ಟೆಲ್ ಅವೀವ್: ಗಾಜಾ (Gaza) ಮೇಲೆ ಇಸ್ರೇಲ್ (Israel) ನಡೆಸಿದ ದಾಳಿಯಲ್ಲಿ ಒಂದೇ ದಿನ 91 ಸಾವು ಸಾವನ್ನಪ್ಪಿದ್ದಾರೆ. ಟೆಲ್ ಅವೀವ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಗಾಜಾದ ಅತಿದೊಡ್ಡ ನಗರ ಕೇಂದ್ರವನ್ನು ವಶಪಡಿಸಿಕೊಳ್ಳಲು ವಾಯು ಮತ್ತು ಭೂಸೇನಾ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು. ಇಸ್ರೇಲಿ ಪಡೆಗಳು ಒಂದೇ ದಿನದಲ್ಲಿ ಗಾಜಾದಲ್ಲಿ 91 ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಿವೆ. ಪ್ರಮುಖ ವೈದ್ಯರ ಕುಟುಂಬ ಸದಸ್ಯರು ಮತ್ತು ಉತ್ತರ ಗಾಜಾ ನಗರದ ಹಲವಾರು ಜನರು ಮೃತಪಟ್ಟಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಇದನ್ನೂ ಓದಿ: H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?
ವಸತಿ ಮನೆಗಳು, ಆಶ್ರಯ ತಾಣಗಳು ಹಾಗೂ ಗಾಜಾದಿಂದ ಬೇರೆಡೆಗೆ ನಾಗರಿಕರನ್ನು ಸಾಗಿಸುತ್ತಿದ್ದ ಟ್ರಕ್‌ನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಈ ದಾಳಿಗಳಲ್ಲಿ ಕನಿಷ್ಠ 76 ಮಂದಿ ಸಾವಿಗೀಡಾಗಿದ್ದಾರೆ.
ಗಾಜಾ ನಗರದ ನಾಸ್ರ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ‘ನಿರಂತರ ಇಸ್ರೇಲಿ ಬಾಂಬ್ ದಾಳಿ, ಫಿರಂಗಿ ಶೆಲ್ ದಾಳಿ ಮತ್ತು ಕ್ವಾಡ್‌ಕಾಪ್ಟರ್ ಗುಂಡಿನ ದಾಳಿಗಳಿಗೆ ಬೇರೆಡೆ ಸ್ಥಳಾಂತರ ಆಗುತ್ತಿದ್ದ ಸಾವಿರಾರು ಜನರು ಬಲಿಯಾದವರು ಸೇರಿದ್ದಾರೆ’ ಎಂದು ಅಜ್-ಜವಾಯ್ದಾದಿಂದ ವರದಿ ಮಾಡುತ್ತಿರುವ ಅಲ್ ಜಜೀರಾದ ಹಿಂದ್ ಖೌದರಿ ಹೇಳಿದ್ದಾರೆ. ಇದನ್ನೂ ಓದಿ: ಸೈಬರ್ ಅಟ್ಯಾಕ್ | ಯೂರೋಪ್‌ನ ಪ್ರಮುಖ ಏರ್‌ಪೋರ್ಟ್‌ಗಳಿಂದ ವಿಮಾನಯಾನ ವಿಳಂಬ, ರದ್ದು