6,6,6,6,6,4 – ಒಂದೇ ಓವರ್‌ನಲ್ಲೇ 34 ರನ್‌ ಚಚ್ಚಿ ಶತಕ; ಪಾಂಡ್ಯ ಬೆಂಕಿ ಆಟಕ್ಕೆ ವಿದರ್ಭ ಸುಸ್ತು!

2 Min Read

ರಾಜ್‌ಕೋಟ್‌: ಟೀಂ ಇಂಡಿಯಾದ ಸೂಪರ್‌ ಸ್ಟಾರ್‌ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲೂ ತಮ್ಮ ಬೆಂಕಿ ಬ್ಯಾಟಿಂಗ್ ಪ್ರದರ್ಶನವನ್ನ ಮುಂದುವರಿಸಿದ್ದಾರೆ.

ರಾಜ್‌ಕೋಟ್‌ನ ನಿರಂಜನ್‌ ಕೋಟ್‌ ಶಹಾ ಕ್ರೀಡಾಂಗಣದಲ್ಲಿ ವಿದರ್ಭ (Vidarbha) ವಿರುದ್ಧ ನಡೆಯುತ್ತಿರುವ ವಿಜಯ ಹಜಾರೆ ಟ್ರೋಫಿ (Vijay Hazare Trophy) ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿದ್ದಾರೆ. ಒಂದೇ ಓವರ್‌ನಲ್ಲಿ ಬರೋಬ್ಬರಿ 34 ರನ್‌ ಸಿಡಿಸುವ ಮೂಲಕ 68 ಎಸೆತಗಳಲ್ಲೇ ಶತಕ ಪೂರೈಸಿದ್ದಾರೆ. ಇದು ಇಲಿಸ್ಟ್‌ -ಎ ಕ್ರಿಕೆಟ್‌ನಲ್ಲಿ (List A Cricket)) ಪಾಂಡ್ಯ ಅವರ ಮೊದಲ ಶತಕವೂ ಆಗಿದೆ. ಇದನ್ನೂ ಓದಿ: ಆರ್‌ಸಿಬಿಗೆ ಶಾಕ್‌ ನೀಡಿದ್ದ ಪೆರ್ರಿ ನ್ಯೂಜಿಲೆಂಡ್‌ ಲೀಗ್‌ನಲ್ಲಿ ಭರ್ಜರಿ ಆಟ

ಮೊದಲ 62 ಎಸೆತಗಳಲ್ಲಿ 66 ರನ್‌ ಬಾರಿಸಿದ್ದ ಪಾಂಡ್ಯ 39ನೇ ಓವರ್‌ನಲ್ಲಿ ಕ್ರಮವಾಗಿ 6,6,6,6,6,4 ಬಾರಿಸುವ ಮೂಲಕ ಶತಕ ಪೂರೈಸಿದರು. ಅಂತಿಮವಾಗಿ ಈ ಇನ್ನಿಂಗ್ಸ್‌ನಲ್ಲಿ 92 ಎಸೆತಗಳನ್ನು ಎದುರಿಸಿದ ಪಾಂಡ್ಯ 133 ರನ್‌ ಬಾರಿಸಿ ಔಟಾದರು. ಈ ಅದ್ಭುತ ಆಟದಲ್ಲಿ ಅವರು 8 ಬೌಂಡರಿ ಮತ್ತು 11 ಸಿಕ್ಸರ್‌ ಸಿಡಿಸಿದರು. ಹೀಗಾಗಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಬರೋಡಾ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 293 ರನ್ ಪೇರಿಸಿತು. ಇದನ್ನೂ ಓದಿ: ಬಾಂಗ್ಲಾ ಘರ್ಷಣೆ – ಐಪಿಎಲ್‌ನಿಂದ ಮುಸ್ತಾಫಿಜುರ್ ಔಟ್‌

ಒಂದೇ ಓವರ್ ನಲ್ಲಿ 34 ರನ್
ಹಾರ್ದಿಕ್ ಪಾಂಡ್ಯ ಅವರು ವಿದರ್ಭದ ಬೌಲರ್ ಪಾರ್ಥ್ ರೆಖಾಡೆ ಅವರ ಎಸೆತಗಳನ್ನು ಮನಸೋಇಚ್ಛೆ ದಂಡಿಸಿದರು. ಅವರು ಎಸೆದ ಇನ್ನಿಂಗ್ಸ್ ನ 39ನೇ ಓವರ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಮತ್ತು ಒಂದು ಬೌಂಡರಿಯನ್ನು ಹೊಡೆದರು. ಆ ವೇಳೆಯೇ ತಮ್ಮ ಶತಕ ಕೇವಲ 68 ಎಸೆತಗಳಲ್ಲಿ ಪೂರೈಸಿದರು. ಓವರ್ ನ ಮೊದಲೈದು ಎಸೆತಗಳನ್ನೂ ಸಿಕ್ಸರ್ ಗೆತ್ತುವಲ್ಲಿ ಯಶಸ್ವಿಯಾಗಿದ್ದ ಹಾರ್ದಿಕ್ ಪಾಂಡ್ಯ ಕೊನೆಯ ಎಸೆತದಲ್ಲಿ ಬೌಂಡರಿ ಮಾತ್ರ ಹೊಡೆಯುವಲ್ಲಿ ಸಫಲರಾದರು. ಒಂದು ವೇಳೆ ಅವರು ಈ ಪ್ರಯತ್ನದಲ್ಲಿ ಯಶಸ್ವಿಯಗಿದ್ದಿದ್ದರೆ ಓವರ್ ನ ಆರೂ ಎಸೆತಗಳನ್ನು ಸಿಕ್ಸರ್ ಗೆತ್ತಿದ ರವಿ ಶಾಸ್ತ್ರಿ, ಯುವರಾಜ್ ಸಿಂಗ್ ಅವರ ಸಾಲಿಗೆ ಸೇರುವ ಅವಕಾಶ ಇರುತ್ತಿತ್ತು. ಇದನ್ನೂ ಓದಿ: 2025ರ ಹಿನ್ನೋಟ | ಸೋಲು-ಗೆಲುವಿನ ಆಟ – ವಿಜಯ.. ವಿದಾಯ.. ವಿಷಾದ.. ಸೂತಕವಾಯ್ತು ಸಂಭ್ರಮದ ದಿನ!

Share This Article