ಟಿಬಿ ಡ್ಯಾಂನ 30 ಕ್ರಸ್ಟ್‌ ಗೇಟ್‌ ಓಪನ್‌; 90‌,000 ಕ್ಯುಸೆಕ್‌ ನೀರು ನದಿಗೆ – ಹಂಪಿಯ ಹಲವು ಸ್ಮಾರಕಗಳು ಮುಳುಗಡೆ

Public TV
2 Min Read

ಬಳ್ಳಾರಿ: ಮಲೆನಾಡು ಸೇರಿ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ತುಂಗಭದ್ರಾ ಜಲಾಶಯದಿಂದ (Tungabhadra Dam) ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಹಂಪಿಯಲ್ಲೂ (Hampi) ಪ್ರವಾಹದ ಪರಿಸ್ಥಿತಿ ಎದುರಾಗಿದೆ.

ಜಲಾಶಯದಿಂದ ಈಗಾಗಲೇ ನದಿಗೆ 90 ಸಾವಿರ ಕ್ಯುಸೆಕ್‌ ನೀರು ಹರಿಸುತ್ತಿರುವುದರಿಂದ ನದಿ ತೀರದಲ್ಲಿರುವ ಹಂಪಿಯ ಹಲವು ಐತಿಹಾಸಿಕ ಸ್ಮಾರಕಗಳು ಮುಳುಗಡೆಯಾಗಿವೆ. ಧಾರ್ಮಿಕ ವಿಧಿವಿಧಾನ ಮಂಟಪ, ಪುರಂದರದಾಸರ ಮಂಟಪ, ಜನಿವಾರ ಮಂಟಪ, ಸ್ನಾನ ಘಟ್ಟಗಳು ಮುಳುಗಡೆಯಾಗಿವೆ.

105 ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿ ಇದೀಗ 102 ಟಿಎಂಸಿ ನೀರು (TMC Water) ಸಂಗ್ರಹವಾಗಿದೆ. ಹೀಗಾಗಿ 30 ಕ್ರಸ್ಟ ಗೇಟ್ ಗಳನ್ನ ಓಪನ್ ಮಾಡಿ 90 ಸಾವಿರ ಕ್ಯುಸೆಕ್‌ ನೀರು ತುಂಗಭದ್ರಾ ನದಿಗೆ ಹರಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ಬದಲಿ ನಿವೇಶನ – ಮುಡಾ ಸೈಟ್ ಹಂಚಿಕೆ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್

ಕಂಪ್ಲಿಯ ಸೇತುವೆ ಬಂದ್‌:
ತುಂಗಭದ್ರಾ ಜಲಾಶಯದಿಂದ ನದಿಗೆ 90 ಸಾವಿರ ಕ್ಯುಸೆಕ್‌ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ (Bellary) ಜಿಲ್ಲೆಯ ಕಂಪ್ಲಿ ಪಟ್ಟಣಕ್ಕೆ ಪ್ರವಾಹದ ಭೀತಿ ಎದುರಾಗಿದೆ. ಕಂಪ್ಲಿಯ ಸೇತುವೆಯ ಮೇಲೆ ಸಾರ್ವಜನಿಕ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಕತ್ರಿನಾ, ದೀಪಿಕಾ ಪಡುಕೋಣೆ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ರಣ್‌ಬೀರ್ ಕಪೂರ್

ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯ ಸಂಪರ್ಕ ಬಂದ್ ಮಾಡಿರುವುದರಿಂದ ಬಳ್ಳಾರಿ – ಗಂಗಾವತಿ ಸಂಪರ್ಕ ಸೇತುವೆ ಸ್ಥಗಿತಗೊಂಡಿದೆ. ಮೀನುಗಾರರ ಮನೆಗಳು, ಕೋಟೆ ಪ್ರದೇಶಕ್ಕೆ ನದಿ ನೀರು ನುಗ್ಗುವ ಸಾಧ್ಯತೆ ಇದ್ದರೂ, ಅಪಾಯ ಲೆಕ್ಕಿಸದೇ ಕೆಲ ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿದ್ದಾರೆ.

ಇನ್ನೂ ನದಿಯಲ್ಲಿನ ತ್ಯಾಜ್ಯ ಕಟ್ಟಿ ನೀರು ಹೊರ ಹೋಗದ ಪರಿಸ್ಥಿತಿ ನಿರ್ಮಾಣವಾಗಿರೋದ್ರಿಂದ, ಕಂಪ್ಲಿ ಪುರಸಭೆಯಿಂದ ಜೆಸಿಬಿ ಮೂಲಕ ತ್ಯಾಜ್ಯ ವಿಲೇವಾರಿ ಕಸರತ್ತು ಶುರುವಾಗಿದೆ. ಪ್ರವಾಹ ಎದುರಾದ್ರೆ ಪರಿಸ್ಥಿತಿ ಎದುರಿಸಲು ಜಿಲ್ಲೆಯ ಅಧಿಕಾರಿಗಳು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಧ್ರುವ ಸರ್ಜಾ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಜು.29ರಂದು ಹೊರಬೀಳಲಿದೆ ‘ಕೆಡಿ’ ಚಿತ್ರದ ಅಪ್‌ಡೇಟ್

Share This Article