ಬಾಲಕಿಗೆ ಲವ್ ಲೆಟರ್ ಕೊಟ್ಟ 6ನೇ ತರಗತಿ ವಿದ್ಯಾರ್ಥಿ- ಬಾಸುಂಡೆ ಬರುವಂತೆ ಬಾರಿಸಿದ ಶಿಕ್ಷಕಿ!

Public TV
1 Min Read

ಕಾರವಾರ: ಸಿನಿಮಾಗಳನ್ನು ನೋಡಿ ಪ್ರೌಢ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರೀತಿ ಪ್ರೇಮ ಎಂದು ವಿದ್ಯಾರ್ಥಿನಿಯರ ಹಿಂದೆ ಬಿದ್ದು, ಭವಿಷ್ಯವನ್ನು ಹಾಳುಮಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಪ್ರಪಂಚ ಏನು ಎಂಬುದನ್ನ ತಿಳಿದುಕೊಳ್ಳುವ ಶಕ್ತಿಯು ಸಹ ಇಲ್ಲದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಲವ್ ಲೆಟರ್ ಕೊಟ್ಟು ಶಾಲೆಯ ಶಿಕ್ಷಕಿಯಿಂದ ಬಾಸುಂಡೆ ಬರುವಂತೆ ಹೊಡೆತ ತಿಂದಿದ್ದಾನೆ.

ಹೊನ್ನಾವರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.  ಆರನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಸಿನಿಮಾ ಸ್ಟೈಲ್‌ನಲ್ಲಿ ಲವ್ ಲೆಟರ್ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿನಿ ಈ ಲೆಟರ್‌ನ್ನು ಶಾಲೆಯ ಶಿಕ್ಷಕಿ ಕಲ್ಪನ ಹೆಗಡೆಯವರಿಗೆ ನೀಡಿದ್ದಾಳೆ. ಇದನ್ನೂ ಓದಿ: ಪುರುಷರ ಟಾಯ್ಲೆಟ್‍ಗೆ ನುಗ್ಗಿದ್ದ ದೀಪಿಕಾ ಪಡುಕೋಣೆ, ಆಲಿಯಾ ಭಟ್!

ಲವ್ ಲೆಟರ್ ನೋಡಿ ಸಿಟ್ಟಾದ ಶಿಕ್ಷಕಿ ವಿದ್ಯಾರ್ಥಿಯನ್ನು ಕರೆಯಿಸಿ ಕೋಪದಿಂದ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಅವರ ಹೊಡೆತಕ್ಕೆ ಬಾಲಕನ ಬೆನ್ನುಗಳಲ್ಲಿ ಬಾಸುಂಡೆ ಎದ್ದು ನಲುಗಿ ಹೋಗಿದ್ದಾನೆ. ಈ ವಿಷಯ ತಡವಾಗಿ ಪೋಷಕರಿಗೆ ತಿಳಿದಿದ್ದು ,ಬಾಲಕನ ಬಟ್ಟೆ ಬಿಚ್ಚಿ ನೋಡಿದಾಗ ಬೆನ್ನು ಕೆಂಪಾಗಿತ್ತು. ಇದನ್ನೂ ಓದಿ: Wait and see, ಸಮಯ ಬಂದಾಗ ಎಲ್ಲಾ ಹೇಳುತ್ತೇನೆ: ಎಸ್.ಆರ್.ಪಾಟೀಲ್

ತಕ್ಷಣ ಪೋಷಕರು ಶಿಕ್ಷಕಿಯನ್ನು ತರಾಟೆ ತೆಗೆದುಕೊಂಡಿದ್ದು ಗಲಾಟೆ ನಡೆದಿದೆ. ಕೊನೆಗೆ ಶಿಕ್ಷಕಿ ಪೋಷಕರಲ್ಲಿ ಕ್ಷಮೆ ಕೇಳುವ ಮೂಲಕ ಪ್ರಕರಣ ಇತ್ಯರ್ಥವಾಗಿದೆ. ಇಂದಿನ ದಿನದಲ್ಲಿ ಮಕ್ಕಳು ಮೊಬೈಲ್ ಸಿನಿಮಾ ಎಂದು ಚಿಕ್ಕ ವಯಸ್ಸಿನಲ್ಲಿ ದಾರಿತಪ್ಪುತ್ತಿರುವುದು ಇಂದಿನ ಪೀಳಿಗೆಗಳು ಯಾವ ಕಡೆ ವಾಲುತ್ತಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.ಇದರ ಜೊತೆಗೆ ತಪ್ಪನ್ನು ತಿದ್ದಬೇಕಾದ ಶಿಕ್ಷಕರು ಕ್ರೌರ್ಯ ಮೆರೆದಿದ್ದು ಸಹ  ಖಂಡನೀಯವಾಗಿದೆ. ಇದನ್ನೂ ಓದಿ: ಲೂಟಿ ಮಾಡಿರುವ ದುಡ್ಡಿದ್ದರೆ ಹೊಸ ಪಕ್ಷ ಮಾಡುತ್ತಿದ್ದೆವು: ಯತ್ನಾಳ್

Share This Article
Leave a Comment

Leave a Reply

Your email address will not be published. Required fields are marked *