ಪೋರ್ನ್ ಬೆಡಗಿಯ ಫೋಟೋ ಕಳುಹಿಸಿ 75ರ ವೃದ್ಧನಿಗೆ ಮಹಿಳೆಯಿಂದ 18 ಲಕ್ಷ ರೂ. ಟೋಪಿ!

Public TV
2 Min Read

ಲಂಡನ್: ಅಮೆರಿಕ ಪೋರ್ನ್ ಬೆಡಗಿಯ ಫೋಟೋ ನೋಡಿ ಬೆರಗಾಗಿ 75ರ ವೃದ್ಧನೊಬ್ಬ ಮೋಸ ಹೋಗಿ 18 ಲಕ್ಷಕ್ಕೂ ಅಧಿಕ ರೂ. (20 ಸಾವಿರ ಪೌಂಡ್) ಕಳೆದುಕೊಂಡಿದ್ದಾನೆ.

ಸ್ಮಿಟನ್ ಸೈಮನ್ ಫ್ರಾಸ್ಟ್ (75) ಮೋಸ ಹೋದ ವೃದ್ಧ. ದಕ್ಷಿಣ ಆಫ್ರಿಕಾದ ಇವಾ ಹಣ ಎಗರಿಸಿದ ಮಹಿಳೆ. ಸೆಕ್ಸ್ ಗಾಗಿ ಭಾರೀ ಮೊತ್ತದ ಹಣವನ್ನು ಕಳೆದುಕೊಂಡು ವೃದ್ಧ ಈಗ ಪರದಾಡುತ್ತಿದ್ದಾನೆ.

ಏನಿದು ಪ್ರಕರಣ?:
ಸ್ಮಿಟನ್ ಸೈಮನ್ ಫ್ರಾಸ್ಟ್ ಪತ್ನಿ 10 ವರ್ಷಗಳ ಹಿಂದೆಯೇ ವಿಚ್ಛೇದನ ಪಡೆದು ದೂರವಾಗಿದ್ದಳು. ಇದರಿಂದಾಗಿ ಸ್ಮಿಟನ್ ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದ. ಈ ವೇಳೆ ರಿಯಲ್ ಸೆಕ್ಸ್ ಕಾಂಟ್ಯಾಕ್ಟ್ ವೆಬ್‍ಸೈಟ್‍ಗೆ 2017ರ ಫೆಬ್ರವರಿಯಲ್ಲಿ ನೊಂದಣಿಯಾಗಿದ್ದ. ಈ ವೆಬ್‍ಸೈಟ್ ಮೂಲಕ ಇವಾ ಎನ್ನುವ ಆಫ್ರಿಕಾ ಮಹಿಳೆ ಪರಿಚಯವಾಗಿದ್ದಾಳೆ.

ಇವಾ ಫೋಟೋ ಒಂದನ್ನು ಕಳುಹಿಸಿದ್ದಾಳೆ. ಅದನ್ನು ನೋಡಿದ ಸ್ಮಿಟನ್‍ಗೆ ಪ್ರೀತಿ ಹುಟ್ಟಿಕೊಂಡಿದೆ. ನನ್ನ ತಂದೆಗೆ ಸೇರಿರುವ 50 ಲಕ್ಷ ಪೌಂಡ್ ಆಸ್ತಿಯ ವಿಚಾರವು ನ್ಯಾಯಾಲಯದಲ್ಲಿದೆ. ಹೀಗಾಗಿ ನನಗೆ ಒಂದಿಷ್ಟು ಹಣದ ಸಹಾಯ ಮಾಡು ಎಂದು ಇವಾ ಕೇಳಿಕೊಂಡಿದ್ದಾಳೆ. ಆಕೆಯ ಮಾತಿಗೆ ಕರಗಿದ ಸ್ಮಿಟನ್ ಉಳಿತಾಯ ಖಾತೆ, ಕ್ರೆಡಿಟ್ ಕಾರ್ಡ್ ಹಾಗೂ ಎರಡು ಸಾಲದ ಮೂಲಕ 18 ಲಕ್ಷಕ್ಕೂ ಅಧಿಕ ರೂ. (28 ಸಾವಿರ ಡಾಲರ್) ಕಳುಹಿಸಿದ್ದಾನೆ. ಅಷ್ಟೇ ಅಲ್ಲದೇ ಆಕೆ ಅಗಸ್ಟ್ ನಲ್ಲಿ ಇಂಗ್ಲೆಂಡಿಗೆ ಬರಲಿಕ್ಕೆ ವಿಮಾನ ಟಿಕೆಟ್ ಕೂಡ ಬುಕ್ ಮಾಡಿದ್ದನಂತೆ.

ಇವಾ ಹಣ ಮರಳಿಸುತ್ತಾಳೆ ಎನ್ನುವ ನಂಬಿಕೆ ಇತ್ತು. ಆಕೆಯೊಂದಿಗೆ ಜೀವನ ನಡೆಸಲು ಮನೆ ಖರೀದಿ ಮಾಡಿದ್ದೆ. ಆದರೆ ಈಗ ಹಣವೂ ಇಲ್ಲದೆ, ಅವಳು ಇಲ್ಲದೆ ಏಕಾಂಗಿಯಾಗಿ ಉಳಿಯಬೇಕಾಗಿದೆ. ಆಕೆಯನ್ನು ಸಂಪರ್ಕಿಸಲು ಪ್ರತ್ನಿಸಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ಮಾಹಿತಿ ಸಿಕ್ಕಿದೆ. ಇತ್ತ ನಾನು ಪಡೆದಿದ್ದ ಸಾಲದ ಮೊತ್ತವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ವೃದ್ಧ ಸ್ಮಿಟನ್ ಅಳಲುತೊಡಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನೀಲಿ ಚಿತ್ರ ಬೆಡಗಿ ಬ್ರಾಯಾ, ನನ್ನ ಹೆಸರು, ಫೋಟೋ ಬಳಸಿಕೊಂಡು ಹಣ ದೋಚುತ್ತಿದ್ದಾರೆ. ಇದೇ ಮೊದಲಲ್ಲ ಈ ಹಿಂದೆ ಇಂತಹ ಅನೇಕ ಪ್ರಕರಣಗಳು ನಡೆದಿವೆ ಎಂದು ಪ್ರತಿಕ್ರಿಯಿಸಿದ್ದಾಳೆ.

ಮಹಿಳೆ ಘಾನಾ ದೇಶದ ರಾಜಧಾನಿ ಅಕ್ರಾದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನುವ ಶಂಕೆಯನ್ನು ಸ್ಮಿಟನ್ ವ್ಯಕ್ತಪಡಿಸಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *