ಪಾರಿವಾಳ ನೋಡುವಾಗ ಆಯತಪ್ಪಿ ಬಿದ್ದ 6ರ ಬಾಲಕ

1 Min Read

ಕೊಪ್ಪಳ: ಪಾರಿವಾಳ ನೋಡಲು ಹೋಗಿ ಆಯತಪ್ಪಿ ಬಿದ್ದು ಬಾಲಕನೋರ್ವ ಮೊದಲನೇ ಮಹಡಿಯಿಂದ ಬಿದ್ದು ಗಾಯಗೊಂಡಿರುವ ಘಟನೆ ಕೊಪ್ಪಳದ (Koppal) ಹಮಾಲರ ಕಾಲೋನಿಯಲ್ಲಿ ನಡೆದಿದೆ.

ಗಾಯಗೊಂಡ ಬಾಲಕನನ್ನು ಹಮಾಲರ ಕಾಲೋನಿಯ ಅಬ್ಬಾಸ ಅಲಿ ಅವರ ಮಗ ಮಹ್ಮದ್ ಹ್ಯಾರಿಸ್ (6) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ತುಂಗಾ ನದಿಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಸಾವು

ಮೊದಲನೇ ಮಹಡಿಯಲ್ಲಿ ಬಾಲಕ ಆಟವಾಡುತ್ತಿದ್ದ. ಈ ವೇಳೆ ಪಾರಿವಾಳವನ್ನು ನೋಡಿ, ಅದನ್ನು ಹಿಡಿಯಲು ಮುಂದಾಗಿದ್ದಾನೆ. ಈ ವೇಳೆ ಮಹಡಿಯ ಗ್ರಿಲ್ ಬಳಿ ನಿಂತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಪರಿಣಾಮ ತಲೆಗೆ ಪೆಟ್ಟುಬಿದ್ದಿದ್ದು, ಕೂಡಲೇ ಪೋಷಕರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಬಾಲಕ ಕೆಳಗೆ ಬೀಳುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಲೆಗೆ ಪಟ್ಟಾಗಿದೆ, ಯಾವುದೇ ಪ್ರಾಣಾಪಾಯ ಇಲ್ಲ ಎಂದ ಕುಟುಂಬಸ್ಥರು ತಿಳಿಸಿದ್ದಾರೆ. ಕೊಪ್ಪಳದ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.ಇದನ್ನೂ ಓದಿ: ಮೈಸೂರು | ಸರಗೂರು ತಾಲೂಕು ಕಚೇರಿಯಲ್ಲಿ RDX ಸ್ಫೋಟಕ ಇಟ್ಟಿರುವುದಾಗಿ ಬೆದರಿಕೆ

Share This Article