ನವದೆಹಲಿ: 65 ಕೋಟಿ ರೂ. ವಹಿವಾಟು ನಡೆಸುವ ಮೂಲಕ ವೀಸಾವನ್ನು ಹಿಂದಿಕ್ಕಿ ಯುಪಿಐ (UPI) ವಿಶ್ವದಲ್ಲೇ ಅತೀ ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ.
ಭಾರತದಲ್ಲಿ ಮೊಬೈಲ್ ಮೂಲಕ ನಡೆಯುವ ವಹಿವಾಟಿನ ಮೂಲವಾದ ಏಕೀಕೃತ ಪಾವತಿ ಇಂಟರ್ಫೇಸ್ (UPI) ಈಗ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಈ ಮೂಲಕ ಈವರೆಗೆ ನಂ.1 ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದ ವೀಸಾವನ್ನು ಹಿಂದಿಕ್ಕಿದೆ.ಇದನ್ನೂ ಓದಿ: ಇಂದು ಹುಟ್ಟೂರಿನಲ್ಲಿ ತಾಯಿಯ ಸಮಾಧಿ ಬಳಿಯೇ ಸರೋಜಾದೇವಿ ಅಂತ್ಯಸಂಸ್ಕಾರ
ಈ ಕುರಿತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ (Amitabh Kant) ಅವರು ಎಕ್ಸ್‌ನಲ್ಲಿ (X) ಪೋಸ್ಟ್ ಹಂಚಿಕೊಂಡಿದ್ದು, 2025ರ ಮೇ-ಜೂನ್‌ನಲ್ಲಿ ಯುಪಿಐ ಪ್ರತಿದಿನ 65 ಕೋಟಿ ರೂ.ಯ ವಹಿವಾಟನ್ನು ನಡೆಸಿದ್ದು, ಇದೇ ಅವಧಿಯಲ್ಲಿ ವೀಸಾ 63.9 ಕೋಟಿ ರೂ ವಹಿವಾಟು ನಡೆಸಿದೆ. ವೀಸಾ 200 ದೇಶಗಳಲ್ಲಿ ಜಾರಿಯಲ್ಲಿದ್ದು, ಯುಪಿಐ ಕೇವಲ 7 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ವೀಸಾವನ್ನು ಹಿಂದಿಕ್ಕಿರುವುದು ವಿಶೇಷ. ಕಳೆದ ತಿಂಗಳೇ ಈ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.
UPI surpasses Visa to become the world’s leading real-time payment system, processing over 650 million transactions daily.
Achieving this in just 9 years highlights its unmatched scale and momentum.
From India to the world, UPI is leading the digital payment revolution! https://t.co/Gsf6iVyr6m
— Amitabh Kant (@amitabhk87) July 13, 2025
ಭಾರತದಲ್ಲಿ ಯುಪಿಐ ಮೂಲಕ ಗೂಗಲ್ ಪೇ, ಫೋನ್ ಪೇ, ಭೀಮ್ ಯುಪಿಐ, ಅಮೇಜಾನ್ ಪೇ, ವಾಟ್ಸಾಪ್ ಪೇ ಸೇರಿದಂತೆ ಹಲವು ಡಿಜಿಟಲ್ ಪಾವತಿ ಕಂಪನಿಗಳು ಸೇವೆ ಒದಗಿಸುತ್ತವೆ. ಬ್ಯಾಂಕ್ ಖಾತೆಯನ್ನು ಜನರು ಈ ಆ್ಯಪ್‌ಗಳಲ್ಲಿ ಲಿಂಕ್ ಮಾಡಬೇಕು. ಕೆಲವೇ ಕ್ಷಣಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಇದರಿಂದ ಹಣ ಪಾವತಿ ಮಾಡಬಹುದು. ಜಾರಿಯಾದ 9 ವರ್ಷಗಳಲ್ಲೇ ಈ ಸಾಧನೆ ಮಾಡಿರುವುದು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.ಇದನ್ನೂ ಓದಿ: ಬಳ್ಳಾರಿ | ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಸಾವು