ಇಸ್ಲಾಮಾಬಾದ್: ಸೇನಾ ನೆಲೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ 8 ಮಂದಿ ಪಾಕಿಸ್ತಾನಿ ಸೈನಿಕರು (Pakistani Soldiers) ಸಾವಿಗೀಡಾಗಿದ್ದಾರೆ.
ಬಂಡುಕೋರರು ಉತ್ತರ ವಜಿರಿಸ್ತಾನದ ಬುಡಕಟ್ಟು ಪ್ರದೇಶದ ಗಡಿಯಲ್ಲಿರುವ ಬನ್ನುನಲ್ಲಿರುವ ಸೇನಾ ಹೊರಠಾಣೆ ಮೇಲೆ ದಾಳಿ ನಡೆಸಿದರು. ಆತ್ಮಾಹುತಿ ಬಾಂಬರ್‌ಗಳು ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಸೇನಾ ನೆಲೆಯಲ್ಲಿ ಸುತ್ತುವರಿದ ಗೋಡೆಗೆ ಡಿಕ್ಕಿ ಹೊಡೆದು ದಾಳಿ ನಡೆಸಿದರು. ಪರಿಣಾಮ 8 ಸೈನಿಕರು ಮೃತಪಟ್ಟಿದ್ದಾರೆ. ಇದನ್ನೂ ಓದಿ: Trump Assassination Attempt | 48 ಗಂಟೆಯ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಟ್ರಂಪ್
ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲಾ 10 ಆಕ್ರಮಣಕಾರರನ್ನು ಸೈನಿಕರು ಕೊಂದಿದ್ದಾರೆ ಎಂದು ಮಿಲಿಟರಿ ಹೇಳಿದೆ. ಬಂಡುಕೋರರ ದಾಳಿಗೆ ಮೃತಪಟ್ಟವರಲ್ಲಿ ಏಳು ಸೇನಾ ಸದಸ್ಯರು ಮತ್ತು ಒಬ್ಬ ಅರೆಸೇನಾ ಯೋಧ ಸೇರಿದ್ದಾರೆ.
ಅಫ್ಘಾನಿಸ್ತಾನದಿಂದ ಬರುತ್ತಿರುವ ಬೆದರಿಕೆಗಳ ವಿರುದ್ಧ ಪಾಕಿಸ್ತಾನ ಸಶಸ್ತ್ರ ಪಡೆಗಳು ಸೂಕ್ತ ಕ್ರಮಗಳನ್ನು ಕೈಗೊಂಡಿವೆ. ಬಂಡುಕೋರರು ವಸತಿ ಪ್ರದೇಶಕ್ಕೆ ನುಸುಳಿ ದಾಳಿ ನಡೆಸಿದ್ದರಿಂದ 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ನೇಪಾಳದ ನೂತನ ಪ್ರಧಾನಿಯಾಗಿ ಕೆ.ಪಿ ಶರ್ಮಾ ಓಲಿ ಪ್ರಮಾಣ ವಚನ!