ಬೀಜಿಂಗ್: ನಮ್ಮಲ್ಲಿ ಬೀದಿನಾಯಿಗಳ ಹಾವಳಿ ಹೇಗಿದೆ ಎನ್ನುವುದು ನಿಮಗೆ ಗೊತ್ತೇ ಇದೆ. ಆದರೆ ಚೀನಾದಲ್ಲಿ (China) ನಾಯಿ ಮಾಂಸದ ವ್ಯಾಪಾರಿಗಳು ಸಾಕಿರುವ ನಾಯಿಗಳನ್ನ ಹಿಡಿದುಕೊಂಡು ಹೋಗುತ್ತಾರೆ.
ಮಾಂಸದ ವ್ಯಾಪಾರಿಗಳು ಹಿಡಿದುಕೊಂಡು ಹೋಗಿದ್ದ ನಾಯಿಗಳ (Dog) ಪೈಕಿ ಒಂದೇ ಗ್ರಾಮದಲ್ಲಿದ್ದ 7 ನಾಯಿಗಳು ತಪ್ಪಿಸಿಕೊಂಡಿತ್ತು. ಕೊನೆಗೆ ಈ ನಾಯಿಗಳು ತಮ್ಮ ಹಳ್ಳಿಗೆ ಮರಳಲು 17 ಕಿಲೋಮೀಟರ್ ಪ್ರಯಾಣ ಬೆಳೆಸಿದೆ.
🐶 In China, 7 stolen dogs escaped from a butcher’s truck and walked 17 km home led by a corgi!
In Jilin province, seven dogs were stolen for sale at a dog meat market and loaded into a van. But they managed to escape — and what followed looks like a movie.
Instead of… pic.twitter.com/9gbZI9yl8Q
— NEXTA (@nexta_tv) March 23, 2026
ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಮಾರ್ಚ್ 16 ರಂದು ಜಿಲಿನ್ ಪ್ರಾಂತ್ಯದ ಚಾಂಗ್‌ಚುನ್‌ನ ಹೆದ್ದಾರಿಯಲ್ಲಿ ನಾಯಿಗಳ ಗುಂಪು ಸಾಲಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಚೀನಾದ ನಿವಾಸಿ ಲೂ ಎಂಬುವವರು ವಿಡಿಯೋ ಮಾಡಿದ್ದಾರೆ. ಲೂ ಮೊದಲು ಈ ನಾಯಿಗಳನ್ನು ಅವರ ಹಳ್ಳಿಯಿಂದ ಸುಮಾರು 17 ಕಿ.ಮೀ. ದೂರದ ಹೆದ್ದಾರಿಯಲ್ಲಿ ಗುರುತಿಸಿದ್ದರು. ಹಾಗಾಗಿ ಈಗ ಈ ಸತ್ಯ ಬೆಳಕಿಗೆ ಬಂದಿದೆ.

