ಹರ್ಷ ಕೊಲೆ ಕೇಸ್ – 7 ಆರೋಪಿಗಳು ಯಾರು? ಯಾರ ಪಾತ್ರ ಏನು?

Public TV
2 Min Read

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಎಫ್‍ಐಆರ್ ದಾಖಲಾಗಿದ್ದು, 7 ಮಂದಿ ಅರೆಸ್ಟ್ ಆಗಿದ್ದಾರೆ. ಬಂಧಿತ ಆರೋಪಿಗಳ ಸಂಪೂರ್ಣ ಬಯೋಡೇಟಾವನ್ನು ಅಧಿಕಾರಿಗಳು ತಿಳಿಸಿದ್ದಾರೆ.

ಎ1 – ಕಾಸಿಫ್:
32 ವರ್ಷದ ಕಾಸಿಫ್ ಶಿವಮೊಗ್ಗದ ಕ್ಲಾಕ್ರ್ಸ್ ಪೇಟೆ ನಿವಾಸಿ. ಕಾಸಿಫ್ ಗ್ಯಾಂಗ್ ಹಾಗೂ ಹರ್ಷನ ಗ್ಯಾಂಗ್‍ಗೆ 2020ರಲ್ಲಿ ಶಿವಮೊಗ್ಗ ಜೈಲಿನಲ್ಲಿ ಗಲಾಟೆಯಾಗಿತ್ತು. ಅಂದಿನಿಂದ ದ್ವೇಷ ಹೊಂದಿದ್ದ ಕಾಸಿಫ್ ಹುಡುಗರನ್ನು ರೆಡಿ ಮಾಡಿ ಅಟ್ಯಾಕ್ ಮಾಡಿಸಿದ್ದ. ಕೊಲೆ ನಡೆದಿದ್ದ ದಿನ ಈತ ಕೂಡ ಮಚ್ಚು ಬೀಸಿದ್ದ. ಈತನನ್ನು ಕ್ಲಾರ್ಕ್ ಪೇಟೆ ಮನೆಯಲ್ಲೇ ಅರೆಸ್ಟ್ ಮಾಡಲಾಗಿದೆ.

ಎ2 – ನದೀಮ್:
23 ವರ್ಷದ ನದೀಮ್ ಕೂಡ ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ. ಕೊಲೆ ಸಂಚಿನಲ್ಲಿ ಭಾಗಿಯಾದ ಆರೋಪ ನದೀಮ್ ಮೇಲಿದ್ದು, ಕೊಲೆಯಾದ ದಿನ ಆರೋಪಿಗಳ ರಕ್ಷಣೆಗೆ ಸಹಾಯ ಮಾಡಿದ್ದ. ಈತನನ್ನು ಭಾನುವಾರ ಮಧ್ಯರಾತ್ರಿ ಕ್ಲಾರ್ಕ್ ಪೇಟೆಯ ಈತನ ಮನೆಯಲ್ಲಿ ವಶಕ್ಕೆ ಪಡೆಯಲಾಗಿತ್ತು. ಇದನ್ನೂ ಓದಿ: 9 ಎಫ್‍ಐಆರ್, 7 ಮಂದಿ ಅರೆಸ್ಟ್‌ – ಶಿವಮೊಗ್ಗ ನಗರದಲ್ಲಿ ಶುಕ್ರವಾರದವರೆಗೆ ನಿಷೇಧಾಜ್ಞೆ

ಎ3 – ಆಸಿಫ್ ಖಾನ್:
21 ವರ್ಷದ ಆಸಿಫ್ ಖಾನ್ ಕೊಲೆ ಮಾಡುವ ಉದ್ದೇಶದಿಂದ ಕಾಸಿಫ್‍ನ ಮಾತಿನಂತೆ ಹರ್ಷನ ಮೇಲೆ ಹಲ್ಲೆ ಮಾಡಿದ್ದ. ಹರ್ಷನ ಮೇಲೆ ಮಚ್ಚು ಬೀಸಿದ್ದವನಲ್ಲಿ ಅಸಿಫ್ ಖಾನ್ ಎರಡನೇಯವ.

ಎ4 – ರಿಯಾನ್ ಶರೀಫ್ ಅಲಿಯಾಸ್ ಖಸಿ:
22 ವರ್ಷದ ಈತ ಕ್ಲಾರ್ಕ್ ಪೇಟೆ ನಿವಾಸಿ. ಕೊಲೆಗೂ ಮೊದಲು ಕಾಸಿಫ್‍ನ ಪ್ಲಾನಿಂಗ್ ಮೀಟಿಂಗ್‍ನಲ್ಲಿ ಭಾಗಿಯಾಗಿದ್ದ. ಅಲ್ಲದೆ ಹರ್ಷನ ಮೇಲೆ ಹಲ್ಲೆ ಮಾಡಿದ್ದ. ಈತನನ್ನ ಹಾಸನದಲ್ಲಿ ದಸ್ತಗಿರಿ ಮಾಡಲಾಗಿದೆ. ಇದನ್ನೂ ಓದಿ: ಮತಾಂಧ ಮುಸ್ಲಿಂ ಯುವಕರನ್ನು ಗಲ್ಲಿಗೇರಿಸಿ: ಟೆಂಗಳಿ

ಎ5 – ನಿಹಾನ್ ಅಲಿಯಾಸ್ ಮುಜಾಹಿದ್:
23 ವರ್ಷದ ಈತ ಕೂಡ ಹರ್ಷನ ಕೊಲೆ ಮಾಡಿದವರಲ್ಲಿ ಪ್ರಮುಖ. ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿಯಾಗಿದ್ದು, ಸ್ನೇಹಿತರ ಗ್ಯಾಂಗ್ ಜೊತೆ ಮೀಟಿಂಗ್ ಮಾಡುತ್ತಿದ್ದ. ಖಾಸಿಫ್‍ನ ಅಣತಿಯಂತೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ. ಚಿಕ್ಕಮಗಳೂರಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎ6 – ಅಬ್ದುಲ್ ಅಪ್ನಾನ್:
ಅಬ್ದುಲ್ ಅಪ್ನಾನ್ ವಯಸ್ಸು ಈಗಿನ್ನು 21. ಕೊಲೆಯಲ್ಲಿ ನೇರವಾಗಿ ಭಾಗಿಯಾಗಿಲ್ಲವಾದರೂ ಇನ್ ಡೈರೆಕ್ಟ್ ಆಗಿ ಭಾಗಿಯಾಗಿದ್ದಾನೆ. ಹರ್ಷನ ಚಟುವಟಿಕೆಗಳು, ಹೋಗಿ ಬರುವ ದಾರಿ, ಒಬ್ಬಂಟಿಯಾಗಿದ್ದಾನೋ ಅಥವಾ ಇಲ್ಲವೋ ಹೀಗೆ ಪ್ರತಿಯೊಂದು ಮಾಹಿತಿಯನ್ನು ಖಾಸಿಫ್‍ಗೆ ಈತ ನೀಡುತ್ತಿದ್ದ. ಕೊಲೆ ಬಳಿಕ ಈತ ಆರೋಪಿಗಳ ರಕ್ಷಣೆಗೆ ಪ್ರಯತ್ನ ಪಟ್ಟಿದ್ದ. ಇದನ್ನೂ ಓದಿ: ಶಾಂತಿ ಭಂಗ ಮಾಡುವ ನಿಮ್ಮನ್ನು ಜನರು ಎಂದೆಂದಿಗೂ ಕ್ಷಮಿಸುವುದಿಲ್ಲ: ಕಾಂಗ್ರೆಸ್‌ ವಿರುದ್ಧ ಸಿಎಂ ಕಿಡಿ

ಎ7 – ಜಿಲಾನ್:
ಈತ ಕೊಲೆ ನಡೆದ ಬಳಿಕ ಆರೋಪಿಗಳನ್ನು ಕಾರ್‍ನಲ್ಲಿ ಕರೆದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದ. ಸ್ವಿಫ್ಟ್ ಕಾರ್‍ನಲ್ಲಿ ಭದ್ರಾವತಿ ಕಡೆ ತೆರಳಿದ್ದು, ಅಲ್ಲಿ ಎಲ್ಲರನ್ನೂ ಡೈವರ್ಟ್ ಮಾಡುವ ಕೆಲಸ ಮಾಡಿದ್ದ.

Share This Article
Leave a Comment

Leave a Reply

Your email address will not be published. Required fields are marked *