ಹೋಂ ವರ್ಕ್ ಮಾಡದ ಮಗನ ಕೈ,ಕಾಲು ಕಟ್ಟಿ ಫ್ಯಾನಿಗೆ ನೇತು ಹಾಕಿದ ತಂದೆ

Public TV
1 Min Read

ಜೈಪುರ್: ಹೋಂ ವರ್ಕ್ ಮಾಡದ ಮಗನನ್ನು ತಂದೆ ಕೈ, ಕಾಲು ಕಟ್ಟಿ ಫ್ಯಾನಿಗೆ ತಲೆಕೆಳಗಾಗಿ ನೇತು ಹಾಕಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.

8 ವರ್ಷದ ಬಾಲಕ ಶಾಲೆಯಿಂದ ಮನೆಗೆ ಬಂದು ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಆತನನ್ನು ತಂದೆ ತಲೆಕೆಳಗಾಗಿ ನೇತು ಹಾಕಿದ್ದಾನೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉದಯ್‍ಪುರದ ಬುಂದಿ ಜಿಲ್ಲೆಯ ದಾಬಿಯಲ್ಲಿ ಈ ಘಟನೆ ನಡೆದಿದೆ.

ಮಗ ಹೋಂ ವರ್ಕ್ ಮಾಡಿರಲಿಲ್ಲ. ಈ ವಿಚಾರವಾಗಿ ಕೋಪಗೊಂಡ ತಂದೆ ಮಗನನ್ನು ಕಟ್ಟಿ, ತಲೆಕೆಳಗಾಗಿ ನೇತು ಹಾಕಿದಲ್ಲದೆ ಆತನಿಗೆ ಹೊಡೆಯಲು ಹೋಗಿದ್ದ. ಈ ದೃಶ್ಯವನ್ನು ವೀಡಿಯೋ ಮಾಡಿಕೊಂಡ ಆ ಬಾಲಕನ ತಾಯಿ ಬಳಿಕ ಗಂಡನನ್ನು ತಡೆದಿದ್ದಾಳೆ. ಬೇಕಾದರೆ ನನ್ನನ್ನು ಇಲ್ಲೇ ಸಾಯಿಸಿಬಿಡಿ, ಆದರೆ ನನ್ನ ಮಗನನ್ನು ಹೀಗೆಲ್ಲ ನೇತು ಹಾಕಬೇಡ ಎಂದು ಆ ಬಾಲಕ ಅಪ್ಪನ ಬಳಿ ಜೋರಾಗಿ ಅಳುತ್ತಾ ಬೇಡಿಕೊಳ್ಳುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.

POLICE JEEP

ಬಾಲಕನ ತಂದೆ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಪದೇ ಪದೆ ಮಗನನ್ನು ಹೊಡೆದು, ಹಿಂಸೆ ನೀಡುತ್ತಿದ್ದ. ಆದರೆ ಈ ಘಟನೆಯ ಬಗ್ಗೆ ಮನೆಯವರಾರೂ ಆತನ ವಿರುದ್ಧ ದೂರು ನೀಡಿಲ್ಲ. ವೀಡಿಯೋ ಆಧಾರದಲ್ಲಿ  ಪೊಲೀಸರೇ ಕೇಸ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಾವುದೇ ಭೂಕಂಪನ ಆಗಿಲ್ಲ – ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಸ್ಪಷ್ಟನೆ

ಆರೋಪಿಯ ಹಿಂಸಾತ್ಮಕ ಸ್ವಭಾವದಿಂದಾಗಿ ಕುಟುಂಬದವರು ದೂರು ದಾಖಲಿಸಲು ಹೆದರುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಪ್ರಕರಣವನ್ನು ಗಮನಕ್ಕೆ ತಂದಿದ್ದು, ಕ್ರಮ ಕೈಗೊಂಡು 3 ದಿನಗಳಲ್ಲಿ ವರದಿ ಸಲ್ಲಿಸುವಂತೆ ಬಂಡಿ ಎಸ್‍ಪಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಧೋನಿ CSK ಪರ ಆಡುವುದು ಕನ್ಫರ್ಮ್ – ರೈನಾ ಡೌಟ್?

Share This Article
Leave a Comment

Leave a Reply

Your email address will not be published. Required fields are marked *