ಬೆಂಗಳೂರು: ಇಂದು 9,523 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 10,107 ಮಂದಿ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 75 ಮಂದಿ ಮೃತಪಟ್ಟಿದ್ದಾರೆ.
ಒಟ್ಟು 7,10,309 ಮಂದಿಗೆ ಸೋಂಕು ಬಂದಿದೆ. ಈ ಪೈಕಿ 5,80,054 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 1,20,270 ಸಕ್ರಿಯ ಪ್ರಕರಣಗಳಿವೆ.
ಒಟ್ಟು ಇಲ್ಲಿಯವರೆಗೆ 9,966 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು 904 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 38,731 ಮಂದಿಗೆ ಆಂಟಿಜನ್ ಟೆಸ್ಟ್ ಮಾಡಿದ್ದು 61,192 ಮಂದಿಗೆ ಆರ್‌ಟಿ ಪಿಸಿಆರ್‌ಪರೀಕ್ಷೆ ಮಾಡಿದ್ದು ಒಟ್ಟು 99,923 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 59,51,223 ಪರೀಕ್ಷೆ ಮಾಡಲಾಗಿದೆ.
ಬೆಂಗಳೂರು ನಗರ 4,623, ಮೈಸೂರು 541,ಹಾಸನ 463, ಚಿತ್ರದುರ್ಗ 378 ಮಂದಿಗೆ ಸೋಂಕು ಬಂದಿದೆ. ಬೆಂಗಳೂರಿನಲ್ಲಿ 353, ಧಾರವಾಡ 93, ಬಳ್ಳಾರಿ 78, ಹಾಸನ 49 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.