ಹೋಗಿ ಓದಿಕೋ ಎಂದು ಗದರಿದ ತಂದೆ – 9ರ ಬಾಲಕಿ ನೇಣಿಗೆ ಶರಣು

Public TV
1 Min Read

ಚೆನ್ನೈ: ಆಡಿದ್ದು ಸಾಕು, ಹೊಗಿ ಓದಿಕೋ ಎಂದು ತಂದೆ ಗದರಿದ್ದಕ್ಕೆ 9 ವರ್ಷದ ಬಾಲಕಿ (Girl) ನೊಂದು ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ (Tamil Nadu) ವರದಿಯಾಗಿದೆ.

ತಮಿಳುನಾಡಿದ ತಿರುವಳ್ಳೂರಿನಲ್ಲಿ ಬಾಲಕಿ ತನ್ನ ಮನೆಯಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಸೋಮವಾರ ಬಾಲಕಿ ತನ್ನ ಸಂಬಂಧಿಕರ ಮನೆಯ ಬಳಿ ಆಟವಾಡುತ್ತಿದ್ದುದನ್ನು ನೋಡಿದ ತಂದೆ ಕೃಷ್ಣಮೂರ್ತಿ, ಆಡಿದ್ದು ಸಾಕು, ಹೋಗಿ ಓದಿಕೋ ಎಂದು ಮಗಳಿಗೆ ಗದರಿದ್ದಾರೆ. ಬಳಿಕ ಮನೆಯ ಬೀಗವನ್ನು ಮಗಳ ಕೈಯಲ್ಲಿ ನೀಡಿ ಅಲ್ಲಿಂದ ಹೊರಟು ಹೋಗಿದ್ದಾರೆ.

 

ಬೈಕ್‌ಗೆ ಇಂಧನ ತುಂಬಲು ತೆರಳಿದ್ದ ಕೃಷ್ಣಮೂರ್ತಿ ರಾತ್ರಿ 8:15ರ ವೇಳೆಗೆ ಮನೆಗೆ ವಾಪಸಾಗಿದ್ದಾರೆ. ಆದರೆ ಮನೆ ಒಳಗಿಂದ ಬೀಗ ಹಾಕಲಾಗಿದ್ದು, ಮಗಳನ್ನು ಎಷ್ಟೇ ಕರೆದರೂ ಆಕೆ ಪ್ರತಿಕ್ರಿಯಿಸಿರಲಿಲ್ಲ. ಬಳಿಕ ಗಾಬರಿಗೊಂಡ ಕೃಷ್ಣಮೂರ್ತಿ ಮನೆಯ ಕಿಟಕಿಯನ್ನು ಒಡೆದು ಒಳಗೆ ಹೋಗಿದ್ದಾರೆ. ಇದನ್ನೂ ಓದಿ: ಕಳ್ಳನೆಂದು ಶಂಕಿಸಿ ಹತ್ಯೆ- ಇಬ್ಬರ ಬಂಧನ

ಈ ವೇಳೆ ಬಾಲಕಿ ನೇಣಿಗೆ ಕೊರಳೊಡ್ಡಿರುವ ಆಘಾತಕಾರಿ ದೃಶ್ಯ ತಂದೆಯ ಕಣ್ಣಿಗೆ ಬಿದ್ದಿದೆ. ಬಾಲಕಿ ಹತ್ತಿಯ ಟವೆಲ್‌ನಲ್ಲಿ ನೇತಾಡುತ್ತಿದ್ದು, ಉಸಿರಾಡಲು ಕಷ್ಟಪಡುತ್ತಿದ್ದಳು ಎನ್ನಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಅಲ್ಲಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ರಾಮ ಮಂದಿರದ ಹೊರಗೆ ಗಲಾಟೆ- ಉದ್ರಿಕ್ತರಿಂದ ಪೊಲೀಸ್ ವಾಹನಕ್ಕೆ ಬೆಂಕಿ

ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಲಕಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದು, ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಳು ಎನ್ನಲಾಗಿದೆ. ಆಕೆಯನ್ನು ನೆರೆಹೊರೆಯವರು ಇನ್‌ಸ್ಟಾ ಕ್ವೀನ್ ಎಂದು ಕರೆಯುತ್ತಿದ್ದರು ಎಂಬುದು ತಿಳಿದುಬಂದಿದೆ.


Share This Article