ಬೆಂಗಳೂರಿಗೆ ಕಾಲಿಟ್ಟಿದ್ದಾಳೆ ನಕಲಿ ನಂದಿನಿ – 1.5 ಕೋಟಿ ಮೌಲ್ಯದ 8 ಸಾವಿರ ಲೀಟರ್ ತುಪ್ಪ ಸೀಜ್

Public TV
1 Min Read

– KMF ಡಿಸ್ಟ್ರಿಬ್ಯೂಟರ್ ಸೇರಿ ನಾಲ್ವರ ಗ್ಯಾಂಗ್ ಅರೆಸ್ಟ್

ಬೆಂಗಳೂರು: ನಗರದಲ್ಲಿ ನಕಲಿ ನಂದಿನಿ (Nandini) ತುಪ್ಪ ಮಾರಾಟ ಮಾಡುತ್ತಿದ್ದ ಜಾಲ ಪತ್ತೆಯಾಗಿದ್ದು, ಪೊಲೀಸರು 1.5 ಕೋಟಿ ರೂ. ಮೌಲ್ಯದ 8 ಸಾವಿರ ಲೀಟರ್ ತುಪ್ಪವನ್ನು ಸೀಜ್ ಮಾಡಿದ್ದಾರೆ.

ಈ ಸಂಬಂಧ ಕೆಎಂಎಫ್ (KMF) ಡಿಸ್ಟ್ರಿಬ್ಯೂಟರ್ ಮಹೇಂದ್ರ, ಪುತ್ರ ದೀಪಕ್, ಸಪ್ಲೈರ್‌ಗಳಾದ ಮುನಿರಾಜು ಹಾಗೂ ಅಭಿ ಅರಸು ಎಂಬ ನಾಲ್ವರ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿ:Delhi Explosion | ವಿದೇಶಕ್ಕೆ ಪರಾರಿಯಾಗಲು ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದ ಶಾಹಿನ್‌

ಬಂಧಿತ ಆರೋಪಿಗಳು ಸೇರಿಕೊಂಡು ಬೆಂಗಳೂರಿನಲ್ಲಿದ್ದ ನಂದಿನಿ ಪಾರ್ಲರ್‌ಗಳಿಗೆ ನಕಲಿ ತುಪ್ಪವನ್ನು ಸರಬರಾಜು ಮಾಡುತ್ತಿದ್ದರು. ಹೊರ ರಾಜ್ಯದಲ್ಲಿ ಕಲಬೆರಕೆ ತುಪ್ಪವನ್ನು ತಯಾರಿಸಿ, ಪ್ಯಾಕೆಟ್ ಹಾಗೂ ಪ್ಲ್ಯಾಸ್ಟಿಕ್‌ ಬಾಟಲ್‌ನಲ್ಲಿ ಸಪ್ಲೈ ಮಾಡುತ್ತಿದ್ದರು.

ಓರ್ವ ತಯಾರಿಸಿದ ತುಪ್ಪವನ್ನು ತಮಿಳುನಾಡಿನಿಂದ ಸಪ್ಲೈ ಮಾಡಿದರೆ, ಇನ್ನೋರ್ವ ಅದನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದ. ಈ ಜಾಲದಲ್ಲಿ ಕೆಎಂಎಫ್ ಡಿಸ್ಟ್ರಿಬ್ಯೂಟರ್ ಹಾಗೂ ಅವರ ಪುತ್ರ ಕೂಡ ಭಾಗಿಯಾಗಿರುವುದು ತಿಳಿದುಬಂದಿದೆ. ಸದ್ಯ ಪೊಲೀಸರು ನಾಲ್ವರ ಮುಖವಾಡ ಕಳಚಿ ಅರೆಸ್ಟ್ ಮಾಡಿದ್ದು, ಬರೋಬ್ಬರಿ 1.50 ಕೋಟಿ ರೂ. ಮೌಲ್ಯದ 8 ಸಾವಿರ ಲೀಟರ್ ನಕಲಿ ತುಪ್ಪವನ್ನು ಜಪ್ತಿ ಮಾಡಿದ್ದಾರೆ.ಇದನ್ನೂ ಓದಿ: ಡಾ.ಉಮರ್ ಬಾಂಬ್ ಎಕ್ಸ್‌ಪರ್ಟ್‌ – 10 ನಿಮಿಷದಲ್ಲಿ ಬಾಂಬ್ ತಯಾರಿಸಿದ್ನಾ ಉಗ್ರ? ಕಾರಿನೊಳಗೆ ಹೇಗಿತ್ತು ಸೆಟಪ್‌?

Share This Article