Photo Gallary: ಮ್ಯಾನ್ಮಾರ್‌, ಥೈಲ್ಯಾಂಡ್‌ನಲ್ಲಿ ಡೆಡ್ಲಿ ಭೂಕಂಪ – ಭೀಕರ ದೃಶ್ಯಗಳನ್ನು ಫೋಟೊಗಳಲ್ಲಿ ನೋಡಿ..

Public TV
1 Min Read

ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಜನರನ್ನು ಬೆಚ್ಚಿ ಬೀಳಿಸಿದೆ. ಒಂದು ಕ್ಷಣ ಭೂಮಿಯೇ ಅಲುಗಾಡಿತು. ಬೆಚ್ಚಿಬಿದ್ದ ಜನರು ಹೊರಗಡೆ ಓಡಲಾರಂಭಿಸಿದರು. ನಿರ್ಮಾಣದ ಹಂತದಲ್ಲಿದ್ದ ಕಟ್ಟಡ ನೋಡನೋಡುತ್ತಿದ್ದಂತೆ ಧರೆಗುರುಳಿತು. ಹಲವೆಡೆ ಕಟ್ಟಡಗಳು ನೆಲಕ್ಕುರುಳಿದವು. ಪರಿಣಾಮವಾಗಿ 40 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಎದೆ ಝಲ್ಲೆನಿಸುವ ಭೂಕಂಪದ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ನೂರಾರು ಮಂದಿ ಮನೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಥೈಲ್ಯಾಂಡ್‌ನಲ್ಲೂ ಭೂಕಂಪ ಸಂಭವಿಸಿದೆ.

ಭೂಕಂಪದ ಪರಿಣಾಮ ಮನೆಯೊಂದು ರಸ್ತೆಗೆ ಕುಸಿದು ಬಿದ್ದಿದೆ

ಭೂಮಿ ಕಂಪಿಸಿದ್ದಕ್ಕೆ ಹೆದರಿ ಹೊರಗೆ ಓಡಿದ ಜನ.

1934 ರಲ್ಲಿ ಬ್ರಿಟಿಷ್ ಸಾಮ್ರಾಜ್ಯವು ನಿರ್ಮಿಸಿದ್ದ ಅವಾ ಸೇತುವೆ ಇಂದಿನ ಭೂಕಂಪದಿಂದಾಗಿ ಕುಸಿದು ಬಿದ್ದಿದೆ.

ಭೂಕಂಪಕ್ಕೆ ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿದ ಜನರ ರಕ್ಷಣಾ ಕಾರ್ಯಾಚರಣೆ. ಅವಶೇಷಗಳಡಿ ಸಿಲುಕಿಕೊಂಡು ರಕ್ಷಣೆಗಾಗಿ ಅಂಗಲಾಚುತ್ತಿರುವ ವ್ಯಕ್ತಿ.

ಭೂಕಂಪಕ್ಕೆ ನಲುಗಿದ ಗಗನಚುಂಬಿ ಕಟ್ಟಡಗಳು.

ಬಿರುಕು ಬಿಟ್ಟ ಮನೆಯ ಗೋಡೆ.

ಭೂಕಂಪಕ್ಕೆ ಹೆದರಿ ದಿಕ್ಕಾಪಾಲಾಗಿ ಓಡಿದ ಜನರು.

ಭೂಕಂಪದ ತೀವ್ರತೆಗೆ ಅಲುಗಾಡಿದ ವಾಹನಗಳು.

ಭೂಕಂಪಕ್ಕೆ ಗಗನಚುಂಬಿ ಕಟ್ಟಡಗಳಲ್ಲಿನ ಸ್ವಿಮ್ಮಿಂಗ್‌ ಪೂಲ್‌ಗಳಿಂದ ಹೊರಚೆಲ್ಲಿದ ನೀರು.

Share This Article