ಯುಪಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – 7 ಮಂದಿ ದುರ್ಮರಣ

Public TV
1 Min Read

ಲಕ್ನೋ: ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಿಂದ ಏಳು ಜನ ಸಾವನ್ನಪ್ಪಿದ್ದು, ಅಷ್ಟೇ ಸಂಖ್ಯೆಯ ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ (Uttar Pradesh) ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ.

ಸ್ಫೋಟದ ತೀವ್ರತೆಗೆ 7 ಜನರ ದೇಹಗಳು ಛಿದ್ರಗೊಂಡಿವೆ. ಸ್ಫೋಟದ ಶಬ್ದ ಕಾರ್ಖಾನೆಯಿಂದ ಹಲವಾರು ಕಿಲೋಮೀಟರ್ ವರೆಗೂ ಕೇಳಿದೆ. ಸ್ಫೋಟದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ. ಅಲ್ಲದೇ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ನಂಬಿ ಬಂದವಳ ಬಿಟ್ಟು ಮತ್ತೊಬ್ಬಳ ಕೈಹಿಡಿದ ಪತಿ – ಅಂತರ್ಜಾತಿ ವಿವಾಹವಾಗಿದ್ದ ಮಹಿಳೆ ‌ನೇಣಿಗೆ ಶರಣು

ಪಟಾಕಿ ಕಾರ್ಖನೆ ಶಾಹಿದ್ (35) ಎಂಬವರಿಗೆ ಸೇರಿದ್ದು, ಸ್ಫೋಟದಲ್ಲಿ ಅವರು ಸಾವನ್ನಪ್ಪಿದ್ದಾರೆ. ಅಲ್ಲದೇ ಕಾರ್ಮಿಕರಾದ ಶಿವನಾರಾಯಣ್, ಶಿವಕಾಂತ್, ಅಶೋಕ್ ಕುಮಾರ್ ಮತ್ತು ಜೈಚಂದ್ರ ಎಂಬವರು ಸಾವನ್ನಪ್ಪಿದ್ದಾರೆ. ಇನ್ನೆರೆಡು ಮೃತದೇಹಗಳ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟ ಸಂಭವಿಸಿದಾಗ ಸುಮಾರು 18 ಜನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಖಾನೆಯಲ್ಲಿ ಇರಿಸಲಾಗಿದ್ದ ರಾಸಾಯನಿಕಗಳಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಹಲವಾರು ಮೀಟರ್ ದೂರಕ್ಕೆ ಶವಗಳು ಹಾರಿ ಬಿದ್ದಿದ್ದವು ಎಂದು ಸ್ಥಳೀಯರು ಮಾಹಿತಿ ಹಂಚಿಕೊಂಡಿದ್ದಾರೆ.

ಪಟಾಕಿ ಕಾರ್ಖಾನೆ ಕಾನೂನುಬದ್ಧವಾಗಿದ್ದು, ಸ್ಥಳೀಯ ಆಡಳಿತದಿಂದ ಅಗತ್ಯವಿರುವ ಎಲ್ಲಾ ಅನುಮತಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿಯ ಕಾಟಕ್ಕೆ ಬೇಸತ್ತು ಅಪ್ರಾಪ್ತೆ ಆತ್ಮಹತ್ಯೆ

Share This Article