8 ವರ್ಷದ ಬಾಲಕನ ಅಪಹರಿಸಿ ರೇಪ್‍ಗೈದು ಕರೆಂಟ್ ಶಾಕ್ ಹೊಡಿಸಿ ಕೊಂದ

Public TV
2 Min Read

– ನಶೆಯಲ್ಲಿ ಆತ್ಮಹತ್ಯೆಗೆ ಶರಣಾದ ಸಲಿಂಗಿ

ಭೋಪಾಲ್: ಎಂಟು ವರ್ಷದ ಬಾಲಕನನ್ನು ಅಪಹರಿಸಿ ಅತ್ಯಾಚಾರಗೈದು ವಿದ್ಯುತ್ ಶಾಕ್ ಹೊಡೆಸಿ ಕೊಲೆಗೈದಿರುವ ಭಯಾನಕ ಘಟನೆ ಮಧ್ಯಪ್ರದೇಶದ ನೀಲಗಂಗಾ ಇಲಾಖೆಯ ನ್ಯೂ ಇಂದಿರಾನಗರದದಲ್ಲಿ ನಡೆದಿದೆ. ಕೊಲೆಯ ಬಳಿಕ ಆರೋಪಿ ಮದ್ಯದ ನಶೆಯಲ್ಲಿ ಮನೆಯಿಂದ ದೂರದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

25 ವರ್ಷದ ವ್ಯಕ್ತಿ ನ್ಯೂ ಇಂದಿರಾನಗರದ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಅಂಗಳದಲ್ಲಿ ಆಟವಾಡುತ್ತಿದ್ದ ಮನೆ ಓನರ್ ಮಗನನ್ನು ತಿಂಡಿ ಕೊಡುವದಾಗಿ ಹೇಳಿ ಕರೆದಿದ್ದಾನೆ. ಒಳಗೆ ಬಂದ ಬಾಲಕ ಮೇಲೆ ಬಾಡಿಗೆದಾರ ಅತ್ಯಾಚಾರಗೈದಿದ್ದಾನೆ. ನಂತರ ನೀರು ಬಿಸಿ ಮಾಡುವ ವಿದ್ಯುತ್ ಸಾಧನದಿಂದ ಶಾಕ್ ಹೊಡಿಸಿ ಕೊಲೆ ಮಾಡಿದ್ದಾನೆ.

ಇತ್ತ ಮಗ ಕಾಣದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಕೊನೆಗೆ ಮಗ ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೋಮವಾರ ಕಾಣೆಯಾಗಿದ್ದ ಬಾಲಕನ ಶವ ಬಾಡಿಗೆದಾರನ ಮನೆಯಲ್ಲಿರೋದನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಬಾಲಕನ ಶವ ಸಿಗುತ್ತಿದ್ದಂತೆ ಸ್ಥಳಕ್ಕೆ ಐಜಿ ರಾಕೇಶ್ ಗುಪ್ತಾ, ಡಿಐಡಿ ಮನೀಷ್ ಕಪೂರಿಯಾ, ಎಸ್.ಪಿ ಸತ್ಯೇಂದ್ರ ಕುಮಾರ್ ಶುಕ್ಲಾ ಸೇರಿದಂತೆ ಎಫ್‍ಎಸ್‍ಎಲ್ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಮನೆಗೆ ಬಂದ ಮಗಳ ಗೆಳತಿಯನ್ನ ಅತ್ಯಾಚಾರಗೈದ ದುಷ್ಟ ತಂದೆ

ಮರಣೋತ್ತರ ಪರೀಕ್ಷೆಗಾಗಿ ಶವವನ್ನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಎಫ್‍ಎಸ್‍ಎಲ್ ಅಧಿಕಾರಿಗಳು ಬಾಲಕ ಮತ್ತು ಆರೋಪಿಯ ಬಟ್ಟೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಮದ್ಯ ಸೇವಿಸಿದ ಆರೋಪಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ನನ್ನಿಂದ ಅಪ್ಪ, ಅಮ್ಮನ ಗೌರವಕ್ಕೆ ಧಕ್ಕೆ ಆಯ್ತು-ಡೆತ್ ನೋಟ್ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ

ಕಳೆದ ಮೂರು ದಿನಗಳಿಂದಲೂ ಆತ ಕೆಲಸಕ್ಕೆ ಹೋಗಿರಲಿಲ್ಲ. ರಾತ್ರಿ ಸುಮಾರು 8 ಗಂಟೆಗೆ ಮಗು ಕಾಣೆಯಾಗಿರುವ ವಿಷಯವನ್ನ ನಾನೇ ಆರೋಪಿಗೆ ಹೇಳಿದೆ. ಆಗ ಅವನು ಸಹ ನಮ್ಮ ಜೊತೆಯಲ್ಲಿಯೇ ಬಾಲಕನಿಗಾಗಿ ಹುಡುಕಾಟ ನಡೆಸಿದ್ದನು. ಆನಂತರ ಆತ ತನ್ನ ಕೋಣೆಯಲ್ಲಿ ಮಲಗಿದನು. ಸಂಜೆ ಸಮಯದಲ್ಲಿ ಆರೋಪಿ ಮನೆಯಿಂದ ಯಾವುದೇ ಗಲಾಟೆ, ಸದ್ದು ಕೇಳಿಸಿಲ್ಲ. ಹಾಗಾಗಿ ಅವನ ಮೇಲೆ ನಮಗೆ ಅನುಮಾನ ಬಂದಿರಲಿಲ್ಲ ಎಂದು ಆರೋಪಿಯ ನೆರೆಮನೆಯ ಮಹಿಳೆ ಹೇಳಿದ್ದಾರೆ. ಇದನ್ನೂ ಓದಿ: ಮಗಳಿಗೆ ಮದ್ಯ ಕುಡಿಸಿ ಅತ್ಯಾಚಾರಗೈದು ಕೊಲೆ – ಚಿಕ್ಕಪ್ಪ ಅರೆಸ್ಟ್

Share This Article
Leave a Comment

Leave a Reply

Your email address will not be published. Required fields are marked *