ಅಪಘಾತದಲ್ಲಿ 9 ವರ್ಷದ ಬಾಲಕಿ ಸಾವು

1 Min Read

ಚಿಕ್ಕೋಡಿ: ರಸ್ತೆ ಅಪಘಾತದಲ್ಲಿ (Accident) 9 ವರ್ಷದ ಬಾಲಕಿ (Girl) ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ನಡೆದಿದೆ.

ಅಳಗವಾಡಿ ಗ್ರಾಮದ ವೈಷ್ಣವಿ ತೇರದಾಳೆ (9) ಮೃತ ಬಾಲಕಿ‌. ಶಿಕ್ಷಣ ಸಂಯೋಜಕ ವಿಠಲ ತೇರದಾಳೆ ಅವರ ಸುಪುತ್ರಿ ವೈಷ್ಣವಿ ಇತ್ತೀಚೆಗೆ ಅಳಗವಾಡಿ ಗ್ರಾಮದ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇದನ್ನೂ ಓದಿ: ಕೇಂದ್ರದ ಸಬ್ಸಿಡಿ ಯೂರಿಯಾ ಗೊಬ್ಬರ ಅನ್ಯ ರಾಜ್ಯಕ್ಕೆ ಮಾರಾಟ – 7 ಮಂದಿ ಅರೆಸ್ಟ್‌

ಒಂದು ವಾರಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೆ ಬೆಳಗಾವಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
Share This Article