– ಶ್ವಾನದ ವಿಶೇಷತೆ ಏನು?
ಬೆಂಗಳೂರು: ನಗರದ ನಿವಾಸಿಯೊಬ್ಬರ 8 ಕೋಟಿ ರೂ. ಮೌಲ್ಯದ ನಾಯಿಯನ್ನು ಕದ್ದಿದ್ದು, ಇದೀಗ ನಾಯಿ ಹುಡುಕಿಕೊಟ್ಟರೆ 1 ಲಕ್ಷ ಬಹುಮಾನ ನೀಡುವುದಾಗಿ ಶ್ವಾನದ ಮಾಲೀಕ ತಿಳಿಸಿದ್ದಾರೆ.
ಸಿಲಿಕಾನ್ ಸಿಟಿ ಮಂದಿಗೆ ಪೆಟ್ಸ್ ಸಾಕುವುದು ಒಂದು ಕ್ರೇಜ್. ಹೀಗಾಗಿ ನಗರದಲ್ಲಿ ಲಕ್ಷಾಂತರ ಬೆಲೆ ಬಾಳುವ ವೆರೈಟಿ ವೆರೈಟಿ ಶ್ವಾನಗಳನ್ನ ಕಾಣಬಹುದಾಗಿದೆ. ಆದರೆ ಬೆಂಗಳೂರಲ್ಲಿ 8 ಕೋಟಿ ರೂಪಾಯಿಯ ನಾಯಿಯೊಂದು ಮಿಸ್ ಆಗಿದೆ. ಈ ಬೆಲೆ ಬಾಳುವ ಸೆಲೆಬ್ರಿಟಿ ಡಾಂಗೀಯನ್ನ ಡಿಸೆಂಬರ್ 12ರಂದು ಶ್ರೀನಗರದ ಮನೆಯೊಂದರಲ್ಲಿ ಕಟ್ಟಿದಾಗ ಯಾರೋ ಬಂದು ಕದ್ದಿದ್ದಾರೆ.
ಇದು ಸೆಲೆಬ್ರಿಟಿ ಡಾಗ್ ಬ್ರೀಡರ್ ಸತೀಶ್ ಎಂಬವರಿಗೆ ಸೇರಿದ್ದಾಗಿದೆ. ಇದೀಗ ಸತೀಶ್, ನಾಯಿಕಳ್ಳರನ್ನ ಹುಡುಕಿ ಹಾಗೆಯೇ ಪಪ್ಪಿಯನ್ನು ಹುಡುಕಿಕೊಂಡಿ ಎಂದು ಹನುಮಂತ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ನಾಯಿ ಚೀನಾ ದೇಶದ ಅಲಕ್ಸನ್ ಮ್ಯಾಲಮ್ಯೂಟ್ ಎಂಬ ಜಾತಿಗೆ ಸೇರಿದ್ದಾಗಿದೆ. ಕೆಂಪು ಮತ್ತು ಬಿಳಿ ಬಣ್ಣವನ್ನು ಶ್ವಾನ ಹೊಂದಿದೆ. ಇದರ ವಯಸ್ಸು 3 ವರ್ಷವಾಗಿದ್ದು, ಹಸ್ಕಿ ನಾಯಿಯನ್ನು ಹೋಲುತ್ತದೆ. 8 ಕೋಟಿ ರೂಪಾಯಿ ಬೆಲೆ ಬಾಳುತ್ತಿದ್ದು, ಈ ನಾಯಿಯನ್ನ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ನಾಯಿ ಮಾಲೀಕರು ಘೋಷಿಸಿದ್ದಾರೆ.