8 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕಳ್ಳರು ಅರೆಸ್ಟ್

Public TV
2 Min Read

ಹಾಸನ: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಸೇರಿದಂತೆ ಇತರೆ ಕಳವು ಪ್ರಕರಣ ಸಂಬಂಧ 8 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶಾಂತಿಗ್ರಾಮ ಠಾಣೆ ವ್ಯಾಪ್ತಿ

ಶಾಂತಿ ಗ್ರಾಮ ಠಾಣೆ ವ್ಯಾಪ್ತಿಯ ಕರಿಗೌಡನ ಕೊಪ್ಪಲು ಗ್ರಾಮದ ಮಂಜುನಾಥ ಎಂಬವರು ಮನೆಗಳ್ಳತನ ಪ್ರಕರಣ ಸಂಬಂಧ ಸುಮಾರು 97,000 ಬೆಲೆಯ 23ಗ್ರಾಂ ಚಿನ್ನದ ನಕ್ಲೇಸ್ 7ಗ್ರಾಂ ತೂಕದ ಓಲೆ ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ನಂತರ ಕಾರ್ಯಾಚರಣೆ ವೇಳೆ ಹಾಸನ ರೈಲ್ವೆ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ದುದ್ದ ಪೊಲೀಸ್ ಠಾಣೆಯ ಒಂದು ಪ್ರಕರಣ ಮತ್ತು ಹಾಸನ ಬಡಾವಣೆ ಠಾಣೆಯ ಎರಡು ಮನೆ ಕಳ್ಳತನ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಒಟ್ಟು 6 ಲಕ್ಷ ರೂ. ಬೆಲೆಯ ಸುಮಾರು 140 ಗ್ರಾಂ ತೂಕದ ಚಿನ್ನಾಭರಣ ಮತ್ತು 450 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಪಿ ಶ್ರೀನಿವಾಸಗೌಡ ಅವರು ಮಾಹಿತಿ ನೀಡಿದರು. ಇದನ್ನೂ ಓದಿ: 550 ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ವ್ಯಕ್ತಿ – ವೀಡಿಯೋ ವೈರಲ್


ಬೇಲೂರು ಠಾಣೆ ವ್ಯಾಪ್ತಿ
ಬೇಲೂರು ತಾಲೂಕಿನ ಸೋಂಪುರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕೋಲಾರ ಜಿಲ್ಲೆಯ ನರಸಾಪುರ ಗ್ರಾಮದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಕಳ್ಳತನ ಪ್ರಕರಣಗಳು ಬಯಲಾಗಿದೆ. ಈ ಸಂಬಂಧ 53 ಗ್ರಾಂ ಚಿನ್ನಾಭರಣ ಮತ್ತು 25800 ಮೌಲ್ಯದ ಎಲ್‍ಇಡಿ ಟಿವಿ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಶಾಂತಿಗ್ರಾಮ ಠಾಣಾ ವ್ಯಾಪ್ತಿಯ ಸರಗಳ್ಳತನ ಪ್ರಕರಣದಲ್ಲಿ 6 ಲಕ್ಷ ಮೌಲ್ಯದ 140 ಗ್ರಾಂ ಚಿನ್ನಾಭರಣ, 450 ಗ್ರಾಂ ಬೆಳ್ಳಿ ವಸ್ತುಗಳು, ಬೇಲೂರು ಠಾಣೆ ವ್ಯಾಪ್ತಿಯ ಎರಡು ಪ್ರಕರಣಗಳಲ್ಲಿನ 53 ಗ್ರಾಂ ಚಿನ್ನದ ಆಭರಣ ಮತ್ತು 25,800 ಮೌಲ್ಯದ ಎಲ್ ಇಡಿ ಟಿವಿ ಸೇರಿದಂತೆ ಒಟ್ಟು 8 ಲಕ್ಷಕ್ಕೂ ಅಧಿಕ ಆಭರಣ ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲ ಪ್ರಕರಣ ಸಂಬಂಧ ಒಟ್ಟು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‍ಪಿ ತಿಳಿಸಿದರು. ಇದನ್ನೂ ಓದಿ: ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾದಲ್ಲಿ ಆಗಮಿಸಿದ ಸೋಮಶೇಖರ್

ಈ ಪ್ರಕರಣಗಳನ್ನು ಭೇದಿಸಲು ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ, ಹೊಳೆನರಸೀಪುರ ಉಪ ವಿಭಾಗದ ಉಪಾಧೀಕ್ಷಕ ಲಕ್ಷ್ಮಣೇಗೌಡ, ಅರಸೀಕೆರೆ ಉಪವಿಭಾಗದ ಡಿವೈಎಸ್‍ಪಿ ನಾಗೇಶ್ ಮಾರ್ಗದರ್ಶನದಲ್ಲಿ ಶಾಂತಿಗ್ರಾಮ ಸಿಪಿಐ ಪಿ.ಸುರೇಶ್, ಸೇರಿದಂತೆ ಸಿಬ್ಬಂದಿ ವರ್ಗದವರಿಗೆ ಎಸ್‍ಪಿ ಅಭಿನಂದನೆ ಸಲ್ಲಿಸಿದರು.

Share This Article
Leave a Comment

Leave a Reply

Your email address will not be published. Required fields are marked *