ಮದ್ಯ ಖರೀದಿಗೆ ಹಣ ಕೊಡಲಿಲ್ಲ ಎಂದು ಹಲ್ಲೆ – 7 ವಿದ್ಯಾರ್ಥಿಗಳು ಅರೆಸ್ಟ್

Public TV
1 Min Read

ಚೆನ್ನೈ: ಮದ್ಯ ಖರೀದಿಗೆ ಹಣ ನೀಡಲಿಲ್ಲ ಎಂದು ಜ್ಯೂನಿಯರ್ ಒಬ್ಬನ ಮೇಲೆ ಹಲ್ಲೆ ನಡೆಸಿದ ಕೊಯಮತ್ತೂರಿನ ಖಾಸಗಿ ಕಾಲೇಜಿನ 7 ಜನ ವಿದ್ಯಾರ್ಥಿಗಳನ್ನು (Students) ಪೊಲೀಸರು (Police) ಬಂಧಿಸಿದ್ದಾರೆ.

ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಕ್ಯಾಂಪಸ್‍ನಲ್ಲಿರುವ ಹಾಸ್ಟೆಲ್‍ಗೆ ತೆರಳಿ ಮದ್ಯ ಖರೀದಿಸಲು ಹಣ ಕೇಳಿದ್ದಾರೆ. ಈ ವೇಳೆ ನಿರಾಕರಿಸಿದ ವಿದ್ಯಾರ್ಥಿಯನ್ನು ತಮ್ಮ ಕೋಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಟ್ರಿಮ್ಮರ್ ಬಳಸಿ ಕೈಗಳ ಮೇಲೆ ಗಾಯಮಾಡಿದ್ದಾರೆ. ಮರುದಿನ ಆತನ ರೂಮ್‍ಗೆ ತೆರಳುವಂತೆ ಹೇಳಿ ನಡೆದ ವಿಚಾರ ಬಾಯಿಬಿಟ್ಟರೆ ಮತ್ತೆ ಹಲ್ಲೆಗೈಯುವ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಹೊರ ರಾಜ್ಯದ ನೋಂದಣಿ ಕ್ಯಾಬ್‌ಗಳಿಗಿಲ್ಲ ದೆಹಲಿ ಪ್ರವೇಶ

ಕಾಲೇಜು ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪೀಲಮೇಡು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ದೂರಿನ ಅನ್ವಯ ಪೊಲೀಸರು ರ‍್ಯಾಗಿಂಗ್ ನಿಷೇಧ ಕಾಯ್ದೆ ಅಡಿ ಐಪಿಸಿ ಸೆಕ್ಷನ್ 355 ಹಾಗೂ 323 ಹಲ್ಲೆ ಪ್ರಕರಣ ದಾಖಲಿಸಿಕೊಂಡು 7 ಜನ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಬಂಧಿತರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಐವರ ಜಲಸಮಾಧಿ ಬಳಿಕ ಎಚ್ಚೆತ್ತ ಅಧಿಕಾರಿಗಳು – ಆರಂಭವಾಯ್ತು ತಡೆಗೋಡೆ ನಿರ್ಮಾಣ ಕಾರ್ಯ

Share This Article