ಮುಂಬೈ: ನಟಿ ದೀಪಿಕಾ ಪಡುಕೋಣೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರಲ್ಲ. ತುಂಬಾ ಅಪರೂಪಕ್ಕೆ ಎಂಬಂತೆ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ 69 ದಿನಗಳ ಬಳಿಕ ಮಸ್ತಾನಿ, ಮಜವಾದ ಇನ್‍ಸ್ಟಾ ಪೋಸ್ಟ್ ಮಾಡಿದ್ದಾರೆ. ಮಸ್ತಾನಿಯ ಮಸ್ತ ಪೋಸ್ಟ್ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಲೈಕ್ ನೀಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಏಪ್ರಿಲ್ 20ರಂದು ದೀಪಿಕಾ ತಮ್ಮ ಫೋಟೋವನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ತದನಂತರ ಮೇ 2ರಂದು ಮೆಂಟಲ್ ಹೆಲ್ತ್ ಹೆಲ್ಪ್ ಲೈನ್‍ಗೆ ಸಂಬಂಧಿಸಿದ ಕುರಿತ ಪೋಸ್ಟ್ ಮಾಡಿದ್ರು. ಆದಾದ ನಂತರ ದೀಪಿಕಾ ಅದ್ಯಾಕೋ ಸೋಶಿಯಲ್ ಮೀಡಿಯಾದಿಂದ ದೂರ ಉಳಿದುಕೊಂಡಿದ್ದರು. ಎರಡು ಫೋಟೋಗಳನ್ನು ಹಂಚಿಕೊಂಡು ಕೆಲ ಸಾಲುಗಳನ್ನು ದೀಪಿಕಾ ಬರೆದುಕೊಂಡಿದ್ದಾರೆ.
ನಿರೀಕ್ಷೆ ವರ್ಸಸ್ ನೈಜತೆ Expectation vs Reality
ಎಕ್ಸಪೆಕ್ಟೇಶನ್ ವರ್ಸಸ್ ರಿಯಾಲಿಟಿ ಎಂದು ಬರೆದು ಎರಡು ಫೋಟೋಗಳನ್ನು ದೀಪಿಕಾ ಪೋಸ್ಟ್ ಮಾಡಿದ್ದಾರೆ. ಎಕ್ಸ್ ಪೆಕ್ಟೇಶನ್ ನಲ್ಲಿ ಯೋಗ ಮಾಡುವ ಭಂಗಿಯ ಫೋಟೋ ಇದ್ರೆ, ರಿಯಾಲಿಟಿಯಲ್ಲಿ ನಿದ್ದೆ ಮಾಡ್ತಿರೋ ಫೋಟೋ ಇದೆ.
View this post on Instagram
ದೀಪಿಕಾ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ವೈರಲ್ ಆಗಿದೆ. ಓರ್ವ ಅಭಿಮಾನಿ 69 ದಿನಗಳ ಬಳಿಕ ನಿಮ್ಮನ್ನು ನೋಡುವ ಭಾಗ್ಯ ಸಿಕ್ಕಿತಲ್ಲ ಅಂತ ಖುಷಿಪಟ್ಟಿದ್ದಾನೆ. ಮತ್ತೊಬ್ಬರು ಲವ್ ಯು ಕ್ವೀನ್ ಅಂತ ಕಮೆಂಟ್ ಮಾಡಿದ್ರು, ಮತ್ತೋರ್ವ ಅಭಿಮಾನಿ, ಇವತ್ತಿನ ನನ್ನ ದಿನ ಸುಂದರವಾಯ್ತು ಎಂದು ಹೊಗಳಿದ್ದಾನೆ.
ಕೆಲ ದಿನಗಳ ಹಿಂದೆ ಪತಿ ರಣ್‍ವೀರ್ ಸಿಂಗ್ ಕಪ್ಪು ಬಣ್ಣದ ಟೀಶರ್ಟ್ ತೊಟ್ಟು ಸ್ಟ್ರಾಂಗ್ ಆ್ಯಂಡ್ ಆ್ಯಂಗ್ರಿ ಮ್ಯಾನ್ ರೀತಿ ಲುಕ್ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋಗಳನ್ನ ರಣ್‍ವೀರ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಮಹಿಳಾ ಅಭಿಮಾನಿಗಳು ಹಾಟ್ ಆ್ಯಂಡ್ ಸೆಕ್ಸಿ ಅಂತ ಕಮೆಂಟ್ ಮಾಡಲಾರಂಭಿಸಿದ್ದರು. ಪತಿಯ ಫೋಟೋಗೆ ಕಮೆಂಟ್ ಮಾಡಿದ್ದ ದೀಪಿಕಾ, ಇವನು ನನ್ನವನು ಎಂದು ಬರೆದು ಪತಿಯನ್ನ ಬಿಟ್ಟುಕೊಡಲಾರೆ ಅಂತ ಹೇಳಿದ್ರು.