ಗುಡ್ & ಬ್ಯಾಡ್ ಟಚ್ ಸೆಷನ್‌ನಲ್ಲಿ ಕರಾಳ ಅನುಭವ ಬಿಚ್ಚಿಟ್ಟ ವಿದ್ಯಾರ್ಥಿನಿ – ಮುಂದಾಗಿದ್ದೇನು?

By
1 Min Read

ಪುಣೆ: ಶಾಲೆಯಲ್ಲಿ ನಡೆದ `ಗುಡ್ ಟಚ್, ಬ್ಯಾಡ್ ಟಚ್’ ಸೆಷನ್‍ನಲ್ಲಿ 10 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ನಡೆದ ಅತ್ಯಾಚಾರದ ಕಹಿ ಅನುಭವ ಬಿಚ್ಚಿಟ್ಟಿದ್ದು, ಪೊಲೀಸರು ಕೃತ್ಯ ಎಸಗಿದ 67 ವರ್ಷದ ವೃದ್ಧನನ್ನು ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದೆ, ಆರೋಪಿ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಆಕೆಯನ್ನು ತಡೆದು ಚಾಕೊಲೇಟ್ ನೀಡಿ ಪುಣೆಯ ಗ್ರಾಮೀಣ ಭಾಗದ ಹೊರವಲಯಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಕರಾಳ ಅನುಭವವನ್ನು ವಿದ್ಯಾರ್ಥಿನಿ ಶಾಲೆಯಲ್ಲಿ ಗುಡ್ & ಬ್ಯಾಡ್ ಟಚ್ ಮಾಹಿತಿ ನೀಡುವಾಗ ಬಹಿರಂಗ ಪಡೆಸಿದ್ದಾಳೆ.

ಪೊಲೀಸರು ದೂರು ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪುಣೆಯ ಹೊರವಲಯದ ಗ್ರಾಮಾಂತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article