ಅಮೆರಿಕದ ಬ್ಲಾಕ್‌ ಹಾಕ್‌ ಹೆಲಿಕಾಪ್ಟರ್‌ಗಳು ಡಿಕ್ಕಿ – ಘರ್ಷಣೆಯಲ್ಲಿ 9 ಯೋಧರು ಸಾವು

Public TV
1 Min Read

ವಾಷಿಂಗ್ಟನ್‌: ತರಬೇತಿ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕದ (America) ಸೈನಿಕರ ಬ್ಲಾಕ್‌ ಹಾಕ್‌ ಹೆಲಿಕಾಪ್ಟರ್‌ಗಳು (Black Hawk Helicopters) ಪರಸ್ಪರ ಡಿಕ್ಕಿಯಾಗಿ ಪತನಗೊಂಡಿವೆ. ದುರಂತದಲ್ಲಿ 9 ಸೈನಿಕರು ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್‌ಗಳು 101 ನೇ ವಾಯುಗಾಮಿ ವಿಭಾಗಕ್ಕೆ ಸೇರಿದ್ದವಾಗಿವೆ. ಫೋರ್ಟ್ ಕ್ಯಾಂಪ್‌ಬೆಲ್‌ನ ವಾಯುವ್ಯದಲ್ಲಿರುವ ಕೆಂಟುಕಿಯ ಟ್ರಿಗ್ ಕೌಂಟಿಯಲ್ಲಿ ಬುಧವಾರ ರಾತ್ರಿ 10:00 ಗಂಟೆಗೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವಕ್ತಾರ ಲೆಫ್ಟಿನೆಂಟ್ ಕರ್ನಲ್ ಆಂಥೋನಿ ಹೋಫ್ಲರ್ ತಿಳಿಸಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ವಲಸಿಗರ ಕೇಂದ್ರದಲ್ಲಿ ಭೀಕರ ಅಗ್ನಿ ದುರಂತ – 39 ಮಂದಿ ಸಾವು

ಎರಡೂ ಹೆಲಿಕಾಪ್ಟರ್‌ಗಳು, ಪೈಲಟ್‌ಗಳ ತಪ್ಪಿನಿಂದ ಪರಸ್ಪರ ಘರ್ಷಣೆಯಿಂದ ಆಕಾಶದಲ್ಲೇ ಸ್ಪೋಟವಾಗಿ ನೆಲಕ್ಕಪ್ಪಳಿಸಿದವು. ಪರಿಣಾಮವಾಗಿ 9 ಯೋಧರು (US Army) ಸಾವನ್ನಪ್ಪಿದ್ದಾರೆ.

101 ನೇ ವಾಯುಗಾಮಿ ವಿಭಾಗಕ್ಕೆ ಫೋರ್ಟ್ ಕ್ಯಾಂಪ್‌ಬೆಲ್ ನೆಲೆಯಾಗಿದೆ. ಇದು US ಸೈನ್ಯದ ಏಕೈಕ ವಾಯು ದಾಳಿ ವಿಭಾಗವಾಗಿದೆ. ‘ಸ್ಕ್ರೀಮಿಂಗ್ ಈಗಲ್ಸ್’ ಎಂಬ ಅಡ್ಡಹೆಸರಿನೊಂದಿಗೆ 1942ರ ಆಗಸ್ಟ್‌ನಲ್ಲಿ ಈ ವಿಭಾಗ ಚಾಲ್ತಿಗೊಂಡಿತ್ತು. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ – 20 ಹಜ್ ಯಾತ್ರಾರ್ಥಿಗಳ ಸಾವು

Share This Article