ವಿಶ್ವಾದ್ಯಂತ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 8 ಪ್ರಾಧ್ಯಾಪಕರು

Public TV
1 Min Read

– ಬೆಂಗಳೂರು ವಿಶ್ವವಿದ್ಯಾಲಯದಿಂದ ಮತ್ತೊಂದು ಜಾಗತಿಕ ಮೈಲಿಗಲ್ಲು

ಬೆಂಗಳೂರು: 2024ರಲ್ಲಿ ವಿಶ್ವಾದ್ಯಂತದ ಟಾಪ್ 2% ವಿಜ್ಞಾನಿಗಳ ಪ್ರತಿಷ್ಠಿತ ಪಟ್ಟಿಯಲ್ಲಿ (Top Scientists List) ಬೆಂಗಳೂರು ವಿಶ್ವವಿದ್ಯಾನಿಲಯದ (Bengaluru University) ಎಂಟು ಪ್ರಾಧ್ಯಾಪಕರು (Professors) ಸ್ಥಾನ ಪಡೆದುಕೊಂಡಿದ್ದಾರೆ. ಯುಎಸ್‌ಎ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ನೆದರ್ಲ್ಯಾಂಡ್‌ನ ಎಲ್ಸೆವಿಯರ್ ಪಬ್ಲಿಷಿಂಗ್‌ನಿಂದ ವಾರ್ಷಿಕವಾಗಿ ಸೂಚ್ಯಂಕಗಳನ್ನು ಸಂಕಲಿಸಿ ಅದರ ಆಧಾರದ ಮೇಲೆ ಪ್ರಾಧ್ಯಾಪಕರನ್ನು ಗುರುತಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ, ಭೌತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ ಮತ್ತು ಗಣಿತ ವಿಭಾಗಗಳಿಗೆ ಸೇರಿದ ಪ್ರಾಧ್ಯಾಪಕರುಗಳನ್ನು ಗುರುತಿಸಿ ಗೌರವಿಸಲಾಗಿದೆ. ಚಂದ್ರಶೇಖರಯ್ಯ ಡಿ.ಎಸ್, ದೇವಿ ಎಲ್.ಗೋಮತಿ, ರುದ್ರಯ್ಯ ಎನ್, ಶಿವಕುಮಾರ್, ಸಿ.ಶ್ರೀನಿವಾಸ್, ಕುಂಬಿನರಸಯ್ಯ ಎಸ್, ಈರಯ್ಯ ಬಿ, ಮತ್ತು ವಿಷ್ಣು ಕಾಮತ್ ಅವರು ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಚೆನ್ನೈ ರಸ್ತೆಯಲ್ಲಿ ಪೀಸ್ ಪೀಸ್ ಮಾಡಿದ ಮಹಿಳೆಯ ಶವ ತುಂಬಿದ ಸೂಟ್‍ಕೇಸ್ ಪತ್ತೆ – ಕೊಲೆಯಾಗಿದ್ದು ಸೆಕ್ಸ್ ವರ್ಕರ್!

ವಿಶ್ವವಿದ್ಯಾನಿಲಯಗಳ ಪೈಕಿ ಬೆಂಗಳೂರು ವಿಶ್ವವಿದ್ಯಾನಿಲಯ ರಾಜ್ಯದ ವಿಶ್ವವಿದ್ಯಾನಿಲಯಗಳಿಂದ ಹೆಚ್ಚಿನ ಸಂಖ್ಯೆಯ ಪ್ರಾಧ್ಯಾಪಕರನ್ನು ಹೊಂದಿದ್ದು, ಮತ್ತೊಮ್ಮೆ ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದೆ. ಇದನ್ನೂ ಓದಿ: ಕರ್ನಾಟಕದ ಹಳ್ಳಿಹಳ್ಳಿಗಳಲ್ಲೂ ಜಿಯೋ – ಗಾಜನೂರು, ಪೆದ್ದನಪಾಳ್ಯ, ಹುಗ್ಯಂನಂಥ ಗ್ರಾಮಗಳಲ್ಲೂ ಟವರ್‌

ಈ ಸಾಧನೆ ಕುರಿತು ಉಪಕುಲಪತಿ ಡಾ.ಜಯಕರ ಎಸ್.ಎಂ. ಪ್ರತಿಕ್ರಿಯಿಸಿ, ಬೆಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತವಾಗಿ ಮನ್ನಣೆಯನ್ನು ಗಳಿಸಿದೆ ಮತ್ತು ಇದು ನಮ್ಮ ಪುರಸ್ಕಾರಗಳಿಗೆ ಮತ್ತೊಂದು ಹೆಮ್ಮೆಯ ಸೇರ್ಪಡೆಯಾಗಿದೆ. ವಿಶ್ವವಿದ್ಯಾನಿಲಯವು ವಿಜ್ಞಾನ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತದೆ. ಈ ಗೌರವ ಆ ಪ್ರಯತ್ನಗಳ ಫಲವಾಗಿದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಪ್ರಭಾವ ಬೀರಿದ್ದಾರೆ. ಇದು ಭವಿಷ್ಯದಲ್ಲಿ ನಮ್ಮ ವಿದ್ಯಾರ್ಥಿಗಳ ಅಭಿವೃದ್ಧಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯವು ವಿಜ್ಞಾನ ಮತ್ತು ಸಂಶೋಧನೆಯನ್ನು ಇನ್ನಷ್ಟು ಉತ್ತೇಜಿಸುತ್ತದೆ ಎಂದರು. ಇದನ್ನೂ ಓದಿ: ಮನೆಯಲ್ಲಿದ್ದ 5 ವರ್ಷದ ಮಗು ಸಾವು- ಸಾವಿನ ಸುತ್ತ ಅನುಮಾನದ ಹುತ್ತ!

Share This Article