ಟಿಬಿ ಡ್ಯಾಂನಿಂದ 64 ಸಾವಿರ ಕ್ಯೂಸೆಕ್ ನೀರು ಬಿಡುಗಡೆ – ಶ್ರೀಕೃಷ್ಣದೇವರಾಯ ಸಮಾಧಿ ಮಂಟಪ ಮುಳುಗಡೆ ಭೀತಿ

Public TV
1 Min Read

ಕೊಪ್ಪಳ/ಬಳ್ಳಾರಿ: ಜಿಲ್ಲೆಯ ತುಂಗಭದ್ರಾ ಜಲಾಶಯದಿಂದ 64 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ಪರಿಣಾಮ ಐತಿಹಾಸಿಕ ಸ್ಮಾರಕಗಳು ಮುಳುಗಡೆ ಭೀತಿಯಲ್ಲಿವೆ.

ಬಳ್ಳಾರಿಯ ಹೊಸೆಪೇಟೆ ಹೊರವಲಯ ಹಾಗೂ ಕೊಪ್ಪಳದ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದೆ. ಡ್ಯಾಂನ ಸುರಕ್ಷತಾ ದೃಷ್ಟಿಯಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ಐತಿಹಾಸಿಕ ಸ್ಮಾರಕಗಳು ಮುಳುಗಡೆ ಭೀತಿಯಲ್ಲಿವೆ.ಇದನ್ನೂ ಓದಿ: ಕಾಟಾಚಾರದ ಸರ್ವೇಗೆ 3.6 ಕೋಟಿ ವೆಚ್ಚ – ಬೇಕರಿ, ಅಂಗಡಿಗಳಿಗೂ ಜಾತಿ ಸಮೀಕ್ಷೆ ಸ್ಟಿಕ್ಕರ್!

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯಿರುವ ವಿಜಯನಗರ ಸಾಮ್ರಾಜ್ಯದ ಸಾಮ್ರಾಟ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪಕ್ಕೆ ಮುಳುಗಡೆ ಭೀತಿ ಎದುರಾಗಿದೆ. ಇದಲ್ಲದೇ ರೈತರಿಗೂ ಕೂಡ ಸಂಕಷ್ಟ ಎದುರಾಗಿದ್ದು, ಪಂಪ್‌ಸೆಟ್‌ಗಳು ಕೊಚ್ಚಿಹೋಗುತ್ತಿವೆ. ಹೀಗಾಗಿ ಪಂಪ್‌ಸೆಟ್, ಪೈಪ್‌ಗಳನ್ನು ತೆರವುಗೊಳಿಸುತ್ತಿದ್ದಾರೆ.

1,633.00 ಅಡಿ ಗರಿಷ್ಟ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 1,625.01 ಅಡಿ ನೀರಿದೆ. ಜಲಾಶಯಕ್ಕೆ 92.6 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, 64 ಸಾವಿರ ಕ್ಯೂಸೆಕ್ ಹೊರಹರಿವಿದೆ.ಇದನ್ನೂ ಓದಿ: ಲೇಡಿಸ್ ಬಾರ್‌ಗಳಲ್ಲಿ ನಿಯಮ ಉಲ್ಲಂಘನೆ – ಪ್ರತಿದಿನ ಸಿಸಿಟಿವಿ ಫೂಟೇಜ್ ಕೊಡುವಂತೆ ಸಿಸಿಬಿ ರೂಲ್ಸ್

Share This Article