ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

Public TV
1 Min Read

ಹೈದರಾಬಾದ್: ಸೋಮವಾರದಂದು ತೆಲಂಗಾಣದ ಜಯಶಂಕರ್ ಭೂಪಲಪಲ್ಲಿ ಜಿಲ್ಲೆಯ ಗೋರಿ ಕೋತಪಲ್ಲಿ ಗ್ರಾಮದಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.

7 ವರ್ಷದ ರೇಷ್ಮಾ ಮೃತ ಬಾಲಕಿ. ಸೋಮವಾರದಂದು ರೇಷ್ಮಾಳ ಹುಟ್ಟುಹಬ್ಬವಿತ್ತು. ಹೀಗಾಗಿ ಕೇಕ್ ಹಾಗೂ ಹೊಸ ಬಟ್ಟೆ ಖರೀದಿಸಲು ತಂದೆ ರಾಜು ಹಾಗೂ ತಾಯಿ ಪ್ರವಲ್ಲಿಕಾ ಅವರ ಜೊತೆ ಭಾನುವಾರದಂದು ಪಾರ್ಕಲ್‍ಗೆ ಹೋಗಿದ್ದಳು. ಸಂಜೆಗೆ ಗ್ರಾಮದಲ್ಲಿ ಕಾರ್ಯಕ್ರಮವೊಂದು ಇದ್ದಿದ್ದರಿಂದ ಅದನ್ನು ನೋಡಲು ರೇಷ್ಮಾ ತಂದೆಯ ಜೊತೆಗೆ ಹೋಗಿದ್ದಳು. ಈ ವೇಳೆ ಜನಜಂಗುಳಿಯಲ್ಲಿ ಕಾಣೆಯಾಗಿದ್ದಳು.

ಊರೆಲ್ಲಾ ಹುಡುಕಾಡಿದ ಬಳಿಕ ತಂದೆ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ದೂರು ದಾಖಲಿಸಿದ್ದರು. ಸೋಮವಾರ ಬೆಳಗ್ಗೆ ಬಾಲಕಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಆಕೆ ಎಲ್ಲೂ ಪತ್ತೆಯಾಗಿರಲಿಲ್ಲ . ಕೊನೆಗೆ ಗ್ರಾಮದ ಹೊರವಲಯದಲ್ಲಿ ರೇಷ್ಮಾ ಮೃತದೇಹವನ್ನು ನೋಡಿದ ಗ್ರಾಮಸ್ಥರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ರೇಷ್ಮಾ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ ಅತ್ಯಾಚಾರದ ಬಗ್ಗೆ ಪೊಲೀಸರು ದೃಢಪಡಿಸಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಇನ್ನಷ್ಟೇ ಹೊರಬರಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *