಸೂರು: 24-19
ಮಂಡ್ಯ: 24-19
ಮಡಿಕೇರಿ: 20-16
ರಾಮನಗರ: 24-19
ಹಾಸನ: 22-18
ಚಾಮರಾಜನಗರ: 24-19
ಚಿಕ್ಕಬಳ್ಳಾಪುರ: 22-17
ಕೋಲಾರ: 23-19
ತುಮಕೂರು: 23-19
ಉಡುಪಿ: 28-23
ಕಾರವಾರ: 29-24
ಚಿಕ್ಕಮಗಳೂರು: 21-17
ದಾವಣಗೆರೆ: 23-21
ಹುಬ್ಬಳ್ಳಿ: 25-20
ಚಿತ್ರದುರ್ಗ: 23-19
ಹಾವೇರಿ: 25-21
ಬಳ್ಳಾರಿ: 24-21
ಗದಗ: 24-20
ಕೊಪ್ಪಳ: 25-21
ರಾಯಚೂರು: 27-21
ಯಾದಗಿರಿ: 28-22
ವಿಜಯಪುರ: 26-21
ಬೀದರ್: 25-19
ಕಲಬುರಗಿ: 27-21
ಬಾಗಲಕೋಟೆ: 27-21