Zika virus | ರಾಜ್ಯದಲ್ಲಿ ಝಿಕಾ ವೈರಸ್‌ಗೆ ಮೊದಲ ಬಲಿ – ಬೆಂಗಳೂರಲ್ಲೂ ಹೈ ಅಲರ್ಟ್‌

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಝಿಕಾ ವೈರಸ್‌ಗೆ  (Zika virus) ಮೊದಲ ಬಲಿಯಾಗಿದೆ. ಶಿವಮೊಗ್ಗದ (Shivamogga) ಮೂಲದ 73 ವರ್ಷದ ವ್ಯಕ್ತಿ ಝಿಕಾ ವೈರಸ್‌ಗೆ ಬಲಿಯಾಗಿದ್ದಾರೆ.

ಕಳೆದ ಜೂನ್ 24ರಂದು ವ್ಯಕ್ತಿಗೆ ಝಿಕಾ ವೈರಸ್ ಕಾಣಿಸಿಕೊಂಡಿದ್ದು, ಟೆಸ್ಟ್ ಮಾಡಿಸಿದಾಗ ವೈರಸ್ ಪತ್ತೆಯಾಗಿತ್ತು. ಈವರೆಗೆ ರಾಜ್ಯದಲ್ಲಿ ಒಟ್ಟು 9 ಝಿಕಾ ವೈರಸ್ ಕೇಸ್‌ಗಳು ಪತ್ತೆಯಾಗಿವೆ. ಈ ಪೈಕಿ ಶಿವಮೊಗ್ಗದಲ್ಲಿ ಮೂರು ಹಾಗೂ ಬೆಂಗಳೂರಲ್ಲಿ (Bengaluru) 6 ಕೇಸ್‌ಗಳು ಪತ್ತೆಯಾಗಿವೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ – 30 ನಿಮಿಷದ ಮಳೆಗೆ ಕೆರೆಯಂತಾದ ಬೆಂಗಳೂರು

ಬೆಂಗಳೂರಿನಲ್ಲಿ ಮೂವರು ಗರ್ಭಿಣಿಯರಿಗೆ ಝಿಕಾ ಅಟ್ಯಾಕ್:
ಕಳೆದ ಒಂದು ದಿನದ ಹಿಂದೆಯಷ್ಟೇ ಬೆಂಗಳೂರಿನಲ್ಲಿ 6 ಮಂದಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. 6 ಕೇಸ್‌ಗಳ ಪೈಕಿ ಮೂರು ಕೇಸ್‌ಗಳು ಗರ್ಭಿಣಿಯರಲ್ಲಿ ಪತ್ತೆಯಾಗಿದೆ. ಗರ್ಭಿಣಿಯರಲ್ಲಿ ವೈರಸ್ ಪತ್ತೆಯಾಗಿದ್ದು ಹೇಗೆ ಅನ್ನೋ ಬಗ್ಗೆ ವೈದ್ಯರು ತಲೆ ಕೆಡಿಸಿಕೊಂಡಿದ್ದಾರೆ. ಮೂವರು ಗರ್ಭಿಣಿಯರಲ್ಲಿ ಒಬ್ಬರು ಅಸ್ಸಾಂ ಮೂಲದವರು ಒಂದು ವರ್ಷದಿಂದ ಜಿಗಣಿ ಅಲ್ಲಿ ಇದ್ದಾರೆ. ಉಳಿದ ಇಬ್ಬರು ಗರ್ಭಿಣಿಯರು ಜಿಗಣಿಯವರೇ ಆಗಿದ್ದಾರೆ. ಒಬ್ಬರಿಗೆ ಹೆರಿಗೆಯಾಗಿದ್ದು ತಾಯಿ-ಮಗು ಆರೋಗ್ಯವಾಗಿದ್ದಾರೆ. ಇಬ್ಬರು ಗರ್ಭಿಣಿಯರು ವೈದ್ಯರ ನಿಗಾದಲ್ಲಿ ಇದ್ದಾರೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Who Is That Preetham Gowda? ಎಂದ ಹೆಚ್‌ಡಿಕೆಗೆ ಪ್ರೀತಂ ಗೌಡ ಕೊಟ್ಟ ಉತ್ತರ ಏನು?

ಜಿಗಣಿಯಲ್ಲೂ ಝಿಕಾ ಕೇಸ್ ಪತ್ತೆ:
ಆನೇಕಲ್ ತಾಲೂಕು, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಗಿಣಿಯಲ್ಲಿ ಎರಡು ವಾರಗಳಲ್ಲಿ ಒಟ್ಟು 5 ಝೀಕಾ ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಜಿಗಣಿಯ ಐವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆ ರೋಗಿಗಳು ಹಾಗೂ ಕುಟುಂಬಸ್ಥರ ರಕ್ತದ ಸ್ಯಾಂಪಲ್‌ಗಳನ್ನು ಪಡದುಕೊಂಡು ಆರೋಗ್ಯ ಇಲಾಖೆ ಸೋಂಕಿತರ ಮೇಲೆ ನಿಗಾ ವಹಿಸಿದೆ. ರಾಜ್ಯದಲ್ಲಿ ಒಟ್ಟು 7 ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರು ಪತ್ತೆಯಾದ ಪ್ರದೇಶಗಳನ್ನು ಕಂಟೋನ್ಮೆಂಟ್‌ ಝೋನ್ ಎಂದು ಪರಿಗಣಿಸಿ ಆರೋಗ್ಯ ಇಲಾಖೆ ನಿಗಾ ವಹಿಸುತ್ತಿದೆ. ಇದನ್ನೂ ಓದಿ: ಬೆಂಗಳೂರಿನ‌ ಗುರಪ್ಪನಪಾಳ್ಯದಲ್ಲಿ ಅಲ್-ಹಿಂದ್ ISIS ಮಾಡ್ಯೂಲ್ ಕೇಸ್‌ – NIAಯಿಂದ ಚಾರ್ಜ್ ಶೀಟ್ ಸಲ್ಲಿಕೆ

Share This Article