ಪತ್ನಿಗೆ 9 ಕೋಟಿ ಜೀವನಾಂಶ, ತಿಂಗಳಿಗೆ 4 ಲಕ್ಷ – ಭಾರೀ ಸಂಚಲನ ಸೃಷ್ಟಿಸಿದ ಟೆಕ್ಕಿ ಪೋಸ್ಟ್

Public TV
3 Min Read

– ಪತ್ನಿಗೆ ಅಕ್ರಮ ಸಂಬಂಧವಿದೆ – ಪತಿಯಿಂದ ಆರೋಪ
– ಪತಿಗೆ ಸೆಕ್ಸ್ ವೀಡಿಯೋ ಮಾಡುವ ಚಟವಿದೆ ಎಂದ ಪತ್ನಿ

ಚೆನ್ನೈ: ಪತ್ನಿಗೆ 9 ಕೋಟಿ ಜೀವನಾಂಶ, ತಿಂಗಳಿಗೆ 4 ಲಕ್ಷ ರೂ.ಗಳನ್ನು ನಾನು ನೀಡಬೇಕೆಂದು ಟೆಕ್ಕಿಯೊಬ್ಬರು (Techie) ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು ಸಂಚಲನ ಮೂಡಿಸಿದೆ.

ಪತ್ನಿ ಹಾಗೂ ಚೆನ್ನೈ ಪೊಲೀಸರು (Chennai) ನನಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಆಕೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೆಕ್ಕಿ ಶಂಕರ್ ಆರೋಪಿಸಿದ್ದಾರೆ. ಈ ವಿಡಿಯೋ 8.6 ಮಿಲಿಯನ್ ವೀಕ್ಷಣೆ ಪಡೆದಿದೆ. ಇದನ್ನೂ ಓದಿ: ಸಂಸದರ ಸಂಬಳ 24% ಏರಿಕೆ – ಈಗ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

ಟೆಕ್ಕಿ ಶಂಕರ್ ತಿರುಚ್ಚಿಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಿಂದ ಪದವಿ ಪಡೆದು, ಸಿಂಗಾಪುರ (Singapore) ಮೂಲದ ಕ್ರಿಪ್ಟೋ ಸೋಷಿಯಲ್ ನೆಟ್‌ವರ್ಕ್‌ನ ಸಂಸ್ಥಾಪಕರಾಗಿದ್ದಾರೆ. ಶಂಕರ್ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದುಕೊಂಡ ಬಳಿಕ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು.

ಈ ಬೆನ್ನಲ್ಲೇ ಪತ್ನಿ ನನ್ನ ಮೇಲೆ ಕೌಟುಂಬಿಕ ಹಿಂಸಾಚಾರದ ಆರೋಪ ಹೊರಿಸಿ ಅಮೆರಿಕದಲ್ಲಿ ದೂರು ದಾಖಲಿಸಿದ್ದಾಳೆ. ಭಾರತಕ್ಕಿಂತ ಅಮೆರಿಕದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೂಲಕ ಆಕೆ ಲಾಭ ಪಡೆಯಲು ಪ್ರಯತ್ನಿಸಿದ್ದಾಳೆ ಎಂದು ಪತಿ ಶಂಕರ್ ದೂರಿದ್ದಾರೆ. ಇದನ್ನೂ ಓದಿ: ರೀಲ್ಸ್ ತಂದ ಆಪತ್ತು- ರಜತ್, ವಿನಯ್‌ ಅರೆಸ್ಟ್‌

ತನ್ನ ಪತ್ನಿ 9 ವರ್ಷದ ಮಗನನ್ನು ಅಮೆರಿಕಕ್ಕೆ (America) ಅಪಹರಿಸಿದ್ದಾರೆ ಎಂದು ಶಂಕರ್ ಆರೋಪಿಸಿ, ಅಂತರಾಷ್ಟ್ರೀಯ ಮಕ್ಕಳ ಅಪಹರಣ ಪ್ರಕರಣ ದಾಖಲಿಸಿದ್ದರು. ಅಮೆರಿಕದ ನ್ಯಾಯಾಲಯವು ನನ್ನ ಪರವಾಗಿ ತೀರ್ಪು ನೀಡಿತ್ತು. ಬಳಿಕ ಒಪ್ಪಂದಕ್ಕೆ ಸಹಿ ಹಾಕಿದ್ದೆವು. ಒಪ್ಪಂದದ ಪ್ರಕಾರ, ಪತ್ನಿಗೆ ತಿಂಗಳಿಗೆ 9 ಕೋಟಿ ರೂ. ಹಾಗೂ 4.3 ಲಕ್ಷ ರೂ.ಗಳನ್ನು ನೀಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪತ್ನಿ ರಾಧಿಕಾ ಪಂಡಿತ್‌ ಜೊತೆ ಮುಂಬೈನಲ್ಲಿ ಯಶ್‌

ಒಪ್ಪಂದಕ್ಕೆ ಇಬ್ಬರು ಸಹಿ ಹಾಕಿದ್ದರೂ ಪತ್ನಿ ಪುತ್ರನ ಪಾಸ್‌ಪೋರ್ಟ್ ಹಂಚಿಕೆಯ ಲಾಕರ್‌ನಲ್ಲಿ ಇಡುವುದಕ್ಕೆ ಸಂಬಂಧಿಸಿದಂತೆ ಪಾಲಿಸಲು ನಿರಾಕರಿಸಿದ್ದಾರೆ. ಇದು ಈಗ ಮತ್ತಷ್ಟು ಕಾನೂನು ಸಮಸ್ಯೆಗಳಿಗೆ ಕಾರಣವಾಯಿತು ಎಂದು ಶಂಕರ್ ಆರೋಪಿಸಿದ್ದಾರೆ.

