7 ಬಾರಿ ಆಫರ್ ತಿರಸ್ಕರಿಸಿದ್ದ ಶುಭಾ ಬಿಗ್ ಮನೆಗೆ ಹೋಗಿದ್ಯಾಕೆ?

Public TV
2 Min Read

ಬೆಂಗಳೂರು: ಎಂಟನೇ ಆವೃತ್ತಿಯ ಕನ್ನಡ ಬಿಗ್‍ಬಾಸ್ ಭಾನುವಾರ ಆರಂಭವಾಗಿದ್ದು, ಒಂಟಿ ಮನೆ ಸೇರಿರುವ ಸೆಲೆಬ್ರಿಟಿಗಳು ಏನ್ ಮಾಡ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಮೊಗ್ಗಿನ ಮನಸ್ಸಿನ ಚೆಲುವೆ ಶುಭಾ ಪೂಂಜಾ ಈ ಬಾರಿ ಬಿಗ್‍ಬಾಸ್ ಸ್ಪರ್ಧಿ. ಈ ಹಿಂದೆ ಏಳು ಬಾರಿ ಆಫರ್ ಬಂದಿದ್ದರೂ ಮನೆಗೆ ಹೋಗಲು ಹಿಂದೇಟು ಹಾಕಿದ್ದ ಶುಭಾ ವಿಶೇಷ ವ್ಯಕ್ತಿಯ ಸಲಹೆ ಮೇರೆಗೆ ಬಿಗ್‍ಬಾಸ್‍ಗೆ ಬಂದಿರೋದಾಗಿ ಸುದೀಪ್ ಮುಂದೆ ಹೇಳಿದ್ದಾರೆ.

ಬಿಗ್‍ಬಾಸ್ ವೇದಿಕೆ ಮೇಲೆ ಸುದೀಪ್ ಈ ಹಿಂದೆ ಆಫರ್ ರಿಜೆಕ್ಟ್ ಮಾಡಿದ್ದ ನೀವು ಈ ಬಾರಿ ಒಪ್ಪಿಕೊಂಡಿದ್ಯಾಕೆ ಅಂತ ಕೇಳಿದರು. ನೀನು ಸದಾ ಒಂದೇ ರೀತಿಯ ಪಾತ್ರಗಳನ್ನ ಮಾಡೋದೇಕೆ?. ಹೊಸತನವನ್ನ ಬರಮಾಡಿಕೊಳ್ಳಬೇಕು. ಕಂಫರ್ಟ್ ಝೋನ್ ನಿಂದ ಹೊರ ಬರಬೇಕು. ಇವಾಗ ಬಿಗ್‍ಬಾಸ್ ಹೋಗಿಲ್ಲ ಅಂದ್ರೆ ಹೇಗೆ? ಮದುವೆ ಆದ್ಮೇಲೆ ಸಾಧ್ಯ ಆಗಲ್ಲ. ಹಾಗಾಗಿ ಬಿಗ್‍ಬಾಸ್‍ಗೆ ಹೋಗುವಂತೆ ಭಾವಿ ಪತಿ ಸುಮಂತ್ ಬಿಲ್ಲವ ಹೇಳಿದ್ದರಿಂದ ಹೋಗ್ತಿದ್ದೀನಿ ಅಂತ ಶುಭಾ ಹೇಳಿದರು. ಇದನ್ನೂ ಓದಿ: ಪೊರಕೆಯಲ್ಲಿ ಏಟು ತಿನ್ನೋದು ಅಭ್ಯಾಸ ಆಗಿತ್ತು: ವೈಷ್ಣವಿ

ನನ್ನ ಎಲ್ಲ ಕಾಂಟರ್‍ವರ್ಸಿಗಳ ಬಗ್ಗೆ ಹೇಳಿ ಯಾರೋ ಜನ ಜಡ್ಜ್ ಮಾಡಿದ್ರೆ ಬೇಜಾರು ಆಗುತ್ತೆ. ಆದ್ರೆ ಈ ಎಲ್ಲದರಿಂದಲೂ ನಾನು ಪಾಠ ಕಲಿತಿದ್ದೇನೆ. ನನಗೆ ಮೂಗಿನ ಮೇಲೆ ಕೋಪ. ಬಹಳ ವರ್ಷಗಳ ನಂತರ ನಾನೇ ಚಾಲೆಂಜ್ ತೆಗೆದುಕೊಂಡು ಬಿಗ್‍ಬಾಸ್ ಮನೆಗೆ ಹೋಗ್ತಿದ್ದೇನೆ ಎಂದರು. ಇದನ್ನೂ ಓದಿ: ವಾರಕ್ಕೆ 10ರೂ.ನಂತೆ ಇನ್‍ಸ್ಟಾಲ್ಮೆಂಟ್‍ನಲ್ಲಿ ಸೀರೆ ಖರೀದಿಸ್ತಿದ್ದ ಅಜ್ಜಮ್ಮ!

ನಟಿ ನಿಧಿ ಸುಬ್ಬಯ್ಯ, ಹಿರಿಯ ನಟ ಶಂಕರ್ ಅಶ್ವಥ್, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ, ಟಿಕ್‍ಟಾಕ್ ಸ್ಟಾರ್ ಧನುಶ್ರೀ, ಉತ್ತರ ಕನ್ನಡದ ಹಾಡುಗಾರ ವಿಶ್ವನಾಥ್, ಬೈಕ್ ರೈಡರ್ ಅರವಿಂದ್ ಪ್ರವೇಶಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮೋಟಿವೇಷನ್ ಮಾತುಗಳನ್ನಾಡುವ ಬ್ರೊ ಗೌಡ, ಬ್ರಹ್ಮಗಂಟು ಧಾರವಾಹಿಯ ನಟಿ ಗೀತಾ ಭಾರತಿ ಭಟ್, ಹಾಸ್ಯ ಕಲಾವಿದ ಮಂಜುಪಾವಗಡ, ಪುಟ್ಟಗೌರಿ ಮದುವೆಯ ಅಜ್ಜಮ್ಮ ಚಂದ್ರಕಲಾ ಮೋಹನ್, ನಟಿ ದಿವ್ಯ, ಯೂಟ್ಯೂಬ್ ನಲ್ಲಿ ಕಾಮಿಡಿ ವಿಡಿಯೋ ಮಾಡುವ ರಘು, ಸ್ಯಾಂಡಲ್ ವುಡ್ ಡ್ರಗ್ಸ್ ಆರೋಪ ಮಾಡಿದ್ದ ಪ್ರಶಾಂತ್ ಸಂಬರ್ಗಿ, ಸೀರಿಯಲ್ ನಟಿ ದಿವ್ಯ ಉರುಡುಗ, ನಟ ರಾಜೀವ್, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಿರ್ಮಿಲಾ ಚನ್ನಪ್ಪ ಎಂಟ್ರಿ ಕೊಟ್ಟಿದ್ದಾರೆ.

ಕನ್ನಡ ಬಿಗ್‍ಬಾಸ್ ಪ್ರಾರಂಭವಾಗುತ್ತೆ ಎನ್ನುವ ಸುದ್ದಿಯನ್ನು ಕೇಳಿದ ಬಿಗ್‍ಬಾಸ್ ಅಭಿಮಾನಿಗಳು ನಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಒಂಟಿಮನೆಗೆ ಯಾರು ಹೋಗುತ್ತಾರೆ ಎಂದು ಚರ್ಚೆ ಮಾಡುತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *