ಗಡಿ ದಾಟಿ ಅಕ್ರಮವಾಗಿ ಅಮೆರಿಕ ಪ್ರವೇಶ – ಒಂದು ವರ್ಷದಲ್ಲಿ 96,917 ಮಂದಿ ಭಾರತೀಯರ ಬಂಧನ

By
1 Min Read

ವಾಷಿಂಗ್ಟನ್‌: ಗಡಿ ದಾಟಿ ಅಕ್ರಮವಾಗಿ ಅಮೆರಿಕ (America) ಪ್ರವೇಶಿಸುತ್ತಿದ್ದ 96,917 ಮಂದಿ ಭಾರತೀಯರನ್ನು (Indians) ಒಂದು ವರ್ಷದ ಅವಧಿಯಲ್ಲಿ ಬಂಧಿಸಲಾಗಿದೆ ಎಂದು ಯುಎಸ್‌ ಕಸ್ಟಮ್ಸ್‌ & ಬಾರ್ಡರ್‌ ಪ್ರೊಟೆಕ್ಷನ್‌ ದತ್ತಾಂಶವು ತಿಳಿಸಿದೆ.

2022 ರ ಅಕ್ಟೋಬರ್‌ನಿಂದ 2023 ರ ಸೆಪ್ಟೆಂಬರ್‌ ವರೆಗೆ 90 ಸಾವಿರಕ್ಕೂ ಹೆಚ್ಚು ಜನ ಗಡಿ ದಾಟಿ ಅಕ್ರಮವಾಗಿ ಅಮೆರಿಕವನ್ನು ಪ್ರವೇಶಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಕಾನೂನುಬಾಹಿರವಾಗಿ ಯುಎಸ್ ಗಡಿಯನ್ನು ದಾಟುವಾಗ ಭಾರತೀಯರು ಐದು ಪಟ್ಟು ಹೆಚ್ಚಳವಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಇದನ್ನೂ ಓದಿ: ಜರ್ಮನಿಯಲ್ಲಿ ಹಮಾಸ್‌ ಚಟುವಟಿಕೆಗೆ ಸಂಪೂರ್ಣ ನಿಷೇಧ

2019-20ರಲ್ಲಿ 19,883 ಭಾರತೀಯರನ್ನು ಬಂಧಿಸಲಾಗಿತ್ತು. 2020-21ರಲ್ಲಿ 30,662 ಅರೆಸ್ಟ್‌ ಮಾಡಲಾಗಿದೆ. 2021-22ರಲ್ಲಿ ಈ ಸಂಖ್ಯೆ 63,927 ಆಗಿತ್ತು ಎಂದು ಅಂಕಿಅಂಶಗಳು ತಿಳಿಸಿವೆ.

2022 ರ ಅಕ್ಟೋಬರ್‌ ಮತ್ತು ಸೆಪ್ಟೆಂಬರ್ ನಡುವೆ ಬಂಧಿಸಲಾದ 96,917 ಭಾರತೀಯರಲ್ಲಿ ಹೆಚ್ಚಾಗಿ ಪಂಜಾಬ್ ಮತ್ತು ಗುಜರಾತ್‌ ವಲಸೆ ಬಂದವರೇ ಆಗಿದ್ದಾರೆ. ಕೆನಡಾ ಗಡಿಯಲ್ಲಿ 30,010 ಮಂದಿ ಮತ್ತು 41,770 ಮಂದಿ ಮೆಕ್ಸಿಕೊದ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಭಾರತೀಯ ಮೂಲದ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣದಿಂದ ವಿಚಲಿತರಾಗಿದ್ದೇವೆ: ಯುಎಸ್

2023 ರ ಆರ್ಥಿಕ ವರ್ಷದಲ್ಲಿ 84,000 ಭಾರತೀಯ ವಯಸ್ಕರು ಅಕ್ರಮವಾಗಿ ಯುಎಸ್ ಅನ್ನು ಪ್ರವೇಶಿಸಿದ್ದಾರೆ. ಬಂಧಿತರಲ್ಲಿ 730 ಅಪ್ರಾಪ್ತ ವಯಸ್ಕರು ಸೇರಿದ್ದಾರೆ. ಸೆನೆಟ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಜೇಮ್ಸ್ ಲ್ಯಾಂಕ್‌ಫೋರ್ಡ್, ಮೆಕ್ಸಿಕೋದಲ್ಲಿನ ಕ್ರಿಮಿನಲ್ ಕಾರ್ಟೆಲ್‌ಗಳು ವಲಸಿಗರಿಗೆ ತರಬೇತಿ ನೀಡುತ್ತಿದ್ದಾರೆ. ದೇಶಕ್ಕೆ ಪ್ರವೇಶಿಸುವಾಗ ಏನು ಹೇಳಬೇಕು, ಎಲ್ಲಿಗೆ ಹೋಗಬೇಕು ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಅದಕ್ಕಾಗಿ ಹಣವನ್ನೂ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್