25 ಪುಸ್ತಕಗಳನ್ನು ಬರೆದ 8ನೇ ತರಗತಿ ವಿದ್ಯಾರ್ಥಿ!

Public TV
1 Min Read

ಬೆಂಗಳೂರು: ಮಕ್ಕಳು ಬೆಳೆಯುತ್ತ ಹಲವು ವಿಷಯಗಳಲ್ಲಿ ಆಸಕ್ತಿ ಮೂಡಿಸಿಕೊಳ್ಳುತ್ತಾರೆ. ಬಹುತೇಕರು ಆಟ, ಪಾಠದಲ್ಲೇ ಮಗ್ನರಾಗುತ್ತಾರೆ. ಇನ್ನು ಆಟದ ವಿಷಯಕ್ಕೆ ಬಂದರೆ ಬರೀ ಆಟ ಆಡೋದಷ್ಟೇ ಮಕ್ಕಳ ಆಸಕ್ತಿಯಾಗಿರುತ್ತೆ. ಆದರೆ ಇಲ್ಲೊಬ್ಬ ಪೋರ 8ನೇ ತರಗತಿಗೆ 25 ಪುಸ್ತಕಗಳನ್ನ ಸ್ವತಃ ಬರೆದಿದ್ದಾನೆ.

ಅಂತಃಕರಣ ಎಂಬ 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಇಂದು ತಾನು ಬರೆದ 25ನೇ ಪುಸ್ತಕವನ್ನು ಬಿಡುಗಡೆ ಮಾಡಿದ್ದಾನೆ. ಈತನನ್ನು 2015 ರಲ್ಲೇ ಪಬ್ಲಿಕ್ ಟಿವಿ ಗುರುತಿಸಿ ಪಬ್ಲಿಕ್ ಹೀರೋ ಮಾಡಿತ್ತು. ಕ್ರೀಡೆಯ ವಿಚಾರದಲ್ಲಿ ಆಸಕ್ತಿ ಮೂಡಿಸಿಕೊಂಡು ಅದರ ಬಗ್ಗೆ ಪುಸ್ತಕಗಳನ್ನು ಬರೆಯಲು ಶುರು ಮಾಡಿ ಇಂದು ಐಪಿಎಲ್ ಕುರಿತ ತನ್ನ ವಿಮರ್ಶೆ ಜೊತೆಗೆ ತನ್ನ ಡ್ರೀಮ್ ಟೀಮ್ ಬಗ್ಗೆ ಸಹ ವಿವರಿಸಿದ್ದಾನೆ. ಪಬ್ಲಿಕ್ ಹೀರೋ ಆದ ನಂತರದ ದಿನಗಳಲ್ಲಿ ನನಗೆ ಮತ್ತಷ್ಟು ಪುಸ್ತಕಗಳನ್ನ ಬರೆಯಲು ಪ್ರೇರಣೆಯಾಯ್ತು ಎಂದು ಆತ ಹೇಳಿದ್ದಾನೆ.

ಐಪಿಎಲ್ ಬಗೆಗಿನ ಪುಸ್ತಕ ಬಿಡುಗಡೆಗೆ ಹಿರಿಯ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಆಗಮಿಸಿದ್ದರು. ಬಿಡುಗಡೆ ನಂತರ ಮಾತನಾಡಿದ ಗಣೇಶ್, ಅಂತಃಕರಣ ಬಗ್ಗೆ ಖುಷಿ ವ್ಯಕ್ತಪಡಿಸಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಬೆಳಸಿಕೊಂಡು ವಿಮರ್ಶೆ ಮಾಡುತ್ತ ಪುಸ್ತಕ ಬರೆದಿರೋದು ನಿಜಕ್ಕೂ ಸೂಪರ್ ಎಂದು ಶ್ಲಾಘಿಸಿದ್ರು.

ಒಟ್ಟಾರೆ ಆಟ ಪಾಠದಲ್ಲಿ ಮುಂದಿರುವ ಅಂತಕಃರಣ 24 ಪುಸ್ತಕಗಳನ್ನ ಕನ್ನಡದಲ್ಲಿ ಬರೆದು, ಇಂಗ್ಲಿಷ್‍ನಲ್ಲಿ ಪುಸ್ತಕ ಬರೆಯುವ ಈ ಐಪಿಎಲ್ ಬಗೆಗಿನ ಪುಸ್ತಕದಿಂದ ಈಡೇರಿಸಿಕೊಂಡಿದ್ದಾನೆ. ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಅಂತಃಕರಣ ಮತ್ತಷ್ಟೂ ಪುಸ್ತಕಗಳನ್ನ ಬರೆಯಲಿ ಎನ್ನುವುದು ಎಲ್ಲರ ಆಶಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *