ರಾಯಚೂರಿನಲ್ಲಿ ಮೊಸಳೆ ದಾಳಿಗೆ ಬಾಲಕ ಬಲಿ – ಮೃತದೇಹಕ್ಕಾಗಿ ಹುಡುಕಾಟ

Public TV
1 Min Read

ರಾಯಚೂರು: ಕೃಷ್ಣಾ ನದಿಗೆ (Krishna River) ನೀರು ತರಲು ಹೋದ ವೇಳೆ ಮೊಸಳೆ (Crocodile) ದಾಳಿಗೆ ಬಾಲಕನೋರ್ವ ಬಲಿಯಾದ ಘಟನೆ ರಾಯಚೂರು (Raichur) ಜಿಲ್ಲೆಯ ಕುರುವಕಲಾ ಗ್ರಾಮದಲ್ಲಿ ನಡೆದಿದೆ.

ನವೀನ್ ಕೃಷ್ಣಾ (9) ಮೊಸಳೆ ದಾಳಿಗೆ ಒಳಗಾದ ಬಾಲಕ. ಶಾಲೆಗೆ ರಜೆ ಇದ್ದ ಕಾರಣ ತಂದೆ- ತಾಯಿಯ ಜೊತೆ ಹೊಲಕ್ಕೆ ಹೋಗಿದ್ದ ನವೀನ್ ನದಿಯಲ್ಲಿ ನೀರು ತರಲು ಹೋದಾಗ ಈ ಘಟನೆ ನಡೆದಿದೆ. ನದಿಯಲ್ಲಿ ನಾಪತ್ತೆಯಾದ ನವೀನ್ ಮೃತದೇಹಕ್ಕಾಗಿ ಕೃಷ್ಣಾ ನದಿಯಲ್ಲಿ ಹುಡುಕಾಟ ಮುಂದುವರೆದಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಯುವಕನ ಹತ್ಯೆ ಪ್ರಕರಣ – ಇಬ್ಬರ ಬಂಧನ

ಬೇಸಿಗೆ ಕಾಲದಲ್ಲಿ ಕೃಷ್ಣಾ ನದಿ ಬತ್ತಲು ಶುರುವಾಗುತ್ತಿದಂತೆ ಮೊಸಳೆಗಳ ಕಾಟ ವಿಪರೀತವಾಗುತ್ತದೆ. ಇದರಿಂದಾಗಿ ನದಿ ಪಾತ್ರದ ಜಮೀನುಗಳ ರೈತರು ತಮ್ಮ ಜಮೀನಿಗೆ ಹೋಗಲು ಹೆದರುತ್ತಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಪಾದಾಚಾರಿ ಸಾವು

Share This Article