ಭೋಪಾಲ್: ಆರು ಶಂಕಿತ ಉಗ್ರರನ್ನು ಪೊಲೀಸರು ಸ್ಫೋಟಕಗಳೊಂದಿಗೆ ಬಂಧಿಸಿರುವುದು ಭೋಪಾಲ್‍ನಲ್ಲಿ ಬೆಳಕಿಗೆ ಬಂದಿದೆ.
ಭಯೋತ್ಪಾದಕರೆಂದು ಶಂಕಿಸಲಾದ ಆರು ಜನರನ್ನು ಮಧ್ಯಪ್ರದೇಶದ ಭೋಪಾಲ್‍ನ ಎರಡು ಸ್ಥಳಗಳಲ್ಲಿ ಬಂಧಿಸಲಾಗಿದೆ ಎಂದು ಪೆÇಲೀಸ್ ಮೂಲಗಳು ಇಂದು ತಿಳಿಸಿವೆ. ಪೊಲೀಸರ ಈ ಕುರಿತು ಮಾಹಿತಿ ನೀಡಿದ್ದು, ಆರೋಪಿಗಳು ವಾಸಿಸುತ್ತಿದ್ದ ಎರಡೂ ಸ್ಥಳಗಳಿಂದ ಲ್ಯಾಪ್‍ಟಾಪ್, ಧಾರ್ಮಿಕ ಸಾಹಿತ್ಯ ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಸೈಕಲ್ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿ ಕಿಡ್ನಾಪ್
ಕರೋಂಡ್ ಮತ್ತು ಐಶ್‍ಬಾಗ್ ಪ್ರದೇಶದ ಎರಡು ಮನೆಗಳಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಐಶ್‍ಬಾಗ್ ಪ್ರದೇಶದಲ್ಲಿ ಬಂಧಿತರಾದ ಇಬ್ಬರನ್ನು ಸ್ಥಳೀಯರು ಅಹ್ಮದ್ ಮತ್ತು ಮುಫ್ತಿ ಸಾಹಬ್ ಎಂದು ಗುರುತಿಸಿದ್ದಾರೆ.
ಆರೋಪಿಗಳು ಕಳೆದ ಮೂರು ತಿಂಗಳಿನಿಂದ ಹೆಚ್ಚು ಅಂತಸ್ತು ಹೊಂದಿದ್ದ ಬಿಲ್ಡಿಂಗ್‍ನಲ್ಲಿ ವಾಸಿಸುತ್ತಿದ್ದರು. ಪೊಲೀಸರು ಹೆಚ್ಚು ಪರಿಶೀಲನೆ ಮಾಡುವುದಿಲ್ಲ ಎಂದು ಅರಿತುಕೊಂಡೆ ಈ ಪ್ರದೇಶಗಳಲ್ಲಿ ವಾಸುತ್ತಿದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಾಲಿ ಎಂಎಲ್‍ಸಿ ಅರುಣ್ ಶಹಾಪುರ ವಿರುದ್ಧ ಅಸಮಾಧಾನ ಸ್ಪೋಟ…!