ಇಂಗ್ಲೆಂಡ್ ಟಾಪ್ ಬೌಲರ್ ಜೀವನಕ್ಕೆ ಮುಳುವಾಯ್ತು 9 ವರ್ಷ ಹಿಂದಿನ ಟ್ವೀಟ್‍

Public TV
1 Min Read

ಲಂಡನ್: 9 ವರ್ಷದ ಹಿಂದೆ ಮಾಡಲಾಗಿದ್ದ ಟ್ವೀಟ್‍ಗಳೇ ಈಗ ಇಂಗ್ಲೆಂಡ್ ತಂಡದ ಪ್ರತಿಭಾನ್ವಿತ ಬೌಲರ್ ಒಲಿ ರಾಬಿನ್ಸನ್ ಕ್ರಿಕೆಟ್ ಜೀವನಕ್ಕೆ ಮುಳುವಾಗಿದೆ.

2012 ರಲ್ಲಿ ಜನಾಂಗೀಯ ನಿಂದನೆ ಮತ್ತು ಸೆಕ್ಸಿಸ್ಟ್ ಟ್ವೀಟ್ ಒಲಿ ರಾಬಿನ್ಸನ್ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ಅಮಾನತು ಮಾಡಿದೆ.

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ್ದ ರಾಬಿನ್ಸನ್ ಬ್ಯಾಟಿಂಗ್ ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ಸ್‍ನಲ್ಲಿ 4 ವಿಕೆಟ್ ಎರಡನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಪಡೆದಿದ್ದರು. ಅಷ್ಟೇ ಅಲ್ಲದೇ ಮೊದಲ ಇನ್ನಿಂಗ್ಸ್ ನಲ್ಲಿ 42 ರನ್ ಹೊಡೆದಿದ್ದರು. ಇದನ್ನೂ ಓದಿ : ಧೋನಿ ಬಗ್ಗೆ ಅಚ್ಚರಿ ಮಾತು – ಕೊಹ್ಲಿಗೆ ಅಭಿಮಾನಿಗಳಿಂದ ಚಪ್ಪಾಳೆ

ಈ ಪಂದ್ಯದ ಸಮಯದಲ್ಲೇ 2013ರಲ್ಲಿ ರಾಬಿನ್ಸನ್ ಮಾಡಿದ ಟ್ವೀಟ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಿಂದ ಅವರನ್ನು ಕೈಬಿಡಲಾಗಿದೆ.

“ಇಂಗ್ಲೆಂಡ್ ಮತ್ತು ಸಸೆಕ್ಸ್ ಬೌಲರ್ ಆಲ್ಲಿ ರಾಬಿನ್ಸನ್ ಅವರನ್ನು 2012 ಮತ್ತು 2013 ರಲ್ಲಿ ಟ್ವೀಟ್ ಹಿನ್ನೆಲೆಯಲ್ಲಿ  ಅಂತರಾಷ್ಟ್ರೀಯ ಮಾದರಿ ಪಂದ್ಯಗಳಿಂದ ಅಮಾನತು ಮಾಡಲಾಗಿದೆ” ಎಂದು ಇಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತನ್ನ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಬಿನ್ಸನ್, ನಾನು ವರ್ಣಭೇದ ನೀತಿ ಪರ ಇಲ್ಲ ಮತ್ತು ಸೆಕ್ಸಿಸ್ಟ್ ಅಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ಈ ಟ್ವೀಟ್ ಗಳಿಗೆ ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಆ ರೀತಿಯ ಟೀಕೆ ಮಾಡಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಆ ಸಮಯದಲ್ಲಿ ನಾನು ಚಿಂತನೆ ಮಾಡದೇ ಬೇಜವಾಬ್ದಾರಿ ನಡೆದುಕೊಂಡಿದ್ದು ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಈಗ ನಾನು ವ್ಯಕ್ತಿಯಾಗಿ ಪ್ರಬುದ್ಧನಾಗಿದ್ದು ಆ ಟ್ವೀಟ್‍ಗಳಿಗೆ ನಾನು ಸಂಪೂರ್ಣವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದರು.

27 ವರ್ಷದ ರಾಬಿನ್ಸನ್ ಬಲಗೈ ವೇಗದ ಬೌಲರ್ ಜೊತೆಗೆ ಬಲಗೈ ಬ್ಯಾಟ್ಸ್ ಮನ್ ಆಗಿದ್ದರು. 2013ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *