ಬೇಸಿಗೆಯಲ್ಲಿ ಕೂಲ್ ಆಗಿರಲು ನಿಮ್ಮ ಡ್ರೆಸ್ಸಿಂಗ್ ಹೇಗಿರಬೇಕು? ಇಲ್ಲಿದೆ 8 ಟಿಪ್ಸ್

Public TV
3 Min Read

 

ಷ್ಟು ದಿನ ಚಳಿಗಾಲವಿತ್ತು. ಯಾವುದೇ ಉಡುಪು ತೊಟ್ಟರೂ ಅದರ ಮೇಲೆ ಜ್ಯಾಕೆಟ್ ಅಥವಾ ಸ್ವೆಟರ್ ಮತ್ತು ಸ್ಟೋಲ್ ಧರಿಸಿ ಬೆಚ್ಚಗಿರುತ್ತಿದ್ರಿ. ಆದ್ರೆ ಚಳಿಗಾಲ ಕಳೆದು ಇನ್ನೇನು ಬೇಸಿಗೆ ಸಮೀಪಿಸುತ್ತಿದೆ. ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು ಅಂದ್ರೆ ನಮ್ಮ ಆಹಾರ, ಉಡುಗೆ- ತೊಡುಗೆಯೂ ಬದಲಾಗಬೇಕು. ಬೇಸಿಗೆಯಲ್ಲಿ ಕೂಲ್ ಆಗಿರಲು ಯಾವ ರೀತಿ ಉಡುಪು ಧರಿಸಬೇಕು ಅನ್ನೋದಕ್ಕೆ ಇಲ್ಲಿದೆ 7 ಟಿಪ್ಸ್:

 

1. ಸಡಿಲವಾದ ಉಡುಪು ಧರಿಸಿ
ಬೇಸಿಗೆಯಲ್ಲಿ ನಿಮ್ಮ ಉಡುಪು ಸಡಿಲವಾಗಿದ್ದಷ್ಟೂ ಆರಾಮಾಗಿ ಇರಬಹುದು. ಬಿಗಿಯಾದ ಉಡುಪು ತೊಡುವುದರಿಂದ ಸೆಕೆ ಉಂಟಾಗಿ ದೇಹ ಹೆಚ್ಚು ಬೆವರುತ್ತದೆ. ಹೀಗಾಗಿ ಸಡಿಲವಾದ ಬಟ್ಟೆ ತೊಟ್ಟರೆ ಕೂಲ್ ಆಗಿ ಇರಬಹುದು. ಸ್ಲೀವ್‍ಲೆಸ್ ಧರಿಸಿ ಹೊರಗೆ ಸುತ್ತಾಡಿದ್ರೆ ಮೈ ಕೈ ಟ್ಯಾನ್ ಆಗುತ್ತದೆ. ಹೀಗಾಗಿ ಹೊರಗೆ ಓಡಾಡುವಾಗ ಫುಲ್ ಸ್ಲೀವ್ಸ್ ಇರೋ ಬಟ್ಟೆ ಧರಿಸಿದ್ರೆ ಒಳ್ಳೆಯದು. ಟೈಟ್ ಟೀ ಶರ್ಟ್ ಮತ್ತು ಟೈಟ್ ಜೀನ್ಸ್ ತೊಡುವುದರ ಬದಲು ಆರಾಮಾದ ಕುರ್ತಾ, ಧೋತಿ ಪ್ಯಾಂಟ್ ಧರಿಸಿದ್ರೆ ಕೂಲ್ ಆಗಿರಬಹುದು.

2. ಕಾಟನ್ ಬಟ್ಟೆಗಳನ್ನ ಧರಿಸಿ
ಪಾಲಿಸ್ಟರ್ ಮತ್ತು ರೇಯಾನ್ ಬಟ್ಟೆಗಿಂತ ಕಾಟನ್ ಉಡುಪುಗಳು ಬೇಸಿಗೆಗೆ ಸೂಕ್ತ. ಕಾಟನ್ ಬಟ್ಟೆ ಬೆವರನ್ನು ಬೇಗನೆ ಹೀರುತ್ತದೆ ಹಾಗೂ ಬೇಗನ ಒಣಗುತ್ತದೆ. ಆದ್ದರಿಂದ ಕಾಟನ್ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸಿ.

3. ಬಟ್ಟೆಗಳನ್ನ ಸ್ವಚ್ಛವಾಗಿಟ್ಟುಕೊಳ್ಳಿ
ಬೇಸಿಗೆಯಲ್ಲಿ ದೇಹದಲ್ಲಿ ಹೆಚ್ಚು ಬೆವರು ಬರೋದ್ರಿಂದ ಕುತ್ತಿಗೆ ಹಾಗೂ ತೋಳಿನ ಭಾಗಗಳಲ್ಲಿ ಕಲೆಗಳಾಗುತ್ತವೆ. ಹಾಗೂ ಬಟ್ಟೆಯನ್ನ ಒಂದು ಬಾರಿ ತೊಟ್ಟು ಒಗೆಯದೇ ಹಾಗೇ ಧರಿಸಿದ್ರೆ ದುರ್ವಾಸನೆ ಬರುತ್ತದೆ. ಆದ್ದರಿಂದ ಒಂದು ಬಾರಿ ಧರಿಸಿದ ಉಡುಪನ್ನು ಶುಭ್ರವಾಗಿ ಒಗೆದ ನಂತರವೇ ಮತ್ತೊಮ್ಮೆ ಧರಿಸಿ.

4. ಬೀಡಿಂಗ್ ಹಾಗೂ ಮೆಟಲ್ ವರ್ಕ್ ಇರುವಂತಹ ಬಟ್ಟೆಗಳನ್ನ ದೂರವಿಡಿ
ಚಂದದ ಕಸೂತಿ ಮಾಡಿರುವ ಉಡುಪು ಧರಿಸಿದ್ರೆ ಗ್ರ್ಯಾಂಡ್ ಆಗಿ ಕಣ್ತೀರ ನಿಜ. ಆದ್ರೆ ಬೇಸಿಗೆಯಲ್ಲಿ ಇಂತಹ ಉಡುಪುಗಳನ್ನ ಸಾಧ್ಯವಾದಷ್ಟು ಅವಾಯ್ಡ್ ಮಾಡಿ. ಬಟ್ಟೆಯ ಜೊತೆಗೆ ಮಣಿ, ಬೀಡಿಂಗ್ ಮತ್ತು ಮೆಟಲ್ ವರ್ಕ್ ಇದ್ದರೆ ಅದರ ತೂಕವೂ ಹೆಚ್ಚಾಗುತ್ತದೆ. ಕೆಲವೊಮ್ಮೆ ವರ್ಕ್ ಮಾಡಿದ ಉಡುಪು ಮೈಗೆ ಚುಚ್ಚುವುದಲ್ಲದೆ ಹೆಚ್ಚು ಬೆವರುವಂತೆ ಮಾಡುತ್ತದೆ.

5. ಹೊರಗೆ ಸುತ್ತಡುವಾಗ ಹ್ಯಾಟ್, ಸ್ಕಾರ್ಫ್ ಮತ್ತು ಸನ್‍ಗ್ಲಾಸಸ್ ಜೊತೆಯಲ್ಲಿರಲಿ
ಹೊರಗೆ ಸುತ್ತಲು ಹೋದಗ ಸ್ಕಾರ್ಫ್, ಸನ್‍ಗ್ಲಾಸ್ ಮತ್ತು ಟೋಪಿಯನ್ನು ಬಳಸಿ. ಮನೆಯಿಂದ ಹೊರಡುವ ಮುನ್ನ ಸನ್‍ಸ್ಕ್ರೀನ್ ಹಚ್ಚಿಕೊಳ್ಳಲು ಮರೆಯಬೇಡಿ. ಅಂಗಡಿಗೆ ಅಥವಾ ಇಲ್ಲೇ ಸ್ವಲ್ಪ ದೂರ ಹೋಗಿ ಬರುವಿರಾದ್ರೆ ಛತ್ರಿ ಬಳಸಿ ನಿಮ್ಮ ತ್ವಚೆ ಟ್ಯಾನ್ ಆಗದಂತೆ ಮುನ್ನೆಚ್ಚರಿಕೆ ವಹಿಸಿ.