ಪತ್ನಿಯ ದೂರಿನ ಆಧಾರದ ಮೇಲೆ ಈಗ ಚೆನ್ನೈ ಪೊಲೀಸರು ನನ್ನನ್ನು ಟ್ರ್ಯಾಕ್‌ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತ ಗೋಕುಲ್ ಮನೆ ಮೇಲೆ ಚೆನ್ನೈ ಪೊಲೀಸರು ವಾರಂಟ್ ಇಲ್ಲದೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಪೋಷಕರ ವಿರೋಧದ ನಡ್ವೆ ಹಿಂದೂ ಯುವಕ – ಮುಸ್ಲಿಂ ಯುವತಿ ಪ್ರೇಮ ವಿವಾಹ

ಪತ್ನಿ ದಿವ್ಯಾ ಹೇಳೋದು ಏನು?
ತೆರಿಗೆ ತಪ್ಪಿಸಲು ಶಂಕರ್ ತಮ್ಮ ಆಸ್ತಿಗಳನ್ನು ತನ್ನ ತಂದೆಯ ಹೆಸರಿಗೆ ವರ್ಗಾಯಿಸಿದ್ದಾರೆ. ಶಂಕರ್ ಅವರ ತಂದೆ ಈ ಆಸ್ತಿಗಳನ್ನು ಥೈಲ್ಯಾಂಡ್‌ನಲ್ಲಿರುವ ತಮ್ಮ ಶಂಕರ್ ಸಹೋದರನಿಗೆ ವರ್ಗಾಯಿಸಿದ್ದಾರೆ.

ಅಮೆರಿಕದಲ್ಲಿ ತೆರಿಗೆ ಅಪರಾಧಗಳನ್ನು ವರದಿ ಮಾಡದಂತೆ ದಾಖಲೆಗಳಿಗೆ ಸಹಿ ಹಾಕುವಂತೆ ನನಗೆ ಬೆದರಿಕೆ ಹಾಕಿದ್ದರು. ಈ ತೆರಿಗೆ ಅಪರಾಧದ ಬಗ್ಗೆ ನಾನು ದೂರು ನೀಡಬಾರದು ಎಂದು ಹೇಳಿ ಅವರು ಬೆದರಿಕೆ ಹಾಕಿ ನನ್ನ ಸಹಿಯನ್ನು ತೆಗೆದುಕೊಂಡರು. ನಂತರ ನಾವು ಭಾರತಕ್ಕೆ ಬಂದೆವು. ಶಾಂತಿಯುತವಾಗಿ ಬದುಕಲು ಯೋಚಿಸಿದೆ ಆದರೆ ಅವರು ಅದಕ್ಕೂ ಅವಕಾಶ ನೀಡುತ್ತಿಲ್ಲ. ಇದನ್ನೂ ಓದಿ: ಕೇರಳ | ಆತ್ಮಹತ್ಯೆಗೆ ಯತ್ನಿಸಿ ಕೋಮಾದಲ್ಲಿದ್ದ ವಿದ್ಯಾರ್ಥಿನಿ 3 ತಿಂಗಳ ಬಳಿಕ ಸಾವು – ಹಾಸ್ಟೆಲ್ ವಾರ್ಡನ್ ವಶ

ಪತಿ ಶಂಕರ್‌ಗೆ ಸೆಕ್ಸ್ ವಿಡಿಯೋ ಮಾಡುವ ಚಟವಿತ್ತು. ಅವರು ರಹಸ್ಯವಾಗಿ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡಿದ್ದರು. ಅಲ್ಲದೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅವರನ್ನು ಸಿಂಗಾಪುರ ಪೊಲೀಸರು ಬಂಧಿಸಿದರು. ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಇದನ್ನೂ ಓದಿ: ಡಿಕೆಶಿ ವಿರುದ್ಧ ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತಾ: ಛಲವಾದಿ ನಾರಾಯಣಸ್ವಾಮಿ

ಗೋಕುಲ್ ಕೃಷ್ಣನ್ ತನ್ನ ಮಗನನ್ನು ಬಲವಂತವಾಗಿ ತನ್ನಿಂದ ಕಿತ್ತುಕೊಂಡರು. ನನ್ನ ಮಗನಿಗೆ ಏನಾಯಿತು ಎಂದು ನನಗೆ ತಿಳಿದಿರಲಿಲ್ಲ. ಅದಕ್ಕಾಗಿಯೇ ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ.

Share This Article