ಹಿಮಪಾತದಿಂದ 8 ಪ್ರವಾಸಿಗರ ದುರ್ಮರಣ – ತುರ್ತು ಪರಿಸ್ಥಿತಿ ಘೋಷಿಸಿದ ಪಾಕಿಸ್ತಾನ

By
1 Min Read

ಇಸ್ಲಾಮಾಬಾದ್: ಪಾಕಿಸ್ತಾನದ ಜನಪ್ರಿಯ ಪ್ರವಾಸಿ ತಾಣ ಮರ‍್ರೆಯಲ್ಲಿ ಭಾರೀ ಹಿಮಪಾತವಾಗಿದ್ದು, ಇದರಿಂದ ವಾಹನಗಳಲ್ಲಿ ಸಿಲುಕಿದ್ದ ಸುಮಾರು 8 ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ.

ಭಾರೀ ಹಿಮಪಾತದಿಂದಾಗಿ ಪ್ರವಾಸಿಗರು ಹಿಮಾವೃತವಾದ ತಮ್ಮ ವಾಹನಗಳ ಒಳಗಡೆಯೇ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತೀವ್ರ ಹಿಮಪಾತದಿಂದಾಗಿ ಸ್ಥಳೀಯರು ಹಾಗೂ ಪ್ರವಾಸಿಗರು ಕಷ್ಟ ಎದುರಿಸುತ್ತಿದ್ದಾರೆ. ಈಗಾಗಲೇ 8 ಪ್ರವಾಸಿಗರು ಸಾವನ್ನಪ್ಪಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಪಾಕಿಸ್ತಾನ ಸರ್ಕಾರ ಮರ‍್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ಇದನ್ನೂ ಓದಿ: ಕೊರೊನಾ ತನಗೆ ಬರಬಾರದೆಂದು ಸೋಂಕಿತ ಮಗನನ್ನೇ ಕಾರ್‌ನ ಟ್ರಂಕ್‌ನಲ್ಲಿ ಬಂಧಿಸಿದ್ದ ತಾಯಿ ಅರೆಸ್ಟ್

ಮರ‍್ರೆಗೆ ಪ್ರಯಾಣಿಸುವವರನ್ನು ತಡೆಯಲಾಗುತ್ತಿದೆ ಹಾಗೂ ಹಿಲ್ ರೆಸಾರ್ಟ್ ಕಡೆ ಹೋಗುವ ಎಲ್ಲಾ ಮಾರ್ಗಗಳನ್ನು ಮುಚ್ಚಲಾಗಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿ ಹಾಗೂ ಮೋಟರ್‌ವೇ ಪೊಲೀಸ್(ಎನ್‌ಹೆಚ್‌ಎಮ್‌ಪಿ) ಇನ್ಸ್‌ಪೆಕ್ಟರ್ ಜನರಲ್ ಇನಾಮ್ ಘನಿ ತಿಳಿಸಿದ್ದಾರೆ. ಇದನ್ನೂ ಓದಿ: ಸೇನಾ ನೆಲೆಯಲ್ಲೇ ಮಕ್ಕಳನ್ನು ಕೆಟ್ಟದಾಗಿ ನಿಂದಿಸಿದ್ದಕ್ಕೆ ವ್ಯಕ್ತಿಗೆ 50 ವರ್ಷ ಜೈಲು ಶಿಕ್ಷೆ!

ಪಾಕಿಸ್ತಾನದ ಪ್ರವಾಸಿ ತಾಣ ಮರ‍್ರೆ ರಾಜಧಾನಿ ಇಸ್ಲಾಮಾಬಾದ್‌ನಿಂದ ಈಶಾನ್ಯದೆಡೆ 60 ಕಿ.ಮೀ ದೂರದಲ್ಲಿದೆ. ಪ್ರತೀ ವರ್ಷ ಚಳಿಗಾಲದ ಹಿಮಪಾತವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮರ‍್ರೆಗೆ ಪ್ರಯಾಣ ಬೆಳೆಸುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *