ಮಾದಕ ವಸ್ತು, ಶಸ್ತ್ರಾಸ್ತ್ರ ಕೇಸ್‌ಲ್ಲಿ ಕರ್ನಾಟಕದ ಇಬ್ಬರು ಸೇರಿ 9 ಜನ ಅರೆಸ್ಟ್

Public TV
1 Min Read

– 9.7 ಲಕ್ಷ ಮೌಲ್ಯದ ಡ್ರಗ್ಸ್ ಸೀಜ್

ಚಂಡೀಗಢ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪಾಕಿಸ್ತಾನ ಮತ್ತು ಮಲೇಷ್ಯಾ ಮೂಲದವರಿಂದ ನಡೆಯುತ್ತಿದ್ದ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಚಟುವಟಿಕೆಯನ್ನು ಅಮೃತಸರ ಪೊಲೀಸರು (Amritsar Police) ಯಶಸ್ವಿಯಾಗಿ ಬೇಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ (Karnataka) ಇಬ್ಬರು ಸೇರಿ ಒಟ್ಟು 9 ಮಂದಿಯನ್ನ ಅಮೃತಸರ ಪೊಲೀಸರು ಬಂಧಿಸಿದ್ದು, 9.7 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.ಇದನ್ನೂ ಓದಿ: ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ ನೀಡುವುದು ಔದಾರ್ಯಕ್ಕಲ್ಲ, ರಾಷ್ಟ್ರಕ್ಕಾಗಿ ಮಾಡಿದ ಸೇವೆಗೆ – ದೆಹಲಿ ಹೈಕೋರ್ಟ್

ಈ ಕುರಿತು ಅಮೃತಸರ ಪೊಲೀಸ್ ಆಯುಕ್ತ ಗುರುಪ್ರೀತ್ ಸಿಂಗ್ ಅವರು ಮಾತನಾಡಿ, ಈ ಜಾಲ ದುಬೈನಿಂದ ಪಾಕಿಸ್ತಾನಕ್ಕೆ ಹಬ್ಬಿದ್ದು, ಸದ್ಯ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಮೂವರು ಆರೋಪಿಗಳು ಮಲೇಷ್ಯಾದಿಂದ ಹಿಂದಿರುಗುತ್ತಿರುವಾಗ ಬಂಧಿಸಲಾಗಿದ್ದು, ಐದು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹಾಗೂ ಒಂದು ಕೆ.ಜಿ. ಹೆರಾಯಿನ್‌ನ್ನು ಜಪ್ತಿ ಮಾಡಿದ್ದೇವೆ. ಇವುಗಳನ್ನು ಡ್ರೋನ್ ಮೂಲಕ ಅಂತಾರಾಷ್ಟ್ರೀಯ ಗಡಿಯಿಂದ ಸಾಗಿಸಲಾಗಿದೆ. ಜೊತೆಗೆ 9 ಎಂಎಂನ ಮೂರು ಗ್ಲಾಕ್ ಪಿಸ್ತೂಲ್‌ಗಳು ಮತ್ತು 2.30 ಬೋರ್ ಚೈನೀಸ್ ಪಿಸ್ತೂಲ್‌ನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದರು.

ಇದಾದ ಬಳಿಕ ಮಾದಕ ವಸ್ತು ಹಾಗೂ ಹವಾಲಾ ಹಣದ ಪ್ರಕರಣವೊಂದರಲ್ಲಿ 6 ಜನರನ್ನು ಬಂಧಿಸಲಾಗಿದ್ದು, ಡ್ಯಾನಿಶ್, ಸಲೋನಿ, ಜೋಬನ್‌ಪ್ರೀತ್, ಕುಲ್ವಿಂದರ್ ಸಿಂಗ್, ಕರ್ನಾಟಕದ ಅಬ್ದುಲ್ ರೆಹಮಾನ್, ಪ್ರದೀಪ್ ಪಿಂಟು ಎನ್ನಲಾಗಿದೆ ಹಾಗೂ ಒಟ್ಟು 9.7 ಲಕ್ಷ ರೂ. ಮೌಲ್ಯದ ಮಾದಕವಸ್ತು ಮತ್ತು ಹವಾಲಾ ಹಣ, 150 ಗ್ರಾಂ ಹೆರಾಯಿನ್ ವಶಪಡಿಕೊಂಡಿದ್ದಾರೆ.

ಜೂ.30ರಂದು, ಅಮೃತಸರ ಪೊಲೀಸರು, ಬಿಎಸ್‌ಎಫ್ ಮತ್ತು ರಾಜಸ್ಥಾನ ಪೊಲೀಸರು ಸೇರಿ ಕೆನಡಾ ಮೂಲದ ವ್ಯಕ್ತಿ ನಡೆಸುತ್ತಿದ್ದ ಮಾದಕ ದ್ರವ್ಯ ದಂಧೆಯನ್ನು ಪತ್ತೆಹಚ್ಚಿ, 60.302 ಕೆ.ಜಿ ಹೆರಾಯಿನ್‌ನ್ನು ವಶಪಡಿಸಿಕೊಂಡಿದ್ದರು.ಇದನ್ನೂ ಓದಿ: ರಶ್ಮಿಕಾ ಬೈ ಮಿಸ್‌ ಆಗಿ ಹೇಳಿರಬೇಕು, ಕ್ಷಮಿಸಿಬಿಡೋಣ: ನಟಿ ಹರ್ಷಿಕಾ ಪೂಣಚ್ಚ

Share This Article