ಡಮಾಸ್ಕಸ್: ಸಿರಿಯಾದ (Syria) ಮಸೀದಿಯೊಂದರಲ್ಲಿ (Mosque) ನಮಾಜ್ ವೇಳೆ ನಡೆದ ಬಾಂಬ್ ಸ್ಪೋಟಗೊಂಡಿದ್ದು, 8 ಜನ ಸಾವನ್ನಪ್ಪಿ, 18 ಜನ ಗಾಯಗೊಂಡಿದ್ದಾರೆ.
ಹೋಮ್ಸ್ ನಗರದ ವಾಡಿ ಅಲ್-ದಹಾಬ್ ಸಮೀಪದ ಇಮಾಮ್ ಅಲಿ ಬಿನ್ ಅಬಿ ತಾಲಿಬ್ ಮಸೀದಿಯೊಳಗೆ ಈ ಸ್ಫೋಟ ಸಂಭವಿಸಿದೆ. ಒಂದು ವರ್ಷದ ಹಿಂದೆ ಇಸ್ಲಾಮಿಕ್ ಆಡಳಿತ ಬಂದ ನಂತರ ಇದು ಪ್ರಾರ್ಥನಾ ಸ್ಥಳದಲ್ಲಿ ನಡೆದ ಎರಡನೇ ಸ್ಫೋಟವಾಗಿದೆ. ಕಳೆದ ಜೂನ್‌ನಲ್ಲಿ ಡಮಾಸ್ಕಸ್‌ನ ಚರ್ಚ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 25 ಜನ ಸಾವನ್ನಪ್ಪಿದ್ದರು. ಇದನ್ನೂ ಓದಿ: ʻಯುದ್ಧವಲ್ಲ, ಪ್ರತೀಕಾರʼ – ಸಿರಿಯಾದಲ್ಲಿ ಐಸಿಸ್ ಉಗ್ರರ ವಿರುದ್ಧ ಅಮೆರಿಕ ʻಆಪರೇಷನ್ ಹಾಕೈʼ ಶುರು
ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಮಸೀದಿಯನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲಾಗಿದೆ. ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಮಸೀದಿಯೊಳಗೆ ಇರಿಸಲಾಗಿದ್ದ ಸ್ಫೋಟಕದಿಂದ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಹೋಮ್ಸ್ ಪ್ರದೇಶ, ಸಿರಿಯಾದ ಅಂತರ್ಯುದ್ಧದ ಸಮಯದಲ್ಲಿ ಭಾರೀ ಹಿಂಸಾಚಾರದ ಸ್ಥಳವಾಗಿತ್ತು.
ಇದರ ನಡುವೆ ಇತ್ತೀಚೆಗೆ ನಡೆದ ಐಸಿಸ್ ಉುಗ್ರರ ದಾಳಿಯಲ್ಲಿ ಮೂವರು ಅಮೆರಿಕನ್ನರು (Americans) ಸಾವನ್ನಪ್ಪಿದ್ದರು. ಈ ಹಿನ್ನೆಲೆ ಅಮೆರಿಕ ಪ್ರತೀಕಾರ ಕೈಗೊಂಡಿದೆ. ಸಿರಿಯಾದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಗುಂಪಿನ (ISIS) ವಿರುದ್ಧ ಅಮೆರಿಕದ ಪಡೆಗಳು ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿವೆ. ಇದನ್ನೂ ಓದಿ: ಸಿರಿಯಾ ಮಿಲಿಟರಿ ಹೆಡ್‌ಕ್ವಾಟ್ರಸ್ ಮೇಲೆ ಇಸ್ರೇಲ್ ದಾಳಿ – ಲೈವ್‌ನಿಂದಲೇ ಎದ್ದು ಓಡಿದ ಟಿವಿ ಆಂಕರ್

