ನವದೆಹಲಿ: ಜೂನ್ 6ರಂದು ಮುಂಗಾರು ಮಳೆ ಆರಂಭವಾಗುತ್ತದೆ ಅನ್ನೋ ನಿರೀಕ್ಷೆ ನಡುವೆ ಈ ಬಾರಿ ಮುಂಗಾರು ಪೂರ್ವದಲ್ಲಿ 65 ವರ್ಷಕ್ಕಿಂತ ಕಡಿಮೆ ಮಳೆ ಆಗಿದೆ ಅನ್ನೋ ಮಾಹಿತಿ ಸಿಕ್ಕಿದೆ.
ಖಾಸಗಿ ಹವಾಮಾನ ಅಧ್ಯಯನ ಸಂಸ್ಥೆ ಸ್ಕೈಮ್ಯಾಟ್ ವರದಿ ಪ್ರಕಾರ, ಮಾರ್ಚ್ ನಿಂದ ಮೇವರೆಗಿನ ಮುಂಗಾರು ಪೂರ್ವ ಅವಧಿಯಲ್ಲಿ ಶೇ.31ರಷ್ಟು ಮಳೆ ಕಡಿಮೆ ಆಗಿದೆ. ಕರ್ನಾಟಕ ಒಳಪಡುವ ದಖ್ಖನ್ ಪ್ರಸ್ಥಭೂಮಿಯಲ್ಲಿ ಶೇ.40ರಷ್ಟು, ವಾಯುವ್ಯ ಭಾರತದಲ್ಲಿ ಶೇ.30, ಮಧ್ಯ ಭಾರತದಲ್ಲಿ ಶೇ.18, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ.14ರಷ್ಟು ಮಳೆ ಕೊರತೆ ಆಗಿದೆ.
ಸೋಮವಾರಕ್ಕೆ ಹೋಲಿಸಿದಂತೆ 24 ಗಂಟೆಗಳಲ್ಲಿ ಜಗತ್ತಿನ ಅತ್ಯಂತ ಬಿಸಿಲಿನ 15 ನಗರಿಗಳಲ್ಲಿ ಭಾರತದ 11 ನಗರಗಳು ಸೇರಿವೆ. ರಾಜಸ್ಥಾನದ ಚುರುವಿನಲ್ಲಿ 48.9 ಡಿಗ್ರಿ ಸೆಲ್ಸಿಯಸ್, ದೆಹಲಿಯಲ್ಲಿ 44.6 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶ ದಾಖಲಿಸಿದೆ. ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಬರುವ ಎಲ್ ಡೊರಾಡೋ ಅತ್ಯಧಿಕ 50.3 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶ ದಾಖಲಿಸಿಕೊಂಡಿದೆ. ಇದನ್ನೂ ಓದಿ: ಜಿಲ್ಲೆಯಾದ್ಯಂತ ವರುಣನ ಆರ್ಭಟ – ಖಾಲಿಯಾಗಿದ್ದ ಚೆಕ್ ಡ್ಯಾಂಗಳು ರಾತ್ರೋರಾತ್ರಿ ಭರ್ತಿ