ವೃದ್ಧೆಯನ್ನು ಛತ್ರಿಯಿಂದ ಹೊಡೆದು ಕೊಂದ ವೃದ್ಧ!

Public TV
2 Min Read

ಜೈಪುರ: ರಾಜಸ್ಥಾನದ ಉದಯಪುರದಲ್ಲಿ (Rajasthan’s Udaipur) 60 ವರ್ಷದ ವ್ಯಕ್ತಿಯೊಬ್ಬ 85 ವರ್ಷದ ವೃದ್ಧೆಯ ಮೇಲೆ ಛತ್ರಿಯಿಂದ ಮನಬಂದಂತೆ ಹಲ್ಲೆಗೈದು ಹತ್ಯೆ ಮಾಡಿರುವ ಆಘಾತಕಾರಿ ವೀಡಿಯೋವೊಂದು ವೈರಲ್ ಆಗಿದೆ.

ಮೃತ ವೃದ್ಧೆಯನ್ನು ಕಲ್ಕಿ ಬಾಯಿ ಗಮೆತಿ ಎಂದು ಗುರುತಿಸಲಾಗಿದೆ. ವೃದ್ಧನು ವೃದ್ಧೆಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಅಲ್ಲಿಯೇ ಇದ್ದ ಜನ ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಈ ವೀಡಿಯೋ ವೈರಲ್ (Viral Video) ಆಗುತ್ತಿದೆ. ಇಬ್ಬರು ಅಪ್ರಾಪ್ತರು ವೀಡಿಯೋ ಮಾಡಿವುದರಲ್ಲಿ ಬ್ಯುಸಿಯಗಿದ್ದರೇ ಹೊರತು ವೃದ್ಧೆಯನ್ನು ಉಳಿಸಲು ಪ್ರಯತ್ನ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಕುಡಿದ ಮತ್ತಿನಲ್ಲಿ ವೃದ್ಧ ಆರೋಪಿ ಪ್ರತಾಪ್ ಸಿಂಹ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧೆಯ ಮೇಲೆ ಹಲ್ಲೆ ಮಾಡುವಾಗ ತಡೆಯಲು ಓರ್ವ ವ್ಯಕ್ತಿ ಯತ್ನಿಸಿದ್ದಾರೆ. ಆದರೆ ಸಿಂಗ್ ವ್ಯಕ್ತಿಯ ಮಾತನ್ನು ಕೇಳಿಸಿಕೊಳ್ಳದೇ ಛತ್ರಿಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ವಿರೋಧದ ನಡುವೆ ಅಂತರ್ಜಾತಿ ವಿವಾಹ- ಠಾಣೆ ಮೆಟ್ಟಿಲೇರಿದ ಜೋಡಿ

ವೀಡಿಯೋದಲ್ಲೇನಿದೆ..?: ಕಂಠಪೂರ್ತಿ ಕುಡಿದಿದ್ದ ಆರೋಪಿಯು ಮಹಿಳೆ ಪಕ್ಕದಲ್ಲಿ ಕುಳಿತುಕೊಂಡು ತಾನು ಶಿವನ ಅನುಯಾಯಿಯಾಗಿದ್ದು, ಅವನು ನನ್ನನ್ನು ನಿನ್ನ ಬಳಿ ಕಳುಹಿಸಿದ್ದಾನೆ ಎಂದು ಹೇಳುವುದನ್ನು ಕಾಣಬಹುದಾಗಿದೆ. ಅಲ್ಲದೆ ನೀನು ಮಹಾರಾಣಿ ಎಂದು ಹೇಳುತ್ತಾನೆ. ಬಳಿಕ ಇದ್ದಕ್ಕಿದ್ದಂತೆ ಆಕೆಯ ಎದೆಯ ಮೇಲೆ ಛತ್ರಿಯಂದ ಹೊಡೆಯುತ್ತಾನೆ. ಈ ವೇಳೆ ವೃದ್ಧೆ ನೆಲದ ಮೇಲೆ ಬೀಳುತ್ತಾಳೆ. ಆಗ ಆರೋಪಿ ಆಕೆಯ ಕೂದಲನ್ನು ಹಿಡಿದು ಎಳೆದುಕೊಂಡು ಹೋಗುತ್ತಾನೆ.

ದೂರದ, ಗುಡ್ಡಗಾಡು, ಬುಡಕಟ್ಟು ಪ್ರಾಬಲ್ಯದ ಪ್ರದೇಶವಾದ ಉದಯಪುರದ ಗೋಗುಂಡಾ ತಹಸಿಲ್‍ನಲ್ಲಿ ಈ ಪ್ರಕರಣ ನಡೆದಿದೆ. ವೃದ್ಧೆ ಒಬ್ಬರ ಮನೆಗೆ ಹೋಗುತ್ತಿದ್ದರು. ಆಗ ಪ್ರತಾಪ್ ಸಿಂಹ ಆಕೆಯನ್ನು ಭೇಟಿಯಾಗಿದ್ದಾನೆ. ಘಟನೆಯ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿ ಸ್ಥಳದಲ್ಲಿದ್ದರು ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ಭುವನ್ ಭೂಷಣ್ ತಿಳಿಸಿದ್ದಾರೆ.

ಮಾಟಗಾತಿ ಎಂಬ ಶಂಕೆಯಿಂದ ಪ್ರತಾಪ್ ಸಿಂಹ ಆಕೆಯನ್ನು ಕೊಂದಿದ್ದಾನೆ ಎಂಬ ವದಂತಿ ಹಬ್ಬಿದ್ದು, ಆದರೆ ಇದನ್ನು ಪೊಲೀಸರು ತಳ್ಳಿಹಾಕಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್