ಬೆಂಗಳೂರು: ನಗರದಲ್ಲಿ ಹಾಡಹಗಲೇ ನಡೆದ 7 ಕೋಟಿ 11 ಲಕ್ಷ ರೂ. ದರೋಡೆ ಪ್ರಕರಣದ (Bengaluru Robbery Case) ತನಿಖೆ ಚುರುಕುಗೊಂಡಿದೆ. ದರೋಡೆಕೋರರು ಪೊಲೀಸರ ಕಣ್ತಪ್ಪಿಸಲು ಹಲವು ರೀತಿಯ ಮಾಸ್ಟರ್ ಪ್ಲ್ಯಾನ್ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.
ದರೋಡೆಕೊರರು ಎಲ್ಲಿಯೂ ಫೋನ್ ಮೂಲಕ ನಾರ್ಮಲ್ ಕಾಲ್‌ನಲ್ಲಿ ಮಾತನಾಡದೇ ವಾಟ್ಸಪ್ ಕಾಲ್‌ಗಳಲ್ಲಿ ಮಾತ್ರ ಮಾತನಾಡಿರುವುದು ತಿಳಿದು ಬಂದಿದೆ. ನಾರ್ಮಲ್ ಕಾಲ್ ಮಾತನಾಡಿದರೆ ಸುಲಭವಾಗಿ ಪೊಲೀಸರು ಪತ್ತೆ ಮಾಡ್ತಾರೆ ಅನ್ನೋ ಕಾರಣಕ್ಕೆ ಕಿರಾತಕರು ವಾಟ್ಸಪ್ ಕಾಲ್‌ಗಳಲ್ಲಿ ಮಾತ್ರ ಮಾತನಾಡಿರುವುದು ಕಂಡು ಬಂದಿದೆ. ಇದೇ ಕಾರಣಕ್ಕೆ ಪೊಲೀಸರಿಗೆ ಆರಂಭದಲ್ಲಿ ದರೋಡೆಕೋರರು ಬೆಂಗಳೂರಿನಿಂದ ಹೊರಗಡೆ ಹೋಗಿದ್ದಾರಾ ಅಥವಾ ಬೆಂಗಳೂರಿನಲ್ಲೇ ಇದ್ದಾರಾ ಅನ್ನೋದು ಗೊಂದಲವಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 7 ಕೋಟಿ ದರೋಡೆ ಕೇಸ್ – ಗೋವಿಂದಪುರ ಠಾಣೆ ಕಾನ್ಸ್‌ಟೇಬಲ್ ಸೇರಿ ಇಬ್ಬರ ಬಂಧನ!
ವಾಟ್ಸಪ್ ಕಾಲ್ ಬಳಕೆ ಮಾಡಿರೋದು ಖಾತರಿಯಾಗುತ್ತಿದ್ದಂತೆ ಪೊಲೀಸರು ಸಿಸಿಟಿವಿಗಳ ಮೊರೆ ಹೋಗಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿ ನೋಡಿದಾಗ ದರೋಡೆಕೊರರ ಗ್ಯಾಂಗ್ ಬೆಂಗಳೂರು ದಾಟಿ ಹೋಗಿದ್ದಾರೆ ಅನ್ನೋದು ಪಕ್ಕ ಆಗಿದೆ. ದರೋಡೆಕೋರರ ಪತ್ತೆಗೆ ಆಂದ್ರಪ್ರದೇಶ ಹಾಗೂ ತಮಿಳುನಾಡಿಗೆ ಎರಡು ತಂಡ ಹೊದರೆ, ಬೆಂಗಳೂರಿನಲ್ಲಿ ಒಂದು ತಂಡ ಹುಡುಕಾಟ ನಡೆಸುತ್ತಿದೆ.
ಆಂದ್ರಪ್ರದೇಶದ ಚಿತ್ತೂರು ಬಳಿ ಕೃತ್ಯಕ್ಕೆ ಬಳಸಿದ್ದ ಕಾರು ಪತ್ತೆಯಾಗಿದೆ. ಚಿತ್ತೂರು ಸುತ್ತಮುತ್ತ ದರೋಡೆಕೊರರು ಇರುವ ಸಾದ್ಯತೆ ಹೆಚ್ಚಾಗಿರುವ ಕಾರಣ ಅಲ್ಲಿನ 20 ಕಿಲೋಮೀಟರ್ ಸುತ್ತಮುತ್ತದ ಸಿಸಿಟಿವಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಇಂದು (ನ.21) ದರೋಡೆಕೊರರನ್ನು ಪೊಲೀಸರು ಬಂಧಿಸುವ ಸಾದ್ಯತೆಗಳು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸ್ಕ್ಯಾನಿಂಗ್‌ಗೆ ಬಂದ ಮಹಿಳೆಗೆ ಕಿರುಕುಳ ಕೇಸ್ – ಖಾಸಗಿ ಅಂಗ ಮುಟ್ಟಿ ಕೃತ್ಯ ಎಸಗಿದ್ದ ರೆಡಿಯಾಲಜಿಸ್ಟ್ ಅರೆಸ್ಟ್