6. ಲೈನಿಂಗ್ ಇಲ್ಲದ ಉಡುಪು ಧರಿಸಿ
ಟಾಪ್, ಕೋಟ್ ಅಥವಾ ಸ್ಕರ್ಟ್‍ಗಳಲ್ಲಿ ಲೈನಿಂಗ್ ಇದೆ ಎಂದರೆ ನೀವು ಎರಡು ಪದರದ ಬಟ್ಟೆಯನ್ನು ಧರಿಸಿರ್ತೀರ. ಅದರಿಂದ ಹೆಚ್ಚು ಬೆವರುತ್ತೀರ. ಹೀಗಾಗಿ ಲೈನಿಂಗ್ ಇಲ್ಲದಂತಹ ಬಟ್ಟೆಯನ್ನ ಧರಿಸಿ. ಕಾಟನ್ ಉಟುಪುಗಳು ಬೇಸಿಗೆಗೆ ಹೇಳಿ ಮಾಡಿಸಿದ್ದು.

7. ತಿಳಿ ಬಣ್ಣದ ಉಡುಪನ್ನೇ ಆಯ್ಕೆ ಮಾಡಿಕೊಳ್ಳಿ
ಗಾಢ ಬಣ್ಣದ ಉಡುಪುಗಳು ಬಿಸಿಲನ್ನ ಹೆಚ್ಚು ಹೀರಿಕೊಳ್ಳುತ್ತವೆ. ಕಪ್ಪು ಬಣ್ಣದ ಉಡುಪು ಬಿಸಿಲನ್ನ ಹೀರಿಕೊಂಡು ಹೊರಹೋಗಲು ಬಿಡುವುದಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ತಿಳಿ ಬಣ್ಣದ ಉಡುಪನ್ನ ಧರಿಸಿ. ಬಿಳಿ ಬಣ್ಣದ ಉಡುಪು ಹೆಚ್ಚು ಬಿಸಿಲನ್ನ ಹೀರಿಕೊಳ್ಳುವುದಿಲ್ಲ. ಹೀಗಾಗಿ ಬಿಳಿ, ತಿಳಿ ಗುಲಾಬಿ, ತಿಳಿ ಹಳದಿಯಂತಹ ಬಣ್ಣಗಳ ಉಡುಪನ್ನ ಧರಿಸಿ.

8. ಆಭರಣಗಳನ್ನ ಆದಷ್ಟೂ ಕಡಿಮೆ ತೊಟ್ಟುಕೊಳ್ಳಿ
ಬೇಸಿಗೆಯಲ್ಲಿ ಹೆಚ್ಚು ಬೆವರೋದ್ರಿಂದ ಹೆಚ್ಚಾಗಿ ಆಭರಣ ತೊಟ್ಟುಕೊಂಡರೆ ಮತ್ತೆ ಕಿರಿಕಿರಿಯಾಗುತ್ತದೆ. ಹೀಗಾಗಿ ಆಭರಣಗಳನ್ನ ಸಾಧ್ಯವಾದಷ್ಟು ಕಡಿಮೆ ತೊಟ್ಟುಕೊಳ್ಳಿ. ಲೈಟ್ ಆಗಿದ್ದಷ್ಟೂ ನೀವು ಕೂಲ್ ಆಗಿರಬಹುದು ಅನ್ನೋದನ್ನ ಮರೀಬೇಡಿ.

Share This Article
Leave a Comment

Leave a Reply

Your email address will not be published. Required fields are marked *