ಒಂದೇ ತಿಂಗಳಲ್ಲಿ 6,085 ಕೋಟಿ GST ಸಂಗ್ರಹ – ಸಿಎಂ ಬೊಮ್ಮಾಯಿ

Public TV
1 Min Read

ಬೆಂಗಳೂರು: ಜನವರಿ ಒಂದೇ ತಿಂಗಳಲ್ಲಿ 6085 ಕೋಟಿ ರೂ. ಜಿಎಸ್‌ಟಿ (GST) ಸಂಗ್ರಹ ಮಾಡಿ ರಾಜ್ಯ ದಾಖಲೆ ಬರೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ (Karnataka) ಶೇ.30 ರಷ್ಟು ಅತ್ಯಧಿಕ ಬೆಳವಣಿಗೆ ಪ್ರಮಾಣ ಹೊಂದಿರುವ ರಾಜ್ಯವಾಗಿದೆ. ಇದನ್ನೂ ಓದಿ: ದಶಪಥ ರಸ್ತೆ ಕಾಮಗಾರಿಗೆ ಟ್ವೀಟ್ ಮೂಲಕ ಮೋದಿ ಮೆಚ್ಚುಗೆ

ತೆರಿಗೆ ಸಂಗ್ರಹದಲ್ಲಿ ಸುಧಾರಣೆ, ಹೆಚ್ಚಿನ ಕಣ್ಗಾವಲು, ಆರ್ಥಿಕತೆಯಲ್ಲಿ ಚೇತರಿಕೆ ಹಾಗೂ ತೆರಿಗೆದಾರರಲ್ಲಿ ಹೆಚ್ಚಿರುವ ಅನುಸರಣೆಯಿಂದಾಗಿ ಈ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಆದಾಯದ ಬೆಳವಣಿಗೆಯಿಂದಾಗಿ ಸರ್ಕಾರ ಈ ವರ್ಷ ಉತ್ತಮ ಆಯವ್ಯಯ ಮಂಡಿಸಲು ಅನುವು ಮಾಡಿಕೊಡಲಿದೆ ಎಂದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *